ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಸ್‌ಪ್ರೀತ್‌ ಬುಮ್ರಾರನ್ನು ಹಿಂದಿಕ್ಕಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್‌!

Sanju samson: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಅವರು ಪುರುಷರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಜಸ್‌ಪ್ರೀತ್‌ ಬುಮ್ರಾ ಅವರನ್ನು ಹಿಂದಿಕ್ಕಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್‌.

ನವದೆಹಲಿ: ಕಳೆದ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju samson) ಅವರು ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ (ICC Player of the Month) ಭಾಜನರಾಗಿದ್ದಾರೆ. ಆರಂಭದಲ್ಲಿ ಈ ಪ್ರಶಸ್ತಿ ರೇಸ್‌ನಲ್ಲಿ ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ ಕೂಡ ಇದ್ದರು. ಆದರೆ, ಅವರನ್ನು ಕೇರಳ ಮೂಲಕ ಆಟಗಾರ ಹಿಂದಿಕ್ಕಿದ್ದಾರೆ. ಟಿ20 ವಿಶ್ವಕಪ್‌ ಸೂಪರ್‌-8ರ ಕೊನೆಯ ಪಂದ್ಯ, ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳಲ್ಲಿ ಕ್ರಮವಾಗಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳ ಮೂಲಕ ಭಾರತದ ಮೂರನೇ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಸಂಜು ಮಹತ್ವದ ಪಾತ್ರವನ್ನು ವಹಿಸಿದ್ದರು.

"ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆಲ್ಲುವುದು ನಿಜಕ್ಕೂ ಅದ್ಭುತ ಅನುಭವ, ಅದರಲ್ಲಿಯೂ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಮರೆಯಲಾಗದ ಅತ್ಯಂತ ಸ್ಮರಣೀಯ ಹಂತದಲ್ಲಿ ಇದು ಮೂಡಿ ಬಂದಿರುವುದು ತುಂಬಾ ವಿಶೇಷವಾಗಿದೆ. ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗುವ ಮೂಲಕ ನನ್ನ ಕನಸು ನನಸಾಗಿದೆ," ಎಂದು ಸಂಜು ಸ್ಯಾಮ್ಸನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲಿಯೇ 4 ವಿಕೆಟ್‌ ಕಿತ್ತು ರಾಜಸ್ಥಾನ್‌ ರಾಯಲ್ಸ್‌ಗೆ ನಿದ್ರೆ ಕೆಡಿಸಿದ ಪ್ರಫುಲ್‌ ಹಿಂಗೆ ಯಾರು?

"ಆ ಕ್ಷಣದ ಮಹತ್ವವವನ್ನು ಸಂಪೂರ್ಣವಾಗಿ ಅರಿಯಲು ಸ್ವಲ್ಪ ಸಮಯ ಬೇಕಾಯಿತು. ಭಾರತೀಯ ಕ್ರಿಕೆಟ್‌ಗೆ ಇದು ಅತ್ಯಂತ ರೋಚಕ ಯುಗವಾಗಿದ್ದು, ಎಲ್ಲಾ ವಿಭಾಗಗಳಲ್ಲಿಯೂ ಅಪಾರ ಪ್ರತಿಭಾವಂತರು ಇದ್ದಾರೆ. ನನಗೆ ದೊರೆತ ಅವಕಾಶಗಳಿಗಾಗಿ ನಾನು ಕೃತಜ್ಞನಾಗಿದ್ದೇನೆ. ಇದರ ಜೊತೆಗೆ ನನ್ನ ತಂಡದ ಸಹ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಯಿಂದ ಲಭಿಸಿದ ನಂಬಿಕೆ ಮತ್ತು ಬೆಂಬಲಕ್ಕೂ ಧನ್ಯವಾದಗಳು,” ಎಂದು ಅವರು ಹೇಳಿದ್ದಾರೆ.



ಮಹಿಳೆಯರ ವಿಭಾಗದಲ್ಲಿ ಮೆಲೀ ಕೆರ್‌ಗೆ ಪ್ರಶಸ್ತಿ

ಪುರುಷರ ವಿಭಾಗದಲ್ಲಿ ಸಂಜು ಸ್ಯಾಮ್ಸನ್‌ಗೆ ಈ ಪ್ರಶಸ್ತಿ ದೊರೆತರೆ, ಮಹಿಳೆಯರ ವಿಭಾಗದಲ್ಲಿ ನ್ಯೂಜಿಲೆಂಡ್‌ ಆಲ್‌ರೌಂಡರ್‌ ಮೆಲೀ ಕೆರ್‌ಗೆ ಲಭಿಸಿದೆ. ಅವರು ಮೂರೂ ಸ್ವರೂಪದಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದರ ಫಲವಾಗಿ ಐಸಿಸಿ ಮಹಿಳೆಯರ ತಿಂಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.

CSK vs DC: ನಾಲ್ಕನೇ ಐಪಿಎಲ್‌ ಸೆಂಚುರಿ ಬಾರಿಸಿ ಮಿಂಚಿದ ಸಂಜು ಸ್ಯಾಮ್ಸನ್‌!

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸಂಜು ಪ್ರದರ್ಶನ

ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿರಲಿಲ್ಲ. ಆದರೆ, ಅಭಿಷೇಕ್‌ ಶರ್ಮಾ ಅನಾರೋಗ್ಯಕ್ಕೆ ತುತ್ತಾದ ಬಳಿಕ ಅವರಿಗೆ ಅವಕಾಶಗಳು ಲಭಿಸಿದವು. ಅದರಲ್ಲಿಯೂ ವಿಶೇಷವಾಗಿ ವೆಸ್ಟ್‌ ಇಂಡೀಸ್‌ ವಿರುದ್ದದ ಸೂಪರ್‌-8ರ ಪಂದ್ಯದಲ್ಲಿ ಅಜೇಯ 97 ರನ್‌, ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಫೈನಲ್‌ ಪಂದ್ಯಗಳಲ್ಲಿ ಕ್ರಮವಾಗಿ 89 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

Sanju Samson: ಶತಕ ಬಾರಿಸಿ 'ಪಡೆಯಪ್ಪ' ಶೈಲಿಯಲ್ಲಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್‌

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶತಕ ಬಾರಿಸಿದ ಸಂಜು ಸ್ಯಾಮ್ಸನ್‌

ಟ್ರೇಡ್‌ ಡೀಲ್‌ ಮೂಲಕ ರಾಜಸ್ಥಾನ್‌ ರಾಯಲ್ಸ್‌ನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮರಳಿರುವ ಸಂಜು ಸ್ಯಾಮ್ಸನ್‌, ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಆದರೆ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಈ ಸೀಸನ್‌ನಲ್ಲಿ ಮೊದಲ ಶತಕ ಬಾರಿಸಿದ್ದರು. ಆ ಮೂಲಕ ಸಿಎಸ್‌ಕೆಗೆ ಮೊದಲ ಗೆಲುವು ತಂದುಕೊಟ್ಟಿದ್ದರು.