ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KCL 2025: ಏಷ್ಯಾ ಕಪ್‌ಗೂ ಮುನ್ನ ಮತ್ತೊಂದು ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್‌!

ಮುಂಬರುವ ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೇರಳ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಸಂಜು ಮತ್ತೊಂದು ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದಾರೆ.

ಕೇರಳ ಕ್ರಿಕೆಟ್‌ ಲೀಗ್‌ನಲ್ಲಿ ಮತ್ತೊಂದು ಫಿಫ್ಟಿ ಬಾರಿಸಿದ ಸಂಜು!

ಕೇರಳ ಕ್ರಿಕೆಟ್‌ ಲೀಗ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್‌.

Profile Ramesh Kote Aug 28, 2025 10:48 PM

ತಿರುವನಂತಪುರಂ: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಪ್ರಸ್ತುತ ನಡಯುತ್ತಿರುವ ಕೇರಳ ಕ್ರಿಕೆಟ್‌ ಲೀಗ್‌ (KCL 2025) ಟೂರ್ನಿಯಲ್ಲಿ ತಮ್ಮ ರೆಡ್‌ ಹಾಟ್‌ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಗುರುವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಚ್ಚಿ ಬ್ಲೂ ಟೈಗರ್ಸ್‌ (Kochi Blue Tigers) ತಂಡದ ಪರ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಮತ್ತೊಂದು ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸಂದೇಶವನ್ನು ರವಾನಿಸಿದ್ದಾರೆ.

ತ್ರಿವಂಡ್ರಮ್‌ ರಾಯಲ್ಸ್‌ ವಿರುದ್ಧ ತಮ್ಮ ನಾಲ್ಕನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ಇನಿಂಗ್ಸ್‌ ಆರಂಭಿಸಿ ಕೇವಲ 37 ಎಸೆತಗಳಲ್ಲಿ ಐದು ಭರ್ಜರಿ ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 62 ರನ್‌ಗಳನ್ನು ಸಿಡಿಸಿದ್ದಾರೆ. ಇವರು 167.57ರ ಸ್ಟ್ರೈಕ್‌ನಲ್ಲಿ ಬ್ಯಾಟ್‌ ಬೀಸಿದ್ದು ವಿಶೇಷವಾಗಿತ್ತು.

Asia Cup 2025: ಶುಭಮನ್ ಗಿಲ್‌ಗಾಗಿ ಸಂಜು ಸ್ಯಾಮ್ಸನ್‌ಗೆ ಅನ್ಯಾಯ ಮಾಡಬೇಡಿ!

ಸಂಜು ಸ್ಯಾಮ್ಸನ್‌ ಅವರ ಜೊತೆಗೆ ವಿ ಮನೋಹರನ್‌ (42 ರನ್‌) ಹಾಗೂ ನಿಖಿಲ್‌ ತೊಟತ್‌ (45 ರನ್‌) ಅವರ ಬ್ಯಾಟಿಂಗ್‌ ಬಲದಿಂದ ಕೊಚ್ಚಿ ಬ್ಲೂ ಟೈಗರ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 191 ರನ್‌ಗಳನ್ನು ಕಲೆ ಹಾಕಿತು. ತ್ರಿವಂಡ್ರಮ್‌ ರಾಯಲ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಅಭಿಜಿತ್‌ ಪ್ರವೀಣ್‌ 26 ರನ್‌ ನೀಡಿ 3 ವಿಕೆಟ್‌ ಕಿತ್ತಿದ್ದರು.

ಬಳಿಕ ಗುರಿ ಹಿಂಬಾಲಿಸಿದ ತ್ರಿವಂಡ್ರಮ್‌ ರಾಯಲ್ಸ್‌ ತಂಡ, ಸಂಜೀವ್‌ ಸತೇರಸನ್‌ ( 70 ರನ್‌) ಅವರ ಅರ್ಧಶತಕದ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 9 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು.

ಏಷ್ಯಾ ಕಪ್‌ ಟೂರ್ನಿಗೂ ಮುನ್ನ 42 ಎಸೆತಗಳಲ್ಲಿ ಶತಕ ಬಾರಿಸಿದ ಸಂಜು ಸ್ಯಾಮ್ಸನ್‌!

ಎರಡು ದಿನಗಳ ಹಿಂದೆ ತ್ರಿಸುರ್‌ ಟೈಟನ್ಸ್‌ ತಂಡದ ವಿರುದ್ದದ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಈ ಪಂದ್ಯದಲ್ಲಿ ಆಡಿದ್ದ 46 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 89 ರನ್‌ಗಳನ್ನು ಬಾರಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಅವರು 193ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಬಾರಿಸಿದ್ದು ವಿಶೇಷವಾಗಿತ್ತು.

ಕೇರಳ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಇವರು ಆಡಿದ್ದ ನಾಲ್ಕು ಪಂದ್ಯಗಳಿಂದ 71.25ರ ಸರಾಸರಿ ಹಾಗೂ 182ರ ಸ್ಟ್ರೈಕ್‌ ರೇಟ್‌ನಲ್ಲಿ 285 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಮುಂಬರುವ ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಸಂಜು ಸ್ಯಾಮ್ಸನ್‌ ಅವರ ಫಾರ್ಮ್‌, ಭಾರತ ತಂಡಕ್ಕೆ ಲಾಭದಾಯಕವಾಗಲಿದೆ.