ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2027ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಟೀಮ್ ಇಂಡಿಯಾದ ಬೆಸ್ಟ್‌ ಪ್ಲೇಯಿಂಗ್ XI

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನೂ ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಬಿಸಿಸಿಐ ಆಯ್ಕೆದಾರರು ಈಗಾಗಲೇ ಭಾರತ ತಂಡದಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಕಟ್ಟಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಭಾರತ ತಂಡದ ಅತ್ಯುತ್ತಮ ಪ್ಲೇಯಿಂಗ್‌ XIಅನ್ನು ಇಲ್ಲಿ ವಿವರಿಸಲಾಗಿದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಬೆಸ್ಟ್‌ ಪ್ಲೇಯಿಂಗ್‌ XI

2027ರ ಏಕದಿನ ವಿಶ್ವಕಪ್‌ಗೆ ಭಾರತದ ಬೆಸ್ಟ್‌ ಪ್ಲೇಯಿಂಗ್‌ XI. -

Profile
Ramesh Kote Jun 16, 2026 7:40 PM

ನವದೆಹಲಿ: ಹದಿನಾರು ವರ್ಷಗಳ ಬಳಿಕ ಐಸಿಸಿ ಏಕದಿನ ವಿಶ್ವಕಪ್‌ ಗೆಲ್ಲಲು ಎದುರು ನೋಡುತ್ತಿರುವ ಭಾರತ ಪುರುಷರ ಏಕದಿನ ತಂಡ, 2027ರ ಮಹತ್ವದ ಟೂರ್ನಿಗೆ (ICC Men's ODI world Cup 2027) ಇಂದಿನಿಂದಲೇ ಸಜ್ಜಾಗುತ್ತಿದೆ. ಮುಂದಿನ ವರ್ಷ ಅಕ್ಟೋಬರ್‌ ಹಾಗೂ ನವೆಂಬರ್‌ ಅವಧಿಯಲ್ಲಿ 50 ಓವರ್‌ಗಳ ಟೂರ್ನಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಅತ್ಯುತ್ತಮ ಸಂಯೋಜನೆಯೊಂದಿಗೆ ಆಫ್ರಿಕಾ ಉಪ ಖಂಡಕ್ಕೆ ತೆರಳಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ (India's Best Playing XI) ಅತ್ಯುತ್ತಮ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

2011ರಲ್ಲಿ ಕೊನೆಯ ಬಾರಿ ಭಾರತ ತಂಡ ಎಂಎಸ್‌ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್‌ ಅನ್ನು ಗೆದ್ದಿತ್ತು. ಇದಾದ ಬಳಿಕ 2015 ಹಾಗೂ 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಸೆಮಿಫೈನಲ್‌ ಹಂತದಲ್ಲಿ ಟೀಮ್‌ ಇಂಡಿಯಾ ಕ್ರಮವಾಗಿ ಎಂಎಸ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಸೋಲು ಅನುಭವಿಸಿತ್ತು. ಆದರೆ, ರೋಹಿತ್‌ ಶರ್ಮಾ ನಾಯಕತ್ವದಲ್ಲಿ 2023ರ ಒಡಿಐ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋತು ಭಾರತ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಇದೀಗ 2027ರ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಗೆಲ್ಲಲು ಭಾರತ ತಂಡ ಇಂದಿನಿಂದಲೇ ಅಗತ್ಯ ತಯಾರಿಯನ್ನು ನಡೆಸುತ್ತಿದೆ.

ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಇಲ್ಲಿನ ಕಂಡೀಷನ್ಸ್‌ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ. ಅಲ್ಲದೆ 2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿ ಕೂಡ ಇದೇ ನೆಲದಲ್ಲಿ ನಡೆದಿತ್ತು. ಆಫ್ರಿಕಾದ ಕಂಡೀಷನ್ಸ್‌ಗೆ ತಕ್ಕಂತೆ ಬಿಸಿಸಿಐ ಅತ್ಯುತ್ತಮ ಭಾರತ ತಂಡವನ್ನು ಹರಿಣ ನಾಡಿಗೆ ಕಳುಹಿಸಬೇಕಾಗಿದೆ. ಇದೀಗ ನಾವು 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಸಲುವಾಗಿ ಭಾರತದ ಅತ್ಯುತ್ತಮ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ʻಶ್ರೀಲಂಕಾ ಎ ಆಟಗಾರರಿಂದ ಮೈಂಡ್‌ ಗೇಮ್‌ʼ: ವಿವಾದಾತ್ಮಕ ಘಟನೆ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ರೋಹಿತ್‌ ಶರ್ಮಾ-ಶುಭಮನ್‌ ಗಿಲ್‌ ಓಪನರ್ಸ್‌

ಭಾರತ ತಂಡದ ಓಪನಿಂಗ್‌ ಸ್ಥಾನಕ್ಕೆ ಎದಿನಂತೆ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಬೇಕು. ಇವರು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕರಾಗಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಅನುಭನಿ ಹಾಗೂ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಆಡಬೇಕು. ಮಾಜಿ ನಾಯಕ 50 ಓವರ್‌ಗಳ ಸ್ವರೂಪದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಇವರು ಮುಂದಿನ ವಿಶ್ವಕಪ್‌ ಟೂರ್ನಿಯನ್ನು ಆಡುವುದು ಬಹುತೇಕ ಖಚಿತ.

ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ

ಹಾಲಿ ನಾಯಕ ಶುಭಮನ್‌ ಗಿಲ್‌ಗಿಂತ ಹಿರಿಯ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಇದಕ್ಕೆ ಅವರ ಐಪಿಎಲ್‌ ಟೂರ್ನಿಯಲ್ಲಿನ ಸಕ್ಸಸ್‌ ಪ್ರಮುಖ ಸಾಕ್ಷಿ. ತಮ್ಮ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳನ್ನು ಫೈನಲ್‌ಗೆ ತಲುಪಿಸಿದ್ದಲ್ಲದೆ, 2024ರ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಮೂರನೇ ಟ್ರೋಫಿಯನ್ನು ಗೆದ್ದುಕೊಟ್ಟಿದ್ದರು. ತಂಡದ ನಿರ್ವಹಣೆ, ಪಂದ್ಯದ ಸನ್ನಿವೇಶದಲ್ಲಿನ ಅರಿವು, ತಂತ್ರಗಾರಿಕೆ, ಬೌಲಿಂಗ್‌ ಬದಲಾವಣೆ, ಫೀಲ್ಡ್‌ ಸೆಟ್‌ ಸೇರಿದಂತೆ ಎಲ್ಲಾ ಅಂಶಗಳಲ್ಲಿಯೂ ಗಿಲ್‌ಗಿಂತ ಅಯ್ಯರ್‌ ಪರಿಪಕ್ವತೆಯನ್ನು ಹೊಂದಿದ್ದಾರೆ. ಇದಕ್ಕಿಂತ ಮುಖ್ಯವಾಗಿ ನಾಯಕನಾಗಿ ಯಾವುದೇ ಒತ್ತಡವಿಲ್ಲದೆ, ತಮ್ಮ ಬ್ಯಾಟಿಂಗ್‌ ಪ್ರದರ್ಶನದಲ್ಲಿಯೂ ಶ್ರೇಯಸ್‌ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಹಾಗಾಗಿ ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ ನೀಡಿದರೆ ಒಳಿತು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ 2027ರ ಒಡಿಐ ವಿಶ್ವಕಪ್‌ ಭವಿಷ್ಯ ನುಡಿದ ಆರ್‌ ಅಶ್ವಿನ್‌!

ನಾಯಕತ್ವದ ಗುಂಪಿನಲ್ಲಿ ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಇರಬೇಕು. ಅಂಗಣದಲ್ಲಿ ಈ ಇಬ್ಬರೂ ನಾಯಕ ಶ್ರೇಯಸ್‌ ಅಯ್ಯರ್‌ಗೆ ಅಗತ್ಯ ಸಂದರ್ಭಗಳಲ್ಲಿ ನೆರವು ನೀಡಬೇಕು. ಇನ್ನು ಉಪ ನಾಯಕತ್ವದ ಜವಾಬ್ದಾರಿಯನ್ನು ಶುಭಮನ್‌ ಗಿಲ್‌ಗೆ ನೀಡಬೇಕು. ಮತ್ತೊಂದು ಪ್ರಮುಖ ವಿಷಯವೇನೆಂದರೆ ಬಿಸಿಸಿಐ ಈಗಲೇ ಈ ಆಟಗಾರರಿಗೆ ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ನಿಮ್ಮನ್ನು ಆಡಿಸುವುದು ಖಚಿತ, ಹಾಗಾಗಿ ನೀವು ಇಂದಿನಿಂದಲೇ ತಯಾರಿ ನಡೆಸಿಕೊಳ್ಳಬೇಕೆಂದು ಸ್ಪಷ್ಟ ಸಂದೇಶವನ್ನು ನೀಡಬೇಕು. ಇದರಿಂದ ಆಟಗಾರರು ಸುರಕ್ಷಿತ ಭಾವನೆಯಿಂದ ಮುಂದಿನ ಮಹತ್ವದ ಟೂರ್ನಿಗೆ ಮಾನಸಿಕವಾಗಿ ಸಜ್ಜಾಗಲು ನೆರವಾಗುತ್ತದೆ. ಆದರೆ, ಟೂರ್ನಿಯ ಹೊತ್ತಿಗೆ ಈಗಿನ ತಂಡದಲ್ಲಿ ಯಾರಾದರೂ ಔಟ್‌ ಆಫ್‌ ಫಾರ್ಮ್‌ ಅಥವಾ ಗಾಯಕ್ಕೆ ತುತ್ತಾದರೆ, ಅವರ ಜಾಗಕ್ಕೆ ಹೆಚ್ಚುವರಿ ಪಟ್ಟಿಯಲ್ಲಿರುವ ಆಟಗಾರರಿಗೆ ಸ್ಥಾನವನ್ನು ನೀಡಬೇಕಾಗಿದೆ.

ಮೂವರು ಆಲ್‌ರೌಂಡರ್‌ಗಳಿಗೆ ಸ್ಥಾನ

ಮೊದಲನೇ ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿ ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಮುಂದುವರಿಸಬೇಕು ಹಾಗೂ ಎರಡನೇ ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಿಷಭ್‌ ಪಂತ್‌ ಅವರನ್ನು ಆಯ್ಕೆ ಮಾಡಬೇಕಾಗುತ್ತದೆ. ಇನ್ನು ಆಲ್‌ರೌಂಡರ್‌ಗಳಾಗಿ ಪ್ಲೇಯಿಂಗ್‌ XIನಲ್ಲಿ ಹಾರ್ದಿಕ್‌ ಪಾಂಡ್ಯ ಜೊತೆಗೆ ಶಿವಂ ದುಬೇ ಹಾಗೂ ಅಕ್ಷರ್‌ ಪಟೇಲ್‌ಗೆ ಸ್ಥಾನವನ್ನು ನೀಡಬೇಕಾಗಿದೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ಗೆ ಸ್ಥಾನವನ್ನು ನೀಡಬೇಕು. ಶಮಿ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು.

ಹೆಚ್ಚುವರಿ ಆಟಗಾರರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌, ನಿತೀಶ್‌ ಕುಮಾರ್‌ ರೆಡ್ಡಿ, ಋತುರಾಜ್‌ ಗಾಯಕ್ವಾಡ್‌, ರಿಷಭ್‌ ಪಂತ್‌, ಅರ್ಷದೀಪ್‌ ಸಿಂಗ್‌ ಹಾಗೂ ಪ್ರಸಿಧ್‌ ಕೃಷ್ಣ ಅವರನ್ನು ಉಳಿಸಿಕೊಳ್ಳಬೇಕು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ 2027ರ ವಿಶ್ವಕಪ್‌ ಭವಿಷ್ಯ ನುಡಿದ ಇರ್ಫಾನ್‌ ಪಠಾಣ್!

2027ರ ಏಕದಿನ ವಿಶ್ವಕಪ್‌ಗೆ ಭಾರತದ ಬೆಸ್ಟ್‌ ಪ್ಲೇಯಿಂಗ್‌ XI

01.ರೋಹಿತ್‌ ಶರ್ಮಾ (ಓಪನರ್‌)

02.ಶುಭಮನ್‌ ಗಿಲ್‌ (ಓಪನರ್‌)

03.ವಿರಾಟ್‌ ಕೊಹ್ಲಿ (ಬ್ಯಾಟರ್‌)

04.ಶ್ರೇಯಸ್‌ ಅಯ್ಯರ್‌ (ಕ್ಯಾಪ್ಟನ್‌/ ಬ್ಯಾಟರ್‌)

05.ಕೆಎಲ್‌ ರಾಹುಲ್‌ (ವಿಕೆಟ್‌ಕೀಪರ್‌/ ಬ್ಯಾಟ್ಸ್‌ಮನ್)

06.ಶಿವಂ ದುಬೇ (ಆಲ್‌ರೌಂಡರ್‌)

07.ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌)

08.ಅಕ್ಷರ್‌ ಪಟೇಲ್‌ (ಆಲ್‌ರೌಂಡರ್‌)

09.ಮೊಹಮ್ಮದ್‌ ಶಮಿ (ಫಾಸ್ಟ್‌ ಬೌಲರ್‌)

10.ಮೊಹಮ್ಮದ್‌ ಸಿರಾಜ್‌ (ಫಾಸ್ಟ್‌ ಬೌಲರ್‌)

11.ಜಸ್‌ಪ್ರೀತ್‌ ಬುಮ್ರಾ (ಫಾಸ್ಟ್‌ಬೌಲರ್‌)

ಹೆಚ್ಚುವರಿ ಆಟಗಾರರು

01.ಯಶಸ್ವಿ ಜೈಸ್ವಾಲ್‌ (ಓಪನರ್‌)

02.ನಿತೀಶ್‌ ರೆಡ್ಡಿ (ಆಲ್ರೌಂಡರ್‌)

03.ಋತುರಾಜ್‌ ಗಾಯಕ್ವಾಡ್‌ (ಬ್ಯಾಟರ್‌)

04.ಅರ್ಷದೀಪ್‌ ಸಿಂಗ್‌ (ಎಡಗೈ ವೇಗಿ)

05.ಪ್ರಸಿಧ್‌ ಕೃಷ್ಣ (ಫಾಸ್ಟ್‌ ಬೌಲರ್‌)

06. ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌)