ಬೆಂಗಳೂರು ಐಟಿ ಕಂಪನಿಯ 11 ಲಕ್ಷ ವೇತನದ ಕೆಲಸ ತೊರೆದು ನೀರಿನ ಬಿಸಿನೆಸ್ ಆರಂಭ ಮಾಡಿದ ಯುವಕ! ಈಗ ವಾರ್ಷಿಕ ಗಳಿಕೆ 28.5 ಲಕ್ಷ!
Viral News: ಕಾರ್ಪೊರೇಟ್ ಉದ್ಯಮವನ್ನು ತೊರೆದ ಅನೇಕ ಯುವಕ- ಯುವತಿಯರಿದ್ದಾರೆ. ಲಕ್ಷ ಲಕ್ಷ ಸಂಬಳ ಬರುತ್ತಿದ್ದರೂ ನೆಮ್ಮದಿ ಇಲ್ಲ ಅನ್ನುವ ಕಾರಣಕ್ಕೆ ಪ್ರತಿಷ್ಠಿತ ಕಂಪನಿಯ ಕೆಲಸವನ್ನೇ ತ್ಯಜಿ ಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಯುವಕನೊಬ್ಬ ಕಾರ್ಪೊರೇಟ್ ಜಾಬ್ ನಿಂದ ಬೇಸೆತ್ತು ಸ್ವಂತ ಉದ್ಯಮ ಮಾಡುವ ಮೂಲಕ ಯಶಸ್ಸು ಕಂಡ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ
ಸಂಗ್ರಹ ಚಿತ್ರ -
ಬೆಂಗಳೂರು,ಆ. 4: ಇಂದು ಕೆಲಸದ ಒತ್ತಡದಿಂದ ಕಾರ್ಪೊರೇಟ್ ಉದ್ಯಮವನ್ನು ತೊರೆದ ಅನೇಕ ಯುವಕ- ಯುವತಿಯರಿದ್ದಾರೆ. ಲಕ್ಷ ಲಕ್ಷ ಸಂಬಳ ಬರುತ್ತಿದ್ದರೂ ನೆಮ್ಮದಿ ಇಲ್ಲ ಅನ್ನುವ ಕಾರಣಕ್ಕೆ ಪ್ರತಿಷ್ಠಿತ ಕಂಪನಿಯ ಕೆಲಸವನ್ನೇ ತ್ಯಜಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಯುವಕ ನೊಬ್ಬ ಕಾರ್ಪೊರೇಟ್ ಜಾಬ್‌ನಿಂದ ಬೇಸತ್ತು ಸ್ವಂತ ಉದ್ಯಮ ಮಾಡುವ ಮೂಲಕ ಯಶಸ್ಸು ಕಂಡ ಸುದ್ದಿಯೊಂದು ಭಾರೀ ವೈರಲ್ (Viral News) ಆಗುತ್ತಿದೆ. ತನ್ನ ವಾರ್ಷಿಕ 11 ಲಕ್ಷದ ಬೆಂಗಳೂರಿನ ಉದ್ಯೋಗವನ್ನು ತೊರೆದು ನೀರು ಶುದ್ಧೀಕರಣ ವ್ಯವಹಾರವನ್ನು ಪ್ರಾರಂಭಿಸುವ ಮುಲಕ ಯಶಸ್ಸು ಕಂಡಿದ್ದಾರೆ.
ಐಟಿ ನಗರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನು ತೀವ್ರ ಒತ್ತಡದಿಂದ ಬೇಸತ್ತು ತನ್ನ ಸ್ವಗ್ರಾಮಕ್ಕೆ ಮರಳಿ ಕುಡಿಯುವ ನೀರಿನ ಶುದ್ಧೀಕರಣ ಉದ್ಯಮವನ್ನು ಆರಂಭ ಮಾಡಿದ್ದಾರೆ. ಸುತ್ತಮುತ್ತಲು ಇರುವ ಮನೆಗಳು ಮತ್ತು ಸಣ್ಣ ಅಂಗಡಿಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನು ಪೂರೈಸುವ ವ್ಯವಹಾರವನ್ನು ನಿರ್ಮಿಸಿದ್ದಾರೆ.ಈ ಉದ್ಯಮದಿಂದ ವಾರ್ಷಿಕ 28.5 ಲಕ್ಷ ಲಾಭವನ್ನು ಗಳಿಸುತ್ತಿದ್ದಾರೆ.
My friend quit his ₹11 LPA 9-to-5 job in Bengaluru.
— Ankit Pandey (@iamankitpande) August 3, 2026
Now he earns nearly ₹28 lakh a year from his home.
Instead of chasing promotions, he went back home and started a simple water purification business.
He installed a water purification plant on his own property and connected… pic.twitter.com/uY3mfTd0d3
ಆತನ ಸ್ನೇಹಿತ ಅಂಕಿತ್ ಪಾಂಡೆ ಎಂಬವರು ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಸುಮಾರು 300 ಗ್ರಾಹಕರನ್ನು ಸಂಪರ್ಕಿಸಿದ್ದಾರೆ ಈಗ ಪ್ರತಿದಿನ ಸುಮಾರು 300 ನೀರಿನ ಕ್ಯಾನ್‌ಗಳನ್ನು ತಲುಪಿಸುತ್ತಾರೆ. ಒಂದು ಕ್ಯಾನ್ ನೀರಿಗೆ 30 ರಂತೆ ದಿನಕ್ಕೆ 9,000 ಆದಾಯ ಬರುತ್ತದೆ. ತಿಂಗಳಿಗೆ ಸುಮಾರು 2.70 ಲಕ್ಷದಷ್ಟು ಆದಾಯ ಗಳಿಸುತ್ತಾರೆ.
ಪೋಸ್ಟ್ ಪ್ರಕಾರ, ಮಾಸಿಕ ವೆಚ್ಚಗಳು ನೀರು ಶುದ್ಧೀಕರಣ, ವಿದ್ಯುತ್‌ಗೆ ಸುಮಾರು 15,000 ಸೇರಿವೆ, ಆದರೆ ಸಾರಿಗೆ ವೆಚ್ಚವು ಪ್ರತಿ ತಿಂಗಳು ಸುಮಾರು 20,000 ಆಗಿದೆ. ಶುದ್ಧೀಕರಣ ಘಟಕವು ಉದ್ಯಮಿಯ ಸ್ವಂತ ಆಸ್ತಿಯಿಂದ ಕಾರ್ಯ ನಿರ್ವ ಹಿಸುವುದರಿಂದ, ಯಾವುದೇ ಬಾಡಿಗೆ ವೆಚ್ಚಗಳಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ವೆಚ್ಚಗಳನ್ನು ಕಳೆದು ತಿಂಗಳಿಗೆ 2.35 ಲಕ್ಷ ಲಾಭ ಉಳಿಯಲಿದೆ.
ಇಂತಹ ವ್ಯವಹಾರಕ್ಕಾಗಿ ನೀವು 11 LPA ಕಾರ್ಪೊರೇಟ್ ಕೆಲಸವನ್ನು ಬಿಡುತ್ತೀರಾ?" ಎಂದು ಬಳಕೆದಾರರನ್ನು ಕೇಳುವ ಮೂಲಕ ಅವರ ಸ್ನೇಹಿತ ಪೋಸ್ಟ್ ಅನ್ನು ಕೊನೆಗಳಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು "ನಿಜವಾದ ದೈನಂದಿನ ಸಮಸ್ಯೆಯನ್ನು ಪರಿಹರಿಸುವ ಉತ್ತಮ ಕೆಲಸ, ಈ ವ್ಯವಹಾರವು ಕಾರ್ಪೊರೇಟ್ ಉದ್ಯಮಕ್ಕಿಂತ ಲಾಭದಾಯಕವಾಗಿದೆ" ಅಂದರು.