ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ವಿಧಿವಶರಾದ ತಮ್ಮ ತಂದೆಗೆ ಭಾವನಾತ್ಮಕ ಸಂದೇಶ ರವಾನಿಸಿದ ರಿಂಕು ಸಿಂಗ್‌!

Rinku Singh Emotionla note: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಬಳಿಕ ಭಾರತ ತಂಡದ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಅವರು ಇತ್ತೀಚೆಗೆ ವಿಧಿವಶರಾದ ತಮ್ಮ ತಂದೆಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅವರು ಭಾವನಾತ್ಮಕ ಪೋಸ್ಟ್‌ ಬರೆದಿದ್ದಾರೆ.

ತಮ್ಮ ತಂದೆಗೆ ಭಾವನಾತ್ಮಕ ಸಂದೇಶ ರವಾನಿಸಿದ ರಿಂಕು ಸಿಂಗ್‌.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ (India) ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ (Rinku Singh) ಅವರು ವಿಧಿವಶರಾದ ತಮ್ಮ ಪ್ರೀತಿಯ ತಂದೆಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ 96 ರನ್‌ಗಳಿಂದ ಗೆದ್ದು ಬೀಗಿತ್ತು ಹಾಗೂ ಮೂರನೇ ಬಾರಿ ಚುಟುಕು ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಭಾರತ ತಂಡದಿಂದ ಮನೆಗೆ ಮರಳಿದ ತಕ್ಷಣ ರಿಂಕು ಸಿಂಗ್‌ ಕಳೆದ ತಿಂಗಳು ಕೊನೆಯುಸಿರೆಳೆದಿದ್ದ ತಂದೆಯನ್ನು ನೆನೆದು ಭಾವುಕರಾದರು.

ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಅವರ ತಂದೆ ನಾಲ್ಕನೇ ಹಂತದ ಕರಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಗ್ರೇಟರ್‌ ನೋಯ್ಡಾದ ಯಥಾರ್ಥ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಫೆಬ್ರವರಿ 27 ರಂದು ಕೊನೆಯುಸಿರೆಳೆದಿದ್ದರು. ಈ ವೇಳೆ ಚೆನ್ನೈನಲ್ಲಿದ್ದ ರಿಂಕು ಸಿಂಗ್‌ ಅವರು ತಕ್ಷಣ ನವದೆಹಲಿಗೆ ತೆರಳಿದ್ದರು ಹಾಗೂ ಜಿಂಬಾಬ್ವೆ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅವರು ತಮ್ಮ ತಂದೆಯ ವಿಧಿ ವಿಧಾನ ಕಾರ್ಯಗಳನ್ನು ಮುಗಿಸಿ ಪುನಃ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದರು.

T20 World Cup: ಡ್ಯಾರಿಲ್‌ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಹೊಡೆದ ಅರ್ಷದೀಪ್‌ ಸಿಂಗ್‌ಗೆ ದಂಡ!

ತಮ್ಮ ತಂದೆಯ ನೋವಿನಲ್ಲಿಯೂ ರಿಂಕು ಸಿಂಗ್‌ ಭಾರತ ತಂಡದ ಪರ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಹಾಗೂ ನಾಕ್‌ಔಟ್‌ ಪಂದ್ಯಗಳನ್ನು ಆಡಿದ್ದರು. ಇದೀಗ ಟಿ20 ವಿಶ್ವಕಪ್‌ ಟೂರ್ನಿಯನ್ನು ಗೆದ್ದು ಮನೆಗೆ ಹಿಂತಿರುಗಿದ ಬಳಿಕ ರಿಂಕು ಸಿಂಗ್‌ ತಮ್ಮ ತಂದೆಯೆ ಅನುಪಸ್ಥಿತಿಯನ್ನು ನೆನೆದು ಭಾವುಕರಾದರು ಹಾಗೂ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ತಂದೆಯ ಜೊತೆಗೆ ಕಾರು ಪಕ್ಕ ನಿಂತಿರುವ ಫೋಟೋವನ್ನು ಹಂಚಿಕೊಂಡು, ಭಾವನಾತ್ಮಕ ಶೀರ್ಷಿಕೆಯನ್ನು ನೀಡಿದ್ದಾರೆ.



ರಿಂಕು ಸಿಂಗ್‌ ಭಾವನಾತ್ಮಕ ಪೋಸ್ಟ್‌ನಲ್ಲಿ ಏನಿದೆ?

“ನಿಮ್ಮ ಜೊತೆ ಮಾತನಾಡದೆ ಇಷ್ಟು ದಿನಗಳನ್ನು ನಾನು ಎಂದಿಗೂ ಕಳೆಯಿಲ್ಲ. ನೀವಿಲ್ಲದ ಜೀವನ ಹೇಗೆ ಮುಂದುವರಿಯುತ್ತದೆ ಎಂಬುದು ನನಗೆ ತಿಳಿದಿಲ್ಲ, ಆದರೆ ಪ್ರತಿಯೊಂದು ಹೆಜ್ಜೆಯಲ್ಲೂ ನನಗೆ ನಿಮ್ಮ ಅಗತ್ಯವಿರುತ್ತದೆ,” ಎಂದು ರಿಂಕು ಸಿಂಗ್‌ ಭಾವನಾತ್ಮಕವಾಗಿ ಬರೆದಿದ್ದಾರೆ.

“ಕರ್ತವ್ಯವೇ ಮೊದಲು ಎಂದು ನೀವು ನನಗೆ ಕಲಿಸಿದ್ದೀರಿ. ಆದ್ದರಿಂದ ಮೈದಾನದಲ್ಲಿ ನಾನು ಕೇವಲ ನಿಮ್ಮ ಕನಸನ್ನು ನೆರವೇರಿಸಲು ಪ್ರಯತ್ನಿಸುತ್ತಿದ್ದೆ. ಈಗ ನಿಮ್ಮ ಕನಸು ನನಸಾಗಿದೆ, ಆದರೆ ನೀವು ನನ್ನ ಜೊತೆ ಇಲ್ಲದೇ ಇರುವುದು ಮಾತ್ರ ನನ್ನ ಹೃದಯವನ್ನು ನೋಯಿಸುತ್ತದೆ."

“ಸಂತೋಷದ ಪ್ರತಿಯೊಂದು ಸಣ್ಣ-ದೊಡ್ಡ ಕ್ಷಣದಲ್ಲೂ ನಿಮ್ಮ ಕೊರತೆಯನ್ನು ನಾನು ಅನುಭವಿಸುತ್ತೇನೆ. ಪಾಪಾ, ನಾನು ನಿಮ್ಮನ್ನು ತುಂಬಾ, ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ,” ಎಂದು ರಿಂಕು ಸಿಂಗ್‌ ಹೇಳಿದ್ದಾರೆ.

ʻನೀವು ಒಂಟಿಯಲ್ಲ, ನಿಮ್ಮ ಜೊತೆ ನಾವಿದ್ದೇವೆʼ-ರಿಂಕು ಸಿಂಗ್‌ಗೆ ಧೈರ್ಯ ತುಂಬಿದ ಕೋಚ್‌ ಗಂಭೀರ್‌!

ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ರಿಂಕು ಸಿಂಗ್‌

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿಯೂ ರಿಂಕುಸ ಸಿಂಗ್‌ ಮೀಸಲು ಆಟಹಾರರಾಗಿದ್ದರು ಹಾಗೂ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ 2026ರ ಐಸಿಸಿ ಟಿ20 ವಿಶ್ವಕಪ್‌ ತಂಡದಲ್ಲಿ ಹಲವು ಪಂದ್ಯಗಳಲ್ಲಿ ರಿಂಕು ಆಡಿದ್ದಾರೆ. ಈ ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ ಆಡಿದ ರಿಂಕು ಸಿಂಗ್‌, ಕೇವಲ 24 ರನ್‌ ಮಾತ್ರ ಗಳಿಸಿದರು. ಇದೀಗ ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.