IND vs NZ: 37 ರನ್ ಗಳಿಸಿ ಕೇನ್ ವಿಲಿಯಮ್ಸನ್ ದಾಖಲೆ ಮುರಿದ ರಚಿನ್ ರವೀಂದ್ರ!
Rachin Ravindra breaks Kane Williamson Record: ಭಾರತದ ವಿರುದ್ಧ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕ ರಚಿನ್ ರವೀಂದ್ರ 37 ರನ್ ಗಳಿಸಿದರು. ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಏಕೈಕ ಆವೃತ್ತಿಯಲ್ಲಿ 250ಕ್ಕೂ ಅಧಿಕ ಮೊತ್ತವನ್ನು ಕಲೆ ಹಾಕಿದ ಮೊದಲ ಕಿವೀಸ್ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ಕೇನ್ ವಿಲಿಯಮ್ಸನ್ ದಾಖಲೆ ಮುರಿದ ರಚಿನ್ ರವೀಂದ್ರ.

ದುಬೈ: ಭಾರತದ ವಿರುದ್ದದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ (Champions Trophy 2025) ಫೈನಲ್ ಪಂದ್ಯದಲ್ಲಿ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರೂ ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ (Rachin Ravindra) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಕಿವೀಸ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ರಚಿನ್ ರವೀಂದ್ರ ಕೀ ಆಟಗಾರು. ಈ ಹಿನ್ನೆಲೆಯಲ್ಲಿ ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ (IND vs NZ) ಅವರ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಇವರನ್ನು ಕುಲ್ದೀಪ್ ಯಾದವ್ ಗೂಗ್ಲಿ ಎಸೆತದ ಮೂಲಕ ಔಟ್ ಮಾಡಿದರು.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಇನಿಂಗ್ಸ್ ಆರಂಭಿಸಿದ ರಚಿನ್ ರವೀಂದ್ರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಅತ್ಯುತ್ತಮವಾಗಿ ಎದುರಿಸಿದ ಇವರು 29 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 37 ರನ್ ಗಳಿಸಿ ಉತ್ತಮ ಆರಂಭ ಪಡದಿದ್ದರು ಹಾಗೂ ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ಮೂಡಿಸಿದ್ದರು. ಆದರೆ, ಕುಲ್ದೀಪ್ ಯಾದವ್ ಎಸೆದ ಗೂಗ್ಲಿ ಎಸೆತವನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿ ಬೌಲ್ಡ್ ಆದರು. ಆ ಮೂಲಕ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು.
IND vs NZ: ಡ್ಯಾರಿಲ್-ಬ್ರೆಸ್‌ವೆಲ್ ಫಿಫ್ಟಿ, ಭಾರತಕ್ಕೆ 252 ರನ್ ಸ್ಪರ್ಧಾತ್ಮಕ ಗುರಿ ನೀಡಿದ ಕಿವೀಸ್!
ಕಿವೀಸ್ ಪರ ನೂತನ ದಾಖಲೆ ಬರೆದ ರಚಿನ್ ರವೀಂದ್ರ
37 ರನ್ ಗಳಿಸಿ ವಿಕೆಟ್ ಒಪ್ಪಿಸಿದರೂ ರಚಿನ್ ರವೀಂದ್ರ ನ್ಯೂಜಿಲೆಂಡ್ ಪರ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 263 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಏಕೈಕ ಆವೃತ್ತಿಯಲ್ಲಿ 250ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ ಮೊದಲ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರಚಿನ್ ರವೀಂದ್ರ ಬರೆದಿದ್ದಾರೆ. ಆ ಮೂಲಕ ಕೇನ್ ವಿಲಿಯಮ್ಸನ್ ದಾಖಲೆಯನ್ನು ಮುರಿದಿದ್ದಾರೆ. ವಿಲಿಯಮ್ಸನ್ ಅವರು 2017ರಲ್ಲಿ 244 ರನ್‌ಗಳನ್ನು ಕಲೆ ಹಾಕಿದ್ದರು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಏಕೈಕ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕಿವೀಸ್ ಬ್ಯಾಟರ್ಸ್
ರಚಿನ್ ರವೀಂದ್ರ - 2025 ರಲ್ಲಿ 263 ರನ್‌ಗಳು
ಕೇನ್ ವಿಲಿಯಮ್ಸನ್ - 2017 ರಲ್ಲಿ 244 ರನ್‌ಗಳು
ರೋಜರ್ ಟ್ವೋಸ್ - 2000 ರಲ್ಲಿ 201 ರನ್‌ಗಳು
ಕೇನ್ ವಿಲಿಯಮ್ಸನ್ - 2025 ರಲ್ಲಿ 200 ರನ್‌ಗಳು
ಟಾಮ್ ಲೇಥಮ್ - 2025 ರಲ್ಲಿ 191 ರನ್‌ಗಳು
ಮಾರ್ಟಿನ್ ಗುಪ್ಟಿಲ್ - 2009 ರಲ್ಲಿ 191 ರನ್‌ಗಳು
ಸ್ಟೀಫನ್ ಫ್ಲೆಮಿಂಗ್ - 2006 ರಲ್ಲಿ 184 ರನ್‌ಗಳು
IND vs NZ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಕಳೆದುಕೊಂಡಿದ್ದಕ್ಕೆ ಕಣ್ಣೀರಿಟ್ಟ ಮ್ಯಾಟ್ ಹೆನ್ರಿ! ವಿಡಿಯೊ
ಐಸಿಸಿ ಟೂರ್ನಿಗಳಲ್ಲಿ ರಚಿನ್ ರವೀಂದ್ರ ಶತಕಗಳ ದಾಖಲೆ
ಪ್ರಸಕ್ತ ಆವೃತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರಚಿನ್ ರವೀಂದ್ರ ಶತಕಗಳ ದಾಖಲೆಯನ್ನು ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಲೀಗ್ ಪಂದ್ಯದಲ್ಲಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯಗಳಲ್ಲಿ ರಚಿನ್ ಎರಡು ಶತಕಗಳನ್ನು ಬಾರಿಸಿದ್ದರು. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಚಿನ್ ರವೀಂದ್ರ ಮೂರು ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದ ನೇಥನ್ ಆಸ್ಟ್ಲೆ ದಾಖಲೆಯನ್ನು ಮುರಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ದ ಸೆಮಿಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ತಮ್ಮ ನಾಲ್ಕನೇ ಶತಕವನ್ನು ಬಾರಿಸಿದ್ದರು.