Sanju Samson or Jitesh Sharma-ಏಷ್ಯಾ ಕಪ್ ಟೂರ್ನಿಯಲ್ಲಿ ಯಾರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಬೇಕು?
2025ರ ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಭಾರತ ತಂಡದ ಪರ ಯಾರು ವಿಕೆಟ್ ಕೀಪರ್ ಆಗಿ ಆಡಲಿದ್ದಾರೆಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಅವರ ನಡುವೆ ಯಾರು ವಿಕೆಟ್ ಕೀಪರ್ ಆಗಿ ಆಡಬಹುದು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಸಂಜು ಸ್ಯಾಮ್ಸನ್-ಜಿತೇಶ ಶರ್ಮಾ ನಡುವೆ ಮೊದಲ ವಿಕೆಟ್ ಕೀಪರ್ ಯಾರು? -

ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯು ಸೆಪ್ಟಂಬರ್ 9 ರಂದು ಆರಂಭವಾಗಲಿದೆ. ಸೆಪ್ಟಂಬರ್ 10 ರಂದು ಯುಎಇ ವಿರುದ್ಧ ಆಡುವ ಮೂಲಕ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದ ಭಾರತ ತಂಡ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಯುಎಇ, ಒಮನ್ ಹಾಗೂ ಪಾಕಿಸ್ತಾನ ತಂಡಗಳ ಜೊತೆಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ. ಭಾರತ ತಂಡದ ಪ್ಲೇಯಿಂಗ್ XI ಬಹುತೇಕ ಖಚಿತವಾಗಿದೆ. ಶುಭಮನ್ ಗಿಲ್ ಉಪ ನಾಯಕನಾಗಿ ತಂಡಕ್ಕೆ ಮರಳಿರುವುದರಿಂದ ತಂಡದ ಪ್ಲೇಯಿಂಗ್ XIನ ಅಗ್ರ ಸ್ಥಾನದಲ್ಲಿ ಬದಲಾವಣೆಯನ್ನು ನಾವು ನಿರೀಕ್ಷೆ ಮಾಡಬಹುದು. ಅಭಿಷೇಕ್ ಶರ್ಮಾ ಸದ್ಯ ನಂ 1 ಬ್ಯಾಟ್ಸ್‌ಮನ್ ಆಗಿರುವ ಕಾರಣ, ಬಹುಶಃ ಸಂಜು ಅವರ ಸ್ಥಾನದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು.
30ರ ಪ್ರಾಯದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ಜಿತೇಶ್ ಶರ್ಮಾ ಅವರ ನಡುವೆ ಪೈಪೋಟಿ ಎದುರಿಸಲಿದ್ದಾರೆ. ಒಂದು ವೇಳೆ ಗಿಲ್ ಬಂದಿಲ್ಲವಾಗಿದ್ದರೆ, ಸಂಜು ನೇರವಾಗಿ ಓಪನರ್ ಆಗಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರು. ಆದರೆ, ಗಿಲ್ ಆಗಮನದಿಂದ ಸಂಜು ಸ್ಯಾಮ್ಸನ್ ಅವರ ಆರಂಭಿಕ ಸ್ಥಾನದ ಮೇಲೆ ಪರಿಣಾಮ ಬೀರಿದೆ. ಇದೀಗ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಅವಕಾಶ ಸಿಗವಹುದು. ಆದರೆ, ಜಿತೇಶ್ ಶರ್ಮಾ ಮ್ಯಾಚ್ ಪಿನಿಷರ್ ಆಗಿ ಉತ್ತಮವಾಗಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್ ಫಿನಿಷರ್ ಆಗಿ ಸಕ್ಸಸ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಜಿತೇಶ್ ಶರ್ಮಾ, ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ಗೆ ಕಠಿಣ ಪೈಪೋಟಿ ನೀಡಲಿದ್ದಾರೆ.
Asia Cup 2025: ಏಷ್ಯಾಕಪ್ ಟಿ20ಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೊದಲ ವಿಕೆಟ್ ಕೀಪರ್ ಆಗಿ ಯಾರು ಆಡಲಿದ್ದಾರೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಸಂಜು ಸ್ಯಾಮ್ಸನ್-ಜಿತೇಶ್ ಶರ್ಮಾರ ಟಿ20ಐ ಅಂಕಿ ಅಂಶಗಳು
ಸಂಜು ಸ್ಯಾಮ್ಸನ್
2015ರಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಸಂಜು ಸ್ಯಾಮ್ಸನ್, ಭಾರತದ ಪರ ನಿಯಮಿತವಾಗಿ ಆಡಿಲ್ಲ. ಅವರು ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 25.32ರ ಸರಾಸರಿ ಮತ್ತು 152.38ರ ಸ್ಟ್ರೈಕ್ ರೇಟ್‌ನಲ್ಲಿ 861 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಎರಡು ಅರ್ಧಶತಕಗಳು ಹಾಗೂ ಮೂರು ಶತಕಗಳನ್ನು ಬಾರಿಸಿದ್ದಾರೆ. ಅವರು ಆರಂಭಿಕನಾಗಿ ಆಡುವ ವೇಳೆ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡಿದ 17 ಇನಿಂಗ್ಸ್‌ಗಳಿಂದ 32.63ರ ಸರಾಸರಿ ಹಾಗೂ 178.77ರ ಸ್ಟ್ರೈಕ್ ರೇಟ್‌ನಲ್ಲಿ 532 ರನ್‌ಗಳನ್ನು ಗಳಿಸಿದ್ದಾರೆ.
Asia Cup 2025: ಏಷ್ಯಾಕಪ್ ಎಲ್ಲ ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ
ಜಿತೇಶ್ ಶರ್ಮಾ
ಇನ್ನು ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರು ಇಲ್ಲಿಯ ತನಕ ಆಡಿದ 9 ಟಿ20ಐ ಪಂದ್ಯಗಳಿಂದ 14.28ರ ಸರಾಸರಿ ಮತ್ತು 147.05ರ ಸ್ಟ್ರೈಕ್ ರೇಟ್‌ನಲ್ಲಿ 100 ರನ್‌ಗಳನ್ನು ಬಾರಿಸಿದ್ದಾರೆ. ಆದರೆ, ಜಿತೇಶ್ ಶರ್ಮಾ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಮಾತ್ರ ಈ ರನ್‌ಗಳನ್ನು ಸಿಡಿಸಿದ್ದಾರೆ.
ಸಂಜು, ಜಿತೇಶ್‌ರ ಟಿ20 ಕ್ರಿಕೆಟ್ ದಾಖಲೆ
ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ ಆಡಿದ 304 ಪಂದ್ಯಗಳಿಂದ 29.68ರ ಸರಾಸರಿಯಿಂದ 7,629 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು 137.01ರ ಸ್ಟ್ರೈಕ್ ರೇಟ್‌ನಲ್ಲಿ 48 ಅರ್ಧಶತಕಗಳು ಹಾಗೂ 6 ಆರು ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಜಿತೇಶ್ ಶರ್ಮಾ 141 ಟಿ20 ಪಂದ್ಯಗಳಿಂದ 27.22ರ ಸರಾಸರಿ ಮತ್ತು 152.29ರ ಸ್ಟ್ರೈಕ್ ರೇಟ್‌ನಲ್ಲಿ 2886 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.
Asia Cup 2025: ಏಷ್ಯಾ ಕಪ್: ಯಂಗ್ ಇಂಡಿಯಾ ಫೇವರಿಟ್
ಇತ್ತೀಚಿನ ಫಾರ್ಮ್
ಸಂಜು ಸ್ಯಾಮ್ಸನ್: ದುಬೈನಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗುವುದಕ್ಕೂ ಮುನ್ನ ಸಂಜು, ಕೇರಳಿ ಕ್ರಿಕೆಟ್ ಲೀಗ್‌ನಲ್ಲಿ ಆಡಿದ್ದರು. ಅವರು ಕೊಚ್ಚಿ ಬ್ಲೂ ಟೈಗರ್ಸ್ ತಂಡದ ಪರ ಆಡಿದ್ದ ಆರು ಇನಿಂಗ್ಸ್‌ಗಳಿಂದ 73.60ರ ಸರಾಸರಿ ಮತ್ತು 186.80ರ ಸ್ಟ್ರೈಕ್ ರೇಟ್‌ನಲ್ಲಿ 368 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದರು. ಆ ಮೂಲಕ ಅವರು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.
ಜಿತೇಶ್ ಶರ್ಮಾ: ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರು ಇತ್ತೀಚೆಗೆ ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ ಎನ್‌ಎಸಿಒ ಬ್ಲಾಸ್ಟರ್ಸ್ ತಂಡವನ್ನು ಮುನ್ನಡೆಸಿದ್ದರು ಹಾಗೂ ಇವರ ನಾಯಕತ್ವದಲ್ಲಿ ಈ ತಂಡ ಪ್ರಶಸ್ತಿಯನ್ನು ಗೆದ್ದಿತ್ತು. ಇವರು ಆಡಿದ್ದ ಏಳು ಇನಿಂಗ್ಸ್‌ಗಳಿಂದ 51ರ ಸರಾಸರಿ ಮತ್ತು 177.91ರ ಸ್ಟ್ರೈಕ್ ರೇಟ್‌ನಲ್ಲಿ 153 ರನ್‌ಗಳನ್ನು ಬಾರಿಸಿದ್ದರು.
Asia Cup 2025: ಶ್ರೀಲಂಕಾ ತಂಡದ ವೀಕ್ನೆಸ್ ಬಹಿರಂಗಪಡಿಸಿದ ಆಕಾಶ್ ಚೋಪ್ರಾ!
ಜಿತೇಶ್ ಶರ್ಮಾ ಬದಲು ಪ್ಲೇಯಿಂಗ್ xiನಲ್ಲಿ ಆಡಲು ಸಂಜು ಅರ್ಹರು
ಟಿ20 ಕ್ರಿಕೆಟ್‌ನ ದಾಖಲೆಗಳು ಹಾಗೂ ಇತ್ತೀಚಿನ ಫಾರ್ಮ್ ಅನ್ನು ಗಮನಿಸಿದರೆ, ಸಂಜು ಸ್ಯಾಮ್ಸನ್ ಅವರು, ಜಿತೇಶ್ ಶರ್ಮಾಗಿಂತ ಮುನ್ನಡೆಯಲ್ಲಿದ್ದಾರೆ. ಜಿತೇಶ್ ಶರ್ಮಾ ಅವರು ಕೂಡ ಉತ್ತಮವಾಗಿದ್ದಾರೆ. ಆದರೆ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಎರಡನೇ ವಿಕೆಟ್ ಕೀಪರ್ ಆಗಿದ್ದರು. ಇದೀಗ ರಿಷಭ್ ಪಂತ್ ತಂಡದಲ್ಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯಲ್ಲಿನ ಅವರ ಫಾರ್ಮ್ ಅದ್ಭುತವಾಗಿದೆ. ಹಾಗಾಗಿ ಜಿತೇಶ್ ಶರ್ಮಾ ಬದಲು ಸಂಜು ಸ್ಯಾಮ್ಸನ್‌ಗೆ ಆಡುವ ಬಳಗದಲ್ಲಿ ಸ್ಥಾನ ನೀಡಬಹುದು.