ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಿ ಶಾಕ್‌ ನೀಡಿದ ಆರ್‌ ಅಶ್ವಿನ್‌!

ಭಾರತ ತಂಡದ ಮಾಜಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಈ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 221 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಐಪಿಎಲ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಿದ ಆರ್‌ ಅಶ್ವಿನ್‌

ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಆರ್‌ ಅಶ್ವಿನ್‌.

Profile Ramesh Kote Aug 27, 2025 4:06 PM

ನವದೆಹಲಿ: ಭಾರತದ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL) ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಿದ್ದಾರೆ. ಅವರು ಆಗಸ್ಟ್‌ 27 ರಂದು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸ್ಪಿನ್‌ ದಂತಕತೆ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 221 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿ ಅಶ್ವಿನ್‌, ಐದು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಪರ ಆಡಿದ್ದರು.

"ವಿಶೇಷ ದಿನ ಹಾಗೂ ವಿಶೇಷ ಆರಂಭ. ಪ್ರತಿಯೊಂದು ಅಂತ್ಯ ಹೊಸ ಆರಂಭವನ್ನು ಪಡೆದಿರುತ್ತದೆ, ನನ್ನ ಐಪಿಎಲ್‌ ಕ್ರಿಕೆಟ್‌ ಇಂದಿಗೆ (ಆಗಸ್ಟ್‌ 27) ಅಂತ್ಯವಾಗಿದೆ. ಆದರೆ, ವಿಶ್ವದ ವಿವಿಧ ಲೀಗ್‌ಗಳ ಸುತ್ತ ಆಟದ ಅನ್ವೇಷಕನಾಗಿ ನನ್ನ ಸಮಯ ಇಂದಿನಿಂದ ಪ್ರಾರಂಭವಾಗುತ್ತದೆ. ಕಳೆದ ವರ್ಷಗಳಲ್ಲಿನ ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐಗೆ ಅವರು ಇಲ್ಲಿಯವರೆಗೆ ನನಗೆ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮುಂದಿರುವುದನ್ನು ಆನಂದಿಸಲು ಮತ್ತು ಹೆಚ್ಚಿನದನ್ನು ಪಡೆಯಲು ಎದುರು ನೋಡುತ್ತಿದ್ದೇನೆ," ಎಂದು ಅಶ್ವಿನ್ ಬುಧವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ʻದಿ ವೈಟ್‌ ವಾಕರ್‌ʼ: ಚೇತೇಶ್ವರ್‌ ಪೂಜಾರ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಆರ್‌ ಅಶ್ವಿನ್‌!

ಆರ್‌ ಅಶ್ವಿನ್‌ ಅವರು ಐದು ತಂಡಗಳ ಪರ ಐಪಿಎಲ್‌ ಆಡಿದ್ದಾರೆ. ಇದರ ಜೊತೆಗೆ ಇವರು ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದಾರೆ. ಇವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌, ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆರ್‌ ಅಶ್ವಿನ್‌ ಐದನೇ ಬೌಲರ್‌ ಆಗಿದ್ದಾರೆ. ಯುಜ್ವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ಸುನೀಲ್‌ ನರೇನ್‌ ಹಾಗೂ ಪಿಯೂಷ್‌ ಚಾವ್ಲಾ ಅವರು ಈ ಪಟ್ಟಿಯಲ್ಲಿ ಆರ್‌ ಅಶ್ವಿನ್‌ ಅವರಿಗಿಂತ ಮೇಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ಬಲವಾದ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಆರ್‌ ಅಶ್ವಿನ್‌ ಅವರ 2025ರ ಐಪಿಎಲ್‌ ಸೀಸನ್‌

ಮಾಜಿ ಆಫ್‌ ಸ್ಪಿನ್ನರ್‌ ತಮ್ಮ ಕೊನೆಯ ಐಪಿಎಲ್‌ ಪಂದ್ಯವನ್ನು ತವರು ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದಾರೆ. ಅವರು ಕಳೆದ ಸೀಸನ್‌ನಲ್ಲಿ 9 ಪಂದ್ಯಗಳಿಂದ 33 ರನ್‌ ಗಳಿಸುವ ಜೊತೆಗೆ 7 ವಿಕೆಟ್‌ ಕಿತ್ತಿದ್ದರು.