RCBW vs DCW WPL 2026 Final: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ವನಿತೆಯರು!
RCBW vs DCW WPL 2026 Final: ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆರ್‌ಸಿಬಿ-ಡಿಸಿ ನಡುವೆ ಫೈನಲ್ ಹಣಾಹಣಿ. -
ವಡೋದರ: ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ (WPL 2026) ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡಗಳು (RCBW vs DCW) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ (Smriti Mandhana) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟ್ ಮಾಡಲಿದೆ.
ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ, 2024ರಲ್ಲಿ ಮೊದಲ ಬಾರಿ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ ಎರಡನೇ ಕಪ್ ಗೆಲ್ಲುವ ಗುರಿಯನ್ನು ಹೊಂದಿದೆ. ಅಂದ ಹಾಗೆ ಈ ಸೀಸನ್‌ನಲ್ಲಿ ಆರ್‌ಸಿಬಿ ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಅಂದ ಹಾಗೆ ಈ ಪಂದ್ಯಕ್ಕೆ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಆಡಿಸಿದ್ದ ಅದೇ ಆಡುವ ಬಳಗವನ್ನು ಆಡಿಸುತ್ತಿದೆ. ಇನ್ನು ಡೆಲ್ಲಿ ಪ್ಲೇಯಿಂಗ್ XIನಲ್ಲಿಯೂ ಯಾವುದೇ ಬದಲಾವಣೆ ಇಲ್ಲ.
World Legends Pro T20 League: ಪುಣೆ ಪ್ಯಾಂಥರ್ಸ್ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ದುಬೈ ರಾಯಲ್ಸ್!
ಜೆಮಿಮಾ ರೊಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದನ್ನೂ ಸೇರಿಸಿ ನಾಲ್ಕು ಬಾರಿ ಫೈನಲ್‌ಗೆ ಪ್ರವೇಶ ಮಾಡಿದೆ. ಆದರೆ, ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಕಳೆದ ಮೂರೂ ಬಾರಿಯೂ ಫೈನಲ್‌ನಲ್ಲಿ ವಿಭಿನ್ನ ತಂಡಗಳ ಎದುರು ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ. ಇದೀಗ ಚೊಚ್ಚಲ ಕಪ್ ಗೆಲ್ಲಲು ಡೆಲ್ಲಿ ಎದುರು ನೋಡುತ್ತಿದೆ.
Here are the Playing XIs of @RCBTweets and @DelhiCapitals for the #Final 🙌
— Women's Premier League (WPL) (@wplt20) February 5, 2026
Updates ▶️ https://t.co/9sgUo0YqOI#TATAWPL | #ClaimTheCrown | #RCBvDC pic.twitter.com/wSONndtya7
ಉಭಯ ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವಾಲ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ಮದಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಸಯಾಲಿ ಸಾತ್ಘರೆ, ಶ್ರೇಯಾಂಕ ಪಾಟೀಲ್, ಲಾರೆನ್ ಬೆಲ್
ಡೆಲ್ಲಿ ಕ್ಯಾಪಿಟಲ್ಸ್: ಲಿಝೆಲ್ ಲೀ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಲಾರಾ ವೋಲ್ವಾರ್ಡ್, ಜೆಮಿಮಾ ರೊಡ್ರಿಗಸ್ (ನಾಯಕ), ಮಾರಿಜಾನ್ ಕಾಪ್, ಚಿನೆಲ್ಲಿ ಹೆನ್ರಿ, ನಿಕಿ ಪ್ರಸಾದ್, ಸ್ನೇಹಾ ರಾಣಾ, ಮಿನ್ನು ಮಣಿ, ಶ್ರೀಚರಣಿ, ನಂದಿನಿ ಶರ್ಮಾ
🚨 Toss 🚨@RCBTweets have won the toss against @DelhiCapitals and elected to bowl in the #Final
— Women's Premier League (WPL) (@wplt20) February 5, 2026
Predict the target #DC will set 🎯
Updates ▶️ https://t.co/9sgUo0YqOI#TATAWPL | #ClaimTheCrown | #RCBvDC pic.twitter.com/Gml8UX87a3
ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್: ಲಿಝೆಲ್ಲಿ ಲೀ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕ), ಮಾರಿಜಾನ್ ಕಾಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ, ಅಲನಾ ಕಿಂಗ್, ತಾನಿಯಾ ಭಾಟಿಯಾ, ಲೂಸಿ ಹ್ಯಾಮಿಲ್ಟನ್, ಪ್ರಗತಿ ಸಿಂಗ್, ಎಡ್ಲಾ ಸೃಜನಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವಾಲ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಸಯಾಲಿ ಸಾತ್ಘರೆ, ಶ್ರೇಯಾಂಕ ಪಾಟೀಲ್, ಲಾರೆಲ್ ವಾಲ್, ಲಿನ್ಸಿ ಸ್ಮಿತ್, ಡಯಾಲನಾ ಹೇಮಲತಾ, ಪ್ರತ್ಯೋಷ್ ಕುಮಾರ್, ಗೌತಮಿ ನಾಯಕ್, ಪ್ರೇಮಾ ರಾವತ್