Sanju Samson: ಶತಕ ಬಾರಿಸಿ 'ಪಡೆಯಪ್ಪ' ಶೈಲಿಯಲ್ಲಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್
CSK vs DC: ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದಾಗ ಕೋಚ್ ಫ್ಲೆಮಿಂಗ್ ಸದಾ ಸಂಜು ಬೆಂಬಲಕ್ಕೆ ನಿಂತಿದ್ದರು. ಟೀಕೆ ಮಾಡುವವರ ವಿರುದ್ಧವೇ ಅವರು ಕಿಡಿ ಕಾರುವ ಮೂಲಕ ಸಂಜು ಬೆನ್ನಿಗೆ ನಿಂತಿದ್ದರು. ಮತ್ತು ಆಟಗಾರ ಆತ್ಮವಿಶ್ವಾಸ ಕುಗ್ಗದಂತೆ ನೋಡಿಕೊಂಡಿದ್ದರು. ಇದೇ ಕಾರಣಕ್ಕೆ ಸಂಜು ತಮ್ಮ ಶತಕದ ಶ್ರೇಯವನ್ನು ಕೋಚ್‌ಗೆ ಅರ್ಪಿಸಿದರು.
Sanju Samson's Padayappa celebration -
ಚೆನ್ನೈ, ಎ.12: ಸತತ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸಂಜು ಸ್ಯಾಮ್ಸನ್(Sanju Samson) ಶನಿವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್(CSK vs DC) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದರು. ಅವರ ಈ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನ ಹಾಲಿ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು. ಶತಕ ಬಾರಿಸಿದ ವೇಳೆ ಸಂಜು ಅವರು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪಡೆಯಪ್ಪ' ಚಿತ್ರದ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದರು.
ಬಿರುಸಿನ ಬ್ಯಾಟಿಂಗ್ ನಡೆಸಿ 52 ಎಸೆತಗಳಲ್ಲಿ ಶತಕ ಗಳಿಸಿದ ಸಂಜು, 'ಪಡೆಯಪ್ಪ' ಶೈಲಿಯಲ್ಲಿ ಸೆಲ್ಯೂಟ್ ಹೊಡೆಯುವ ಮೂಲಕ ಸಂಭ್ರಮಿಸಿದರು. ಪಂದ್ಯದ ಬಳಿಕ ಮಾತನಾಡಿದ ಸಂಜು ಈ ಸೆಲ್ಯೂಟ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರಿಗೆ ಸಲ್ಲುತ್ತದೆ ಎಂದರು. ಫ್ಲೆಮಿಂಗ್ ಫ್ರಾಂಚೈಸಿಯನ್ನು ಮುನ್ನಡೆಸುತ್ತಿರುವ ಸವಾಲುಗಳನ್ನು ಒಪ್ಪಿಕೊಂಡ ಸಂಜು, "ಅದು(ಸೆಲ್ಯೂಟ್) ಸ್ಟೀಫನ್ ಫ್ಲೆಮಿಂಗ್‌ಗೆ ಆಗಿತ್ತು. ಫ್ರಾಂಚೈಸಿಯನ್ನು ಮುನ್ನಡೆಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಅದು ಎಷ್ಟು ಸವಾಲಿನದ್ದಾಗಿದೆ ಎಂದು ನನಗೆ ತಿಳಿದಿದೆ. ಆದ್ದರಿಂದ, ಇದನ್ನು ನಮ್ಮ ಕೋಚ್ ಫ್ಲೆಮಿಂಗ್‌ಗೆ ಅರ್ಪಿಸಲು ನಾನು ಬಯಸುತ್ತೇನೆ" ಎಂದು ಸ್ಯಾಮ್ಸನ್ ಹೇಳಿದರು.
ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದಾಗ ಕೋಚ್ ಫ್ಲೆಮಿಂಗ್ ಸದಾ ಸಂಜು ಬೆಂಬಲಕ್ಕೆ ನಿಂತಿದ್ದರು. ಟೀಕೆ ಮಾಡುವವರ ವಿರುದ್ಧವೇ ಅವರು ಕಿಡಿ ಕಾರುವ ಮೂಲಕ ಸಂಜು ಬೆನ್ನಿಗೆ ನಿಂತಿದ್ದರು. ಮತ್ತು ಆಟಗಾರ ಆತ್ಮವಿಶ್ವಾಸ ಕುಗ್ಗದಂತೆ ನೋಡಿಕೊಂಡಿದ್ದರು. ಇದೇ ಕಾರಣಕ್ಕೆ ಸಂಜು ತಮ್ಮ ಶತಕದ ಶ್ರೇಯವನ್ನು ಕೋಚ್‌ಗೆ ಅರ್ಪಿಸಿದರು.
IPL 2026: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಿದ ಚೆನ್ನೈ ಸೂಪರ್ ಕಿಂಗ್ಸ್
"ನನ್ನ ಮೇಲೆ ತೋರಿಸಿದ ನಂಬಿಕೆ, ಅದು ಜವಾಬ್ದಾರಿಯ ಭಾವನೆಯಾಗಿತ್ತು. ತಂಡವನ್ನು ಗೆಲುವಿನ ಹಳಿಗೆ ತರಬೇಕೆಂದು ನಾನು ಬಯಸಿದ್ದೆ. ಹೊಸ ಫ್ರಾಂಚೈಸಿಯೊಂದಿಗೆ ಪ್ರಾರಂಭಿಸುವುದು ಸುಲಭವಲ್ಲ, ಆದರೆ ಅದು ಹಾಗೆ ಅನಿಸಿಲ್ಲ. ಎಲ್ಲರೂ ತುಂಬಾ ಬೆಂಬಲವಾಗಿದ್ದರು. ನಾವು ಮೂರು ಪಂದ್ಯಗಳನ್ನು ಸೋತಾಗಲೂ, ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ" ಎಂದು ಸ್ಯಾಮ್ಸನ್ ಹೇಳಿದರು.
56 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 115 ರನ್ ಗಳಿಸಿದರು. ಅವರ ಈ ಶತಕ ಮತ್ತು ಶಿವಂ ದುಬೆ ಅವರ 10 ಎಸೆತಗಳಲ್ಲಿ 20 ರನ್ ಸೂಪರ್ ಕಿಂಗ್ಸ್ 212/2 ಸ್ಕೋರ್ ಗಳಿಸಲು ಸಹಾಯ ಮಾಡಿತು. ಆಯುಷ್ ಮ್ಹಾತ್ರೆ ಕೂಡ 36 ಎಸೆತಗಳಲ್ಲಿ 59 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇಂಗ್ಲೆಂಡ್‌ನ ವೇಗಿ ಜೇಮಿ ಓವರ್ಟನ್ (18ಕ್ಕೆ 4) ಮತ್ತು ಅನ್ಶುಲ್ ಕಂಬೋಜ್ (35ಕ್ಕೆ 3) ಕಡಿವಾಣ ಹಾಕಿದರು. ಇದರಿಂದಾಗಿ ನಿಗದಿತ ಓವರ್‌ಗಳಲ್ಲಿ 189 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಡೆಲ್ಲಿ ಪರ ಟ್ರಿಸ್ಟನ್ ಸ್ಟಬ್ಸ್ (60) ಏಕಾಂಗಿ ಹೋರಾಟ ನಡೆಸಿದರು.