ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕಾವಲು ಸಮಿತಿಗಳು ಬಲವರ್ಧನೆಯಾದಲ್ಲಿ ಪೋಕ್ಸೋ ಪ್ರಕರಣಗಳ ತಡೆಗಟ್ಟಬಹುದು

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಗ್ರಾಮಮಟ್ಟದಲ್ಲಿ ರಚನೆಯಾಗಿರುವ ಕಾವಲು ಸಮಿತಿ ಗಳು ಬಲವರ್ಧನೆಯಾದಲ್ಲಿ ಶೇಕಡ ೯೦ರಷ್ಟು ಬಾಲ್ಯ ವಿವಾಹಗಳನ್ನು, ಪೋಕ್ಸೋ ಪ್ರಕರಣಗಳನ್ನು ಹಾಗೂ ಮಕ್ಕಳ ಮೇಲಿನ ಎಲ್ಲ ರೀತಿಯ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಹುದು  ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಅವರು ಅಭಿಪ್ರಾಯಪಟ್ಟರು.

ಸಮಿತಿಗಳು ಬಲವರ್ಧನೆಯಾದಲ್ಲಿ ಪೋಕ್ಸೋ ಪ್ರಕರಣಗಳ ತಡೆಗಟ್ಟಬಹುದು

Ashok Nayak Ashok Nayak Aug 28, 2025 11:08 PM

7 ತಿಂಗಳಲ್ಲಿ ಜಿಲ್ಲೆಯಲ್ಲಿ ಪೋಕ್ಸೋ ೧೦೪, ಬಾಲ್ಯ ವಿವಾಹ ೦೬, ಬಾಲಕಾರ್ಮಿಕ ೦೪, ಅಪಹರಣ ೨೩

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜನವರಿ ೨೦೨೫ ರಿಂದ ಜು.೨೦೨೫ರವರೆಗೆ ಪೋಕ್ಸೋ ಪ್ರಕರಣಗಳು ೧೦೪, ಬಾಲ್ಯವಿವಾಹ ೦೬, ಬಾಲಕಾರ್ಮಿಕ ಪ್ರಕರಣ-೦೪, ಜೆಜೆ ಕಾಯ್ದೆ-೦೪,ಅಪಹರಣ ೨೩ ಪ್ರಕರಣಗಳು ದಾಖಲಾಗಿವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ತಿಳಿಸಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆರ್.ಟಿ.ಇ- ೨೦೦೯, ಪೋಕ್ಸೋ -೨೦೧೨, ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೦೬ ಹಾಗೂ ಬಾಲನ್ಯಾಯ ಕಾಯ್ದೆ ಗಳ ಅನುಷ್ಠಾನ ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮ, ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ: Chinthamani News: ಬಿಜೆಪಿಯಿಂದ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹೋರಾಟ ಬೃಹತ್ ಪ್ರತಿಭಟನೆ

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಗ್ರಾಮಮಟ್ಟದಲ್ಲಿ ರಚನೆಯಾಗಿರುವ ಕಾವಲು ಸಮಿತಿ ಗಳು ಬಲವರ್ಧನೆಯಾದಲ್ಲಿ ಶೇಕಡ ೯೦ರಷ್ಟು ಬಾಲ್ಯ ವಿವಾಹಗಳನ್ನು, ಪೋಕ್ಸೋ ಪ್ರಕರಣ ಗಳನ್ನು ಹಾಗೂ ಮಕ್ಕಳ ಮೇಲಿನ ಎಲ್ಲ ರೀತಿಯ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಹುದು  ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಅವರು ಅಭಿಪ್ರಾಯಪಟ್ಟರು.

ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸ ಮಾತ್ರವಲ್ಲ, ಇತರ ಇಲಾಖೆಗಳ ಸಮನ್ವಯತೆ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಎಲ್ಲ ಇಲಾಖೆಗಳು ತಳಮಟ್ಟದಿಂದ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು, ಇದಕ್ಕಾಗಿ ತರಬೇತಿ ಕಾರ್ಯಕ್ರಮಗಳು ಅರಿವು ಕಾರ್ಯಗಾರಗಳನ್ನು ಆಯೋಜಿಸಬೇಕು ಎಂದರು.

ಚುನಾವಣಾ ಕರ್ತವ್ಯದ ರೀತಿ ಮಕ್ಕಳ ರಕ್ಷಣೆಯ ಕಾರ್ಯಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಿದರೆ ಮಾತ್ರ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಬಹುದು. ಮಕ್ಕಳೇ ಈ ದೇಶದ ಆಸ್ತಿ, ಸಮಾಜ ಮತ್ತು ದೇಶದ ನಿರ್ಮಾಣದಲ್ಲಿ ಮಕ್ಕಳ ರಕ್ಷಣೆಯ ಅತ್ಯಗತ್ಯತೆ ಇದೆ, ಇದನ್ನು ಪ್ರತಿಯೊ ಬ್ಬರು ಮನಗಾಣಬೇಕು. ಮಕ್ಕಳ ರಕ್ಷಣಾ ನೀತಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ  ಕಡ್ಡಾಯವಾಗಿ ಪಾಲಿಸಬೇಕು.ನಾಯಿ ಕಡಿತ ದಿಂದ ಮಕ್ಕಳನ್ನು ರಕ್ಷಿಸಲು  ಆಯೋಗ ಸರ್ಕಾರದ ಗಮನ ಸೆಳೆಯಲಿದೆ. ಕೃಷಿ ಹೊಂಡಗಳಲ್ಲಿ ಮಕ್ಕಳು ಬಿದ್ದು ಸಾವು ಆಗುತ್ತಿರುವುದನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ದುರಸ್ತಿ ಹಂತದ ಹಾಗೂ ಬೀಳುವ ಹಂತದಲ್ಲಿರುವ ಶಾಲಾ ಕೊಠಡಿಗಳ ಮಾಹಿತಿಯನ್ನು ತುರ್ತಾಗಿ ನೀಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ   ಉತ್ತಮ ಕಲಿಕಾ ವಾತಾವರಣ ನಿರ್ಮಿಸುವಂತಹ ಕೊಠಡಿಗಳ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಸಲಹೆಯನ್ನು ಆಯೋಗ ನೀಡಲಿದೆ.ಯಾವುದೇ ಕಾರಣಕ್ಕೂ ಸುರಕ್ಷಿತವಲ್ಲದ ಶಾಲಾ ಕೊಠಡಿ ಗಳಲ್ಲಿ ಪಾಠ ಪ್ರವಚನಗಳನ್ನು ನಡೆಸಬಾರದು ಎಂದು ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ಒಟ್ಟಾರೆ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಯ ಜೊತೆಗೆ ರಕ್ಷಣಾತ್ಮಕ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಿಸಲು ಆಯೋಗ ಕಾರ್ಯೋನ್ಮುಕವಾಗಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮವನ್ನು  ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು, ಕಳೆದ ಏಪ್ರಿಲ್ ನಿಂದ ಇವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೪೧ ಬಾಲ್ಯ ವಿವಾಹ ಪ್ರಕರಣಗಳ ದೂರು ಅರ್ಜಿಗಳು ಸ್ಪೀಕಾರ ಆಗಿವೆ ಈ ಪೈಕಿ ೩೨ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ೯ ಬಾಲ್ಯ ವಿವಾಹಗಳು ಜರುಗಿದ್ದು, ಎಲ್ಲ ಪ್ರಕರಣಗಳನ್ನು  ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿವೆ ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಪರಿಸ್ಥಿತಿ  ಇದೆ.ಇನ್ನು ಮುಂದೆ ಕಾವಲು ಸಮಿತಿಗಳು ಪರಿಣಾಮಕಾರಿಯಾಗಿ ತಳಹಂತದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದೇನೆ  ಎಂದು ತಿಳಿಸಿದರು.

ಬಾಲ್ಯವಿವಾಹ ಪ್ರಕರಣಗಳ ಮಾಹಿತಿ
ಬಾಗೇಪಲ್ಲಿ-೩೫,ಚಿಂತಾಮಣಿ ೦, ಗುಡಿಬಂಡೆ-೦೨, ಶಿಡ್ಲಘಟ್ಟ-೦೪.ಚಿಕ್ಕಬಳ್ಳಾಪುರ-೦೩,ಗೌರಿಬಿದನೂರು-೦

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ,  ವೆಂಕಟೇಶ್, ಶೇಖರ್ ಗೌಡ ಜಿ ರಾಮಾತ್ನಾಳ್ , ಡಾ ಕೆ.ಟಿ ತಿಪ್ಪೇಸ್ವಾಮಿ, ಎಸ್ ಮಂಜು,  ಅಪರ್ಣ ಎಂ ಕೊಳ್ಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಡಾ ಎನ್ ಭಾಸ್ಕರ್  ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.