RCB vs DC: ತವರು ಅಂಗಣದಲ್ಲಿ ಆರ್‌ಸಿಬಿ ಗೆಲುವಿಗೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್!
RCB vs DC Highlights: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಸೋಲು ಅನುಭವಿಸಿತು. ಟ್ರಿಸ್ಟನ್ ಸ್ಟಬ್ಸ್ ಹಾಗೂ ಕೆಎಲ್ ರಾಹುಲ್ ಅರ್ಧಶತಕಗಳ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಎದುರು 6 ವಿಕೆಟ್ ಗೆಲುವು ಪಡೆಯಿತು.
ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತ ಆರ್‌ಸಿಬಿ. -
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಅಂಗಣದ ಗೆಲುವಿನ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC) ಬ್ರೇಕ್ ಹಾಕಿತು. ಬ್ಯಾಟಿಂಗ್ ವೈಫಲ್ಯದಿಂದಾಗಿ ಆರ್‌ಸಿಬಿ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 26ನೇ ಪಂದ್ಯದಲ್ಲಿ ಎದುರಾಳಿ ಡಿಸಿ ಎದುರು 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು ತಂಡಕ್ಕೆ ಇದು ಈ ಸೀಸನ್‌ನಲ್ಲಿ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಣಿದಿತ್ತು. ಇನ್ನು ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಡೆಲ್ಲಿ ತಂಡ ಗೆಲುವಿನ ಲಯಕ್ಕೆ ಮರಳಿತು.
ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತನ್ನ 100ನೇ ಪಂದ್ಯದಲ್ಲಿ ನೀಡಿದ್ದ 176 ರನ್‌ಗಳ ಗರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕೆಎಲ್ ರಾಹುಲ್ (57 ರನ್) ಹಾಗೂ ಟ್ರಿಸ್ಟನ್ ಸ್ಟಬ್ಸ್ (60 ರನ್) ಅವರ ಅರ್ಧಶತಕಗಳ ಬಲದಿಂದ 19.5 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿ ಗೆದ್ದು ಬೀಗಿತು. ಕಡಿಮೆ ಮೊತ್ತದ ಗುರಿಯನ್ನು ನೀಡಿದರೂ ಆರ್‌ಸಿಬಿ ಬೌಲರ್‌ಗಳು ನಾಲ್ಕು ನಿರ್ಣಾಯಕ ವಿಕೆಟ್‌ಗಳನ್ನು ಪಡಯುವುದರ ಜೊತೆಗೆ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದ್ದರು.
IPL 2026: 26 ರನ್‌ಗೆ ಔಟಾದರೂ ವಿಶೇಷ ದಾಖಲೆಯನ್ನು ಬರೆದ ಟಿಮ್ ಡೇವಿಡ್!
ಕೊನೆಯ ಓವರ್‌ನಲ್ಲಿ ಡಿಸಿಗೆ ಗೆಲ್ಲಲು 15 ರನ್‌ಗಳ ಅಗತ್ಯವಿತ್ತು. ರೊಮ್ಯಾರಿಯೊ ಶೆಫರ್ಡ್ ಆರಂಭಿಕ ಎರಡು ಎಸೆತಗಳನ್ನು ಸರಿಯಾಗಿ ನಿರ್ವಹಿಸಿದರೂ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಸಿಕ್ಸರ್ ಹಾಗೂ ಐದನೇ ಎಸೆತದಲ್ಲಿ ಬೌಂಡರಿ ಹೊಡೆಸಿಕೊಂಡರು. ಅಂತಿಮವಾಗಿ ಆರ್‌ಸಿಬಿ ಸೋಲು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಪರಿಣಾಮಕಾರಿಯಾಗಿ ಬೌಲ್ ಮಾಡಿ 4 ಓವರ್‌ಗಳಿಗೆ 26 ರನ್ ನೀಡಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದರು.
𝗠𝗮𝗴𝗻𝗶𝗳𝗶𝗰𝗲𝗻𝘁 𝗠𝗶𝗹𝗹𝗲𝗿 🫡
— IndianPremierLeague (@IPL) April 18, 2026
David Miller stands up tall and hits them big to take @DelhiCapitals to a thrilling victory 💥👏
Scorecard ▶️ https://t.co/vfJ6SccA9T#TATAIPL | #KhelBindaas | #RCBvDC | @DavidMillerSA12 pic.twitter.com/I6FXLeOhXU
ಕೆಎಲ್ ರಾಹುಲ್, ಟ್ರಿಸ್ಟನ್ ಸ್ಟಬ್ಸ್ ಅರ್ಧಶತಕ
ಚೇಸಿಂಗ್‌ನ ಆರಂಭದಲ್ಲಿ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಕಿತ್ತು ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಆ ಮೂಲಕ ಡಿಸಿ ಕೇವಲ 18 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ 69 ರನ್‌ಗಳ ಜೊತೆಯಾಟವಾಡಿದರು. ಕಎಲ್ ರಾಹುಲ್ ತಮ್ಮ ಬ್ಯಾಟಿಂಗ್‌ನಲ್ಲಿ 34 ಎಸೆತಗಳಲ್ಲಿ 57 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ, ಸ್ಟಬ್ಸ್ ಹಾಗೂ ಅಕ್ಷರ್ ಪಟೇಲ್ ಐದನೇ ವಿಕೆಟ್‌ಗೆ 47 ರನ್ ಗಳಿಸಿದರು. ಅಕ್ಷರ್ ಪಟೇಲ್ 26 ರನ್ ಗಳಿಸಿದ ಬಳಿಕ ರಿಟೈರ್ಡ್ ಹರ್ಟ್ ಆದರು. ಆದರೆ, ಕೊನೆಯವರೆಗೂ ಬ್ಯಾಟ್ ಮಾಡಿದ ಟ್ರಿಸ್ಟನ್ ಸ್ಟಬ್ಸ್ 47 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದರು ಹಾಗೂ ಡೇವಿಡ್ ಮಿಲ್ಲರ್ (22*) ಅವರ ಜೊತೆಗೆ 45 ರನ್ ಜೊತೆಯಾಟವಾಡಿದರು. ಇದರೊಂದಿಗೆ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Back to back wins at the Chinnaswamy 💙❤️ pic.twitter.com/8eJd4sp3w7
— Delhi Capitals (@DelhiCapitals) April 18, 2026
ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಫಿಲ್ ಸಾಲ್ಟ್ (63 ರನ್) ಬಿಟ್ಟರೆ ಇನ್ನುಳಿದಂತೆ ವಿರಾಟ್ ಕೊಹ್ಲಿ (19), ದೇವದತ್ ಪಡಿಕ್ಕಲ್ (18), ಟಿಮ್ ಡೇವಿಡ್ (26) ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಇನ್ನು ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ ಹಾಗೂ ರೊಮ್ಯಾರಿಯೊ ಶೆಫರ್ಡ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇದರ ಶ್ರೇಯ ಡೆಲ್ಲಿ ಬೌಲರ್‌ಗಳಿಗೆ ಸಲ್ಲಬೇಕು.
In an ever-changing world, 𝗕𝗛𝗨𝗩𝗜™️ remains constant. 💚
— Royal Challengers Bengaluru (@RCBTweets) April 18, 2026
Thanks for setting up the fight. 🫡 pic.twitter.com/tP7iUodx5B
ಫಿಲ್ ಸಾಲ್ಟ್ ಎರಡನೇ ಅರ್ಧಶತಕ
ಆರ್‌ಸಿಬಿ ಪರ ಈ ಸೀಸನ್‌ನಲ್ಲಿ ಫಿಲ್ ಸಾಲ್ಟ್ ಎರಡನೇ ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 38 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 63 ರನ್ ಗಳಿಸಿದರು ಹಾಗೂ ವಿರಾಟ್ ಕೊಹ್ಲಿ ಜೊತೆ 52 ರನ್ ಮತ್ತು ದೇವದತ್ ಪಡಿಕ್ಕಲ್ ಜೊತೆ 47 ರನ್‌ಗಳ ಜೊತೆಯಾಟವನ್ನು ಆಡಿದರು. ಆರ್‌ಸಿಬಿ ಒಂದು ಹಂತದಲ್ಲಿ 10ರ ಸರಾಸರಿಯಲ್ಲಿ ರನ್ ಗಳಿಸಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಹಾಗಾಗಿ ಕೊನೆಯಲ್ಲಿ ಕೇವಲ 28 ರನ್‌ಗಳನ್ನು ಮಾತ್ರ ಗಳಿಸಲು ಸೀಮಿತವಾಗಿತ್ತು.
ಡೆಲ್ಲಿ ಪರ ಲುಂಗಿ ಎನ್ಗಿಡಿ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡೆರಡು ವಿಕೆಟ್ ಕಬಳಿಸಿದರು.
IPL 2026: ಜಸ್‌ಪ್ರೀತ್ ಬುಮ್ರಾ ಎದುರಿಸುತ್ತಿರುವ ಸಮಸ್ಯೆಯನ್ನು ತಿಳಿಸಿದ ಇರ್ಫಾನ್ ಪಠಾಣ್!
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಿಗೆ 175-8 (ಫಿಲ್ ಸಾಲ್ಟ್ 63 ರನ್, ಟಿಮ್ ಡೇವಿಡ್ 26; ಅಕ್ಷರ್ ಪಟೇಲ್ 18ಕ್ಕೆ 2, ಲುಂಗಿ ಎನ್ಗಿಡಿ 39ಕ್ಕೆ 2, ಕುಲ್ದೀಪ್ ಯಾದವ್ 32ಕ್ಕೆ 2)
ಡೆಲ್ಲಿ ಕ್ಯಾಪಿಟಲ್ಸ್: 19.5 ಓವರ್‌ಗಳಿಗೆ 179-4 (ಟ್ರಿಸ್ಟನ್ ಸ್ಟಬ್ಸ್ 60* ರನ್, ಕೆಎಲ್ ರಾಹುಲ್ 57, ಅಕ್ಷರ್ ಪಟೇಲ್ 26, ಡೇವಿಡ್ ಮಿಲ್ಲರ್ 22*)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಟ್ರಿಸ್ಟನ್ ಸ್ಟಬ್ಸ್