ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs DC: ನಾಲ್ಕನೇ ಐಪಿಎಲ್‌ ಸೆಂಚುರಿ ಬಾರಿಸಿ ಮಿಂಚಿದ ಸಂಜು ಸ್ಯಾಮ್ಸನ್‌!

sanju Samson Scored 4th IPL Century: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಶತಕ ಬಾರಿಸಿದ್ದಾರೆ. ಅವರು ಸಿಎಸ್‌ಕೆ ಪರ ಮೊದಲ ಹಾಗೂ ಐಪಿಎಲ್‌ನ ನಾಲ್ಕನೇ ಶತಕವನ್ನು ಬಾರಿಸಿದ್ದಾರೆ.

CSK vs DC: ನಾಲ್ಕನೇ ಐಪಿಎಲ್‌ ಶತಕ ಬಾರಿಸಿದ ಸಂಜು ಸ್ಯಾಮ್ಸನ್‌!

ಸಿಎಸ್‌ಕೆ ಪರ ಮೊದಲ ಶತಕ ಬಾರಿಸಿದ ಸಂಜು ಸ್ಯಾಮ್ಸನ್‌. -

Profile
Ramesh Kote Apr 11, 2026 9:20 PM

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ (IPL 2026) ಆರಂಭಿಕ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ (Sanju Samson) ಕೊನೆಗೂ ಫಾರ್ಮ್‌ಗೆ ಮರಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ತನ್ನ ನಾಲ್ಕನೇ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್‌ ಮಾಡಿ ಸಿಎಸ್‌ಕೆ ಪರ ಮೊದಲನೇ ಶತಕವನ್ನು ಬಾರಿಸಿದ್ದಾರೆ. ಅಲ್ಲದೆ 19ನೇ ಆವೃತ್ತಿಯಲ್ಲಿ ಇದು ಮೊದಲ ಶತಕವಾಗಿದೆ. ಅಂದ ಹಾಗೆ ಕೇರಳ ಮೂಲದ ಸಂಜು ಸ್ಯಾಮ್ಸನ್‌ ಅವರ ಐಪಿಎಲ್‌ ವೃತ್ತಿ ಜೀವನದ ನಾಲ್ಕನೇ ಶತಕ ಇದಾಗಿದೆ.

ಇಲ್ಲಿನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ 18ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಸಂಜು ಸ್ಯಾಮ್ಸನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಇನಿಂಗ್ಸ್‌ ಆರಂಭಿಸಿದರು. ಗಾಯಕ್ವಾಡ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ನಿಂತು ಬ್ಯಾಟ್‌ ಮಾಡಿದ ಸಂಜು, 52 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಸಿಎಸ್‌ಕೆ ಪರ ಮೊದಲ ಶತಕವನ್ನು ಸಿಡಿಸಿದರು. ಕಳೆದ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದ ಅವರು, ಈ ಪಂದ್ಯದಲ್ಲಿ ತಮ್ಮ ನಾಲ್ಕನೇ ಶತಕ ಬಾರಿಸಿ ಕಮ್‌ಬ್ಯಾಕ್‌ ಮಾಡಿದರು.

PBKS vs SRH: ಶ್ರೇಯಸ್‌ ಅಯ್ಯರ್‌ ನಾಯಕನ ಆಟದಿಂದ ಗೆದ್ದು ಬೀಗಿದ ಪಂಜಾಬ್‌ ಕಿಂಗ್ಸ್‌!

20 ಓವರ್‌ಗಳನ್ನು ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್‌, 56 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ ಅಜೇಯ 115 ರನ್‌ಗಳನ್ನು ಬಾರಿಸಿದರು. ಅಲ್ಲದೆ ಆಯುಷ್‌ ಮ್ಹಾತ್ರೆ ಅವರ ಜೊತೆಗೆ ಎರಡನೇ ವಿಕೆಟ್‌ಗೆ 68 ಎಸೆತಗಳಲ್ಲಿ 113 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆಯುಷ್‌ ಕೂಡ ಉತ್ತಮವಾಗಿ ಬ್ಯಾಟ್‌ ಮಾಡಿ 36 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 3 ಬೌಂಡರಿಯೊಂದಿಗೆ 59 ರನ್‌ಗಳನ್ನು ಚಚ್ಚಿದರು. ಕೊನೆಯಲ್ಲಿ ಶಿವಂ ದುಬೆ 10 ಎಸೆತಗಳಲ್ಲಿ 20 ರನ್‌ಗಳನ್ನು ಬಾರಿಸಿದ್ದರು.

ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 212 ರನ್‌ಗಳನ್ನು ಬಾರಿಸಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 213 ರನ್‌ಗಳ ಗುರಿಯನ್ನು ನೀಡಿತು. ಡೆಲ್ಲಿ ಪರ ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಕಿತ್ತರು.



ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಸಂಜು

ಕಳೆದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಸಂಜು ಸ್ಯಾಮ್ಸನ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು 97, 89 ಹಾಗೂ 89 ರನ್‌ಗಳನ್ನು ಗಳಿಸಿದ್ದರು. ಕೊನೆಯ ಎರಡು ಇನಿಂಗ್ಸ್‌ಗಳು ಸೂಪರ್‌-8 ಹಾಗೂ ಸೆಮಿಫೈನಲ್‌ನಲ್ಲಿ ಮೂಡಿ ಬಂದಿದ್ದವು. ಆ ಮೂಲಕ ಭಾರತ ತಂಡ ಮೂರನೇ ಟಿ20 ವಿಶ್ವಕಪ್‌ ಗೆಲುವಿಗೆ ಸಂಜು ನೆರವು ನೀಡಿದ್ದರು. ಅತ್ಯುತ್ತಮ ಫಾರ್ಮ್‌ ಮೂಲಕ ಸಿಎಸ್‌ಕೆಗೆ ಸಂಜು ಬಂದಿದ್ದರು. ಆದರೂ ಅವರು ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು.

28 ಎಸೆತಗಳಲ್ಲಿ 74 ರನ್‌ ಚಚ್ಚಿದ ಅಭಿಷೇಕ್‌ ಶರ್ಮಾ, ಪವರ್‌ಪ್ಲೇನಲ್ಲಿ ಮೂರನೇ ಗರಿಷ್ಠ ಮೊತ್ತ ದಾಖಲಿಸಿದ ಎಸ್‌ಆರ್‌ಎಚ್‌!

ಐಪಿಎಲ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಶತಕಗಳ ವಿವರ

102 (63) vs RPS, ಪುಣೆ, 2017

102* (55) vs SRH, ಹೈದರಾಬಾದ್‌, 2019

119 (63) vs PBKS, ವಾಂಖೆಡೆ, 2021

102* (52) vs DC, ಚೆನ್ನೈ, 2026