ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಇನ್ನೂ ನಮ್ಮ ಕೆಲಸ ಮುಗಿದಿಲ್ಲ, ಹ್ಯಾಟ್ರಿಕ್‌ ಗೆಲುವು ನಮ್ಮ ಗುರಿʼ: ರಜತ್‌ ಪಾಟಿದಾರ್‌ ಮತ್ತೊಂದು ಶಪಥ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಬೇಕೆಂದು ನಾಯಕ ರಜತ್‌ ಪಾಟಿದಾರ್‌ ಹೇಳಿದ್ದಾರೆ. ಮುಂದಿನ ವರ್ಷವೂ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಯಾವುದೇ ತಂಡದಿಂದ ಸಾಧ್ಯವಾಗದ ದಾಖಲೆಯನ್ನು ಬರೆಯಬೇಕೆಂದು ಅವರು ಹೇಳಿದ್ದಾರೆ.

ಹ್ಯಾಟ್ರಿಕ್‌ ಗೆಲುವು ನಮ್ಮ ಗುರಿ: ಶಪಥ ಮಾಡಿದ ರಜತ್‌ ಪಾಟಿದಾರ್‌!

ಹ್ಯಾಟ್ರಿಕ್‌ ಕಪ್‌ ಗೆಲ್ಲುವ ಇಂಗಿತ ವ್ಯಕ್ತಪಡಿಸಿದ ರಜತ್‌ ಪಾಟಿದಾರ್‌. -

Profile
Ramesh Kote Jun 1, 2026 9:31 PM

ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB) ಹ್ಯಾಟ್ರಿಕ್‌ ಗೆಲುವು ಸಾಧಿಸಬೇಕೆಂದು ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ (Rajat Patidar) ಹೇಳಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್‌ ಎದುರು 5 ವಿಕೆಟ್‌ ಸಾಧಿಸಿದ ಬಳಿಕ ಆರ್‌ಸಿಬಿ ತಂಡ ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಸತತವಾಗಿ ಎರಡನೇ ಟ್ರೋಫಿ ಗೆದ್ದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳ ಸಾಲಿಗೆ ಬೆಂಗಳೂರು ತಂಡ ಸೇರ್ಪಡೆಯಾಗುತ್ತು.

ಸಿಎಸ್‌ಕೆ ಹಾಗೂ ಎಂಐ ತಂಡಗಳು ತಲಾ ಐದು ಕಪ್‌ಗಳನ್ನು ಗೆದ್ದಿದೆ. ಆದರೆ, ಯಾವುದೇ ತಂಡ ಇನ್ನೂ ಹ್ಯಾಟ್ರಿಕ್‌ ಕಪ್‌ ಗೆದ್ದಿಲ್ಲ. ಆದರೆ, ಇದೀಗ ತಮ್ಮ 33ನೇ ಹುಟ್ಟು ಹಬ್ಬದ ದಿನವೇ ಆರ್‌ಸಿಬಿಗೆ ಎರಡನೇ ಕಪ್‌ ಗೆದ್ದುಕೊಟ್ಟ ರಜತ್‌ ಪಾಟಿದಾರ್‌, ಮುಂದಿನ ಆವೃತ್ತಿಯಲ್ಲಿಯೂ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಫೈನಲ್‌ ಪಂದ್ಯದ ಸೋಲಿನ ಬೇಸರದಲ್ಲಿದ್ದರೂ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿ ಫ್ಯಾನ್ಸ್‌ ಹೃದಯ ಗೆದ್ದ ಶುಭಮನ್‌ ಗಿಲ್‌!

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರಜತ್‌ ಪಾಟಿದಾರ್‌, "ತುಂಬಾ ಉತ್ತಮ ಭಾವನೆ ಉಂಟಾಗುತ್ತಿದೆ ಹಾಗೂ ಇದು ನನ್ನ ಹುಟ್ಟು ಹಬ್ಬಕ್ಕೆ ಕೊಡುಗೆ. ಇದಕ್ಕಿಂತ ಉತ್ತಮ ಉಡುಗೊರೆಯನ್ನು ನಾನು ಕೇಳಿಕೊಳ್ಳಲು ಸಾಧ್ಯವಿಲ್ಲ. ಈ ಸಾಧನೆಯಿಂದ ನನಗೆ ಅಪಾರ ಸಂತೋಷವಾಗಿದೆ. ಆದರೆ ನಾನು ಯಾವಾಗಲೂ ಪ್ರಸ್ತುತ ಕ್ಷಣದ ಮೇಲೆಯೇ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತೇನೆ. ನಾವು 2025ರಲ್ಲಿ ಗೆದ್ದೆವು, 2026ರಲ್ಲೂ ಮತ್ತೆ ಚಾಂಪಿಯನ್‌ಗಳಾದೆವು. ಈ ಯಶಸ್ಸನ್ನು ಖಂಡಿತವಾಗಿ ಸಂಭ್ರಮಿಸುತ್ತೇವೆ. ಆದರೆ ಶೀಘ್ರದಲ್ಲೇ ನಮ್ಮ ಗಮನ ಸತತ ಮೂರನೇ ಪ್ರಶಸ್ತಿಯನ್ನು ಹೇಗೆ ಗೆಲ್ಲಬಹುದು ಎಂಬುದರ ಕಡೆಗೆ ತಿರುಗಲಿದೆ," ಎಂದು ಅವರು ಹೇಳಿದರು.

2025ರಲ್ಲಿ ನಮ್ಮ ಮೇಲೆ ತುಂಬಾ ಒತ್ತಡವಿತ್ತು: ರಜತ್‌

2024ರವರೆಗೂ ಆರ್‌ಸಿಬಿ ಒಂದೇ ಒಂದು ಕಪ್‌ ಗೆದ್ದಿರಲಿಲ್ಲ ಹಾಗೂ ತಂಡದಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ಇದ್ದರೂ, ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಏನೂ ಸಾಧನೆ ಮಾಡದವರಾಗಿ ನಿರಾಶೆಯನ್ನು ಹೊಂದಿದ್ದರು. ಆದರೆ, ರಜತ್‌ ಪಾಟಿದಾರ್‌ ಅವರ ನಾಯಕತ್ವದಲ್ಲಿ ಆರ್‌ಸಿಬಿ ತಂಡ 2025ರಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದೇ ಅಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದು ಆರ್‌ಸಿಬಿ 17 ವರ್ಷಗಳ ಕನಸನ್ನು ನನಸು ಮಾಡಿಕೊಂಡಿತ್ತು. ಇದೀಗ ಸತತ ಎರಡನೇ ಬಾರಿಯೂ ಬೆಂಗಳೂರು ತಂಡ ಚಾಂಪಿಯನ್ಸ್‌ ಪಟ್ಟವನ್ನು ಉಳಿಸಿಕೊಂಡಿದೆ.

ʻನಾವು 180 ರನ್‌ ಕಲೆ ಹಾಕಿದ್ರೆ ಕಥೆ ಬೇರೆ ಇರುತ್ತಿತ್ತುʼ: ಫೈನಲ್‌ ಸೋಲಿಗೆ ಕಾರಣ ತಿಳಿಸಿದ ಶುಭಮನ್‌ ಗಿಲ್‌!

"ಈ ವರ್ಷಕ್ಕೆ ಹೋಲಿಕೆ ಮಾಡಿದರೆ, ಕಳೆದ ವರ್ಷ 2025ರಲ್ಲಿ ನಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು. ಈ ವರ್ಷ ನಾವು ಟೂರ್ನಿಯುದ್ದಕ್ಕೂ ಆಡಿದ ಹಾದಿಯನ್ನು ನೋಡಿದಾಗ, ಇದು ಅತ್ಯಂತ ಶಾಂತ ಸ್ವಭಾವದಿಂದ ಕೂಡಿತ್ತು. ನಾವು ಕೇವಲ ಉತ್ತಮವಾಗಿ ಮಾತ್ರ ಆಡಲಿಲ್ಲ; ಆದರೆ ಪ್ರಾಬಲ್ಯ ಸಾಧಿಸಿದ್ದೇವೆ. ಈ ದರ್ಜೆಯಲ್ಲಿ ನಾವು ಉತ್ತಮ ಪ್ರದರ್ಶನವನ್ನು ತೋರಿದರೆ, ನಮ್ಮ ವಿಶ್ವಾಸ ಹೆಚ್ಚಾಗಿದೆ ಹಾಗೂ ಇದರ ಸಹಾಯದಿಂದ ಎರಡನೇ ಕಪ್‌ ಗೆದ್ದಿದ್ದೇವೆ," ಎಂದು ಆರ್‌ಸಿಬಿ ಕಪ್ತಾನ ತಿಳಿಸಿದ್ದಾರೆ.

"ನನ್ನ ನಾಯಕತ್ವದ ಶೈಲಿ ವಿಭಿನ್ನವಾಗಿದೆ. ನಾನು ತುಂಬಾ ದುಬಾರಿಯಾಗಿದ್ದೇನೆ, ಆದರೆ ಪಂದ್ಯದ ಸನ್ನಿವೇಶ ಬಗ್ಗೆ ನನಗೆ ಸದಾ ಅರಿವಿತ್ತು. ಈ ಸಂದರ್ಭದಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಹಾಗೂ ಆಟಗಾರರನ್ನು ಬೆಂಬಲಿಸುವುದು ತುಂಬಾ ಮುಖ್ಯವಾಗುತ್ತದೆ. ಈ ಪ್ರಯಾಣದುದಕ್ಕೂ ಅವರು ಬೆಂಬಲ ಸಾಕಷ್ಟು ವಿಶ್ವಾಸವನ್ನು ಮೂಡಿಸಿದೆ," ಎಂದು ರಜತ್‌ ಪಾಟಿದಾರ್‌ ತಮ್ಮ ಮಾತನ್ನು ಮುಗಿಸಿದರು.