ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಎಂಎಸ್‌ ಧೋನಿಯ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದ ವೈಭವ್‌ ಸೂರ್ಯವಂಶಿ!

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ವೈಭವ್ ಸೂರ್ಯವಂಶಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 57 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಆ ಮೂಲಕ ರಾಜಸ್ಥಾನ್‌ ರಾಯಕ್ಸ್‌ ತಂಡದ ಗೆಲುವಿಗೆ ನೆರವಾದರು. ಪಂದ್ಯದ ಬಳಿಕ 14ರ ವಯಸ್ಸಿನ ವೈಭವ್ ಸೂರ್ಯವಂಶಿ ಎಂಎಸ್‌ ಧೋನಿಯ ಪಾದವನ್ನು ಸ್ಪರ್ಶಿಸಿ ಆಶಿರ್ವಾದ ನೀಡಿದ್ದಾರೆ.

ಧೋನಿಯ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದ ವೈಭವ್‌ ಸೂರ್ಯವಂಶಿ!

ಎಂಎಸ್‌ ಧೋನಿಯ ಪಾದವನ್ನು ಸ್ಪರ್ಶಿಸಿದ ವೈಭವ್‌ ಸೂರ್ಯವಂಶಿ.

Profile Ramesh Kote May 21, 2025 1:20 AM

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 62ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR), ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ರಾಜಸ್ಥಾನದ ಗೆಲುವಿನ ಹೀರೋ 14ರ ವಯಸ್ಸಿನ ವೈಭವ್ ಸೂರ್ಯವಂಶಿ (Vaibhav Suryavanshi). ಸಿಎಸ್‌ಕೆ ನೀಡಿದ್ದ188 ರನ್‌ಗಳ ಗುರಿ ಹಿಂಬಾಲಿಸಿದ ಆರ್‌ಆರ್‌ ಪರ ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 57 ರನ್‌ಗಳ ಅದ್ಭುತ ಇನಿಂಗ್ಸ್‌ ಆಡಿದರು. ಈ ಇನಿಂಗ್ಸ್‌ನ ಮೂಲಕ ವೈಭವ್, ರಾಜಸ್ಥಾನ ತಂಡವನ್ನು ಪಂದ್ಯ ಗೆಲ್ಲಲು ಸಹಾಯ ಮಾಡಿದರು. ಆದರೆ, ಪಂದ್ಯದ ಬಳಿಕ ತಮ್ಮ ನಡೆಯಿಂದ ರಾಜಸ್ಥಾನ್‌ ರಾಯಲ್ಸ್‌ ಆರಂಭಿಕ ಎಲ್ಲರ ಹೃದಯವನ್ನು ಗೆದ್ದರು.

ಮಂಗಳವಾರ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಆರ್‌ಆರ್‌ ನಡುವಿನ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ವೈಭವ್ ಸೂರ್ಯವಂಶಿ, ಸಿಎಸ್‌ಕೆ ನಾಯಕ ಎಂಎಸ್‌ ಧೋನಿಯ ಬಳಿಗೆ ಹೋದ ತಕ್ಷಣ, ಅವರು ಅವರಿಗೆ ಹಸ್ತಲಾಘವ ನೀಡಲಿಲ್ಲ. ಇದರ ಬದಲಿಗೆ ಮೊದಲು ಅವರ ಪಾದಗಳನ್ನು ಮುಟ್ಟಿ ಆಶಿರ್ವಾದ ಪಡೆದರು. ವೈಭವ್ ಅವರ ಈ ನಡೆಯನ್ನು ನೋಡಿದ ಧೋನಿ, ಯುವ ಆಟಗಾರನ ಬೆನ್ನು ತಟ್ಟಿದರು.

RR vs CSK: ಚೆನ್ನೈ ವಿರುದ್ಧ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ರಾಜಸ್ಥಾನ್ ರಾಯಲ್ಸ್!

ವಿಕೆಟ್ ಹಿಂದಿನಿಂದ ವೈಭವ್ ಅವರನ್ನು ಹೊಗಳಿದ ಧೋನಿ

ವೈಭವ್ ಸೂರ್ಯವಂಶಿ ಬ್ಯಾಟ್‌ ಮಾಡುತ್ತಿದ್ದಾಗ ವಿಕೆಟ್ ಕೀಪಿಂಗ್‌ನಲ್ಲಿದ್ದ ಎಂಎಸ್‌ ಧೋನಿ ಕೂಡ ಅವರ ಕೆಲವು ಹೊಡೆತಗಳನ್ನು ನೋಡಿ ಆಶ್ಚರ್ಯಚಕಿತರಾದರು. ವೈಭವ್ ಸೂರ್ಯವಂಶಿ ಬೌಲರ್‌ಗಳನ್ನು ಹೊಡೆದ ರೀತಿಯನ್ನು ನೋಡಿದ ಧೋನಿ ಕೂಡ ಅವರನ್ನು ಹೊಗಳಿದರು. ಪಂದ್ಯದ ನಂತರವೂ ವೈಭವ್, ಎಂಎಸ್ ಧೋನಿಯನ್ನು ಭೇಟಿಯಾಗಿ ಅವರಿಂದ ಕ್ರಿಕೆಟ್ ಸಲಹೆಗಳನ್ನು ಪಡೆದರು. ಪಂದ್ಯಗಳ ನಂತರ ಧೋನಿ ಆಗಾಗ್ಗೆ ಯುವ ಆಟಗಾರರೊಂದಿಗೆ ಸಂವಹನ ನಡೆಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ವೈಭವ್ ಕೂಡ ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.



ಆಟದ ಹೊರತಾಗಿ ಎಂಎಸ್‌ ಧೋನಿ ಮತ್ತು ವೈಭವ್‌ ಸೂರ್ಯವಂಶಿಗೆ ಸಂಬಂಧಿಸಿದಂತೆ ಪಂದ್ಯದಲ್ಲಿ ಒಂದು ಅದ್ಭುತ ಕಾಕತಾಳೀಯತೆಯೂ ಕಂಡುಬಂದಿತು. ಐಪಿಎಲ್ ಇತಿಹಾಸದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರು ಒಟ್ಟಿಗೆ ಮೈದಾನಕ್ಕೆ ಇಳಿದದ್ದು ಇದೇ ಮೊದಲು. ಎಂಎಸ್‌ ಧೋನಿ 43ನೇ ವಯಸ್ಸಿನಲ್ಲಿ 2025ರ ಐಪಿಎಲ್‌ ಟೂರ್ನಿಯಲ್ಲಿ ಆಡಿದರೆ, ವೈಭವ್ ಕೇವಲ 14 ವರ್ಷ ವಯಸ್ಸಿನವರಾಗಿದ್ದಾರೆ.



ಗೆಲುವಿನ ಮೂಲಕ ಐಪಿಎಲ್‌ ಅಭಿಯಾನ ಮುಗಿಸಿದ ಆರ್‌ಆರ್‌

ರಾಜಸ್ಥಾನ್‌ ರಾಯಲ್ಸ್‌ ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರಲಿಲ್ಲ. ಎರಡು ಬಾರಿ ನಾಯಕರ ಬದಲಾವಣೆ ಜೊತೆಗೆ, ಅನುಭವಿ ಬ್ಯಾಟ್ಸ್‌ಮನ್‌ಗಳ ಕೊರತೆಯಿಂದ ಆರ್‌ಆರ್‌ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದ ರಾಜಸ್ಥಾನ್‌ ರಾಯಲ್ಸ್‌ ತಂಡ, ಇನ್ನುಳಿದ 10 ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಆ ಮೂಲಕ ಪ್ಲೇಆಫ್ಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಆದರೆ, ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಗೆಲುವಿನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ.