ವಿರಾಟ್ ಕೊಹ್ಲಿ ಅಲ್ಲ; ಭಾರತ ವೈಟ್‌ಬಾಲ್ ಕ್ರಿಕೆಟ್ ಸಕ್ಸಸ್‌ಗೆ ಈ ಆಟಗಾರನೇ ಕಾರಣ ಎಂದ ರಾಹುಲ್ ದ್ರಾವಿಡ್!
Rahul Dravid Praised Rohit sharma: ಭಾರತ ತಂಡ ಸೀಮಿತ ಓವರ್‌ಗಳ ಸ್ವರೂಪದಲ್ಲಿ ಯಶಸ್ವಿಯಾಗಲು ರೋಹಿತ್ ಶರ್ಮಾ ಕಾರಣ ಎಂದು ಮಾಜಿ ಹೆಡ್ ಕೋಚ್ ಹಾಗೂ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಚಿಂತನೆಯನ್ನು ಬದಲಿಸಿದ ಶ್ರೇಯ ರೋಹಿತ್‌ಗೆ ಸಲ್ಲಬೇಕೆಂದು ಹೇಳಿದ್ದಾರೆ.
ರೋಹಿತ್ ಶರ್ಮಾರ ಕೊಡುಗೆಯನ್ನು ನೆನೆದ ರಾಹುಲ್ ದ್ರಾವಿಡ್. -
ನವದೆಹಲಿ: ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಶ್ಲಾಘಿಸಿದ್ದಾರೆ. ಭಾರತ ತಂಡ (Indian Cricket team) ವೈಟ್‌ಬಾಲ್ ಕ್ರಿಕೆಟ್‌ನಲ್ಲಿನ ಮರುಚಿಂತನೆಯನ್ನು ಪುನರ್‌ಸ್ಥಾಪಿಸಿದ್ದಾರೆಂದು ಹೇಳಿದ್ದಾರೆ. ಹಾಗಾಗಿ ಟೀಮ್ ಇಂಡಿಯಾದ ಈಗಿನ ವೈಟ್‌ಬಾಲ್ ಕ್ರಿಕೆಟ್‌ನಲ್ಲಿನ ಸಕ್ಸಸ್‌ನ ಶ್ರೇಯ ರೋಹಿತ್ ಶರ್ಮಾ ಅವರಿಗೆ ಸಲ್ಲಬೇಕೆಂದು ದಿ ವಾಲ್ ಖ್ಯಾತಿಯ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.
ಕ್ರೀಡಾ ಪತ್ರಕರ್ತರಾದ ಆರ್ ಕೌಶಿಕ್ ಬರೆದ ರೋಹಿತ್ ಶರ್ಮಾ ಅವರಿಗೆ ಸಂಬಂಧಿಸಿದ ʻದಿ ರೈಸ್ ಆಫ್ ದಿ ಹಿಟ್‌ಮ್ಯಾನ್ʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ತಮ್ಮ ಹೆಡ್ ಕೋಚ್ ಅವಧಿಯಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ವಿಕಸನ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದ ಗುಣಗಳ ಬಗ್ಗೆ ಪ್ರತಿಬಿಂಬಿಸಿದರು. ಜೈನ್ ಸ್ಪೋರ್ಟ್ಸ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನಡೆಸಲಾಗಿತ್ತು ಮತ್ತು ರೋಹಿತ್ ಅವರ ಅದ್ಭುತ ಪ್ರತಿಭೆಯಿಂದ ಪರಿವರ್ತನಾ ನಾಯಕನವರೆಗಿನ ಪ್ರಯಾಣವನ್ನು ಇಲ್ಲಿ ಸ್ಮರಿಸಲಾಯಿತು.
Vihaan Malhotra: ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಆರ್‌ಸಿಬಿ ಬ್ಯಾಟರ್!
ಹೆಡ್ ಕೋಚ್ ಆಗಿದ್ದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರು ಭಾರತ ತಂಡದಲ್ಲಿ ನಾಯಕನಾಗಿದ್ದ ರೋಹಿತ್ ಶರ್ಮಾ ಜೊತೆ ಕೆಲಸ ಮಾಡಿದ್ದಾರೆ. ಈ ಇಬ್ಬರ ಪಾಲುದಾರಿಕೆಯಲ್ಲಿ ಭಾರತ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಈ ಅವಧಿಯಲ್ಲಿ ರೋಹಿತ್ ಶರ್ಮಾ ಅವರು ನಾಯಕನಾಗಿ ಭಾರತ ತಂಡದ ವೈಟ್‌ಬಾಲ್ ಕ್ರಿಕೆಟ್ ಮನಸ್ಥಿತಿಯಲ್ಲಿ ಹೇಗೆ ಬದಲಾಯಿಸಿದ್ದಾರೆಂಬುದನ್ನು ದ್ರಾವಿಡ್ ಇದೀಗ ಬಹಿರಂಗಪಡಿಸಿದ್ದಾರೆ.
Rahul Dravid speaking at the presentation of Rohit Sharma’s book "The Rise of Hitman."
— 𝐑𝐮𝐬𝐡𝐢𝐢𝐢⁴⁵ (@rushiii_12) January 27, 2026
Rahul Dravid always be there for his Captain Rohit Sharma.🫂❤️ pic.twitter.com/vQKYtYB1HV
ರಾಹುಲ್ ದ್ರಾವಿಡ್ ಹೇಳಿದ್ದೇನು?
"ಭಾರತ, ಇತರ ತಂಡಗಳಿಗಿಂತ ವಿಭಿನ್ನ ಮಟ್ಟದಲ್ಲಿ ಟಿ20 ಕ್ರಿಕೆಟ್ ಆಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅವರು ಶೇ. 80 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದಾರೆ, ಇದು ಹಲವು ಏರಿಳಿತಗಳನ್ನು ಹೊಂದಿರುವ ಈ ಸ್ವರೂಪದಲ್ಲಿ ಅದ್ಭುತವಾಗಿದೆ. ಅವರು ಸ್ಪಷ್ಟವಾಗಿ ನೆಚ್ಚಿನ ತಂಡವಾಗಿ ಪ್ರಾರಂಭಿಸುತ್ತಾರೆ ಮತ್ತು ಅವರು ಸೆಮಿಫೈನಲ್‌ಗೆ ಪ್ರವೇಶ ಮಾಡುತ್ತಾರೆ, ಆದರೆ ಅಲ್ಲಿ ಸೋತ ಬಳಿಕ ನಿರಾಶೆಯಾಗಿ, ಏನಾದರೂ ಅಲ್ಲಿ ಕಲಿಯುತ್ತೇವೆ. ಯಾರಾದರೂ ಉತ್ತಮ ಬ್ಯಾಟಿಂಗ್ ನಡೆಸಿ ನಿಮ್ಮನ್ನು ಅಸಮಾಧಾನಗೊಳಿಸಬಹುದು, ”ಎಂದು ದ್ರಾವಿಡ್ ತಿಳಿಸಿದ್ದಾರೆ.
"ಈ ಸಂದರ್ಭದಲ್ಲಿ ತಕ್ಷಣ ರೋಹಿತ್ ಶರ್ಮಾ ಅವರು ನಾಯಕತ್ವವನ್ನು ಪಡೆದರು, ಇದು ಅದ್ಭುತ ಸಂಗತಿ. ಬೇರೆ ಆಟಗಾರರನ್ನು ಕೇಳುವ ಬದಲು, ತಂಡದ ವೇಗವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಇವರೇ ಪಡೆದರು. ಅವರೇ ಎದ್ದು ನಿಂತು,ʻನನ್ನ ಸರಾಸರಿ ಅಥವಾ ನನ್ನ ವೈಯಕ್ತಿಕ ಸಂಖ್ಯೆಗಳು ಎದುರಾದರೂ ಸಹ ನಾನು ಇದನ್ನು ಮಾಡುತ್ತೇನೆʼ ಎಂದು ಹೇಳುವ ಮೂಲಕ ಸಂದೇಶವನ್ನು ತಂಡದ ಇತರೆ ಆಟಗಾರರಿಗೆ ರವಾನಿಸುವುದು ತುಂಬಾ ಸುಲಭವಾಗುತ್ತದೆ, " ಎಂದು ಹೇಳಿದರು.
"ರೋಹಿತ್ ಶರ್ಮಾ ನಾಯಕತ್ವದ ಪರಿವರ್ತನೆಯನ್ನು ನಿಜವಾಗಿಯೂ ಚೆನ್ನಾಗಿ ನಿರ್ವಹಿಸಿದ್ದಾರೆಂದು ನಾನು ಭಾವಿಸಿದೆ. ಅವರು ಬದಲಾಗಿದ್ದಾರೆಂದು ತಂಡಕ್ಕೆ ಎಂದಿಗೂ ಅನಿಸಲಿಲ್ಲ ಮತ್ತು ಅದು ನಾಯಕನಲ್ಲಿ ಅಪರೂಪದ ಮತ್ತು ಪ್ರಮುಖ ಗುಣವಾಗಿದೆ," ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.