ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ಮದನ್‌ ಲಾಲ್‌!

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಮಾಜಿ ಕ್ರಿಕೆಟಿಗ ಮದನ್‌ ಲಾಲ್‌ ಆಯ್ಕೆ ಮಾಡಿದ್ದಾರೆ. ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಟ್ಟು ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅವರನ್ನು ಆರಿಸಿದ್ದಾರೆ.

ಏಷ್ಯಾ ಕಪ್‌ ಭಾರತಕ್ಕೆ ಓಪನರ್ಸ್‌ ಆರಿಸಿದ ಮದನ್‌ ಲಾಲ್‌!

ಭಾರತ ತಂಡಕ್ಕೆ ಆರಂಭಿಕರನ್ನು ಆರಿಸಿದ ಮದನ್‌ ಲಾಲ್‌. -

Profile Ramesh Kote Sep 6, 2025 8:05 PM

ದುಬೈ: ಸೆಪ್ಟಂಬರ್‌ 9 ರಿಂದ 28ರವರೆಗೆ ನಡೆಯುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡಕ್ಕೆ ಇಬ್ಬರು ಓಪನಿಂಗ್‌ ಬ್ಯಾಟ್ಸ್‌ಮನ್‌ಗಳನ್ನು ಮಾಜಿ ಕ್ರಿಕೆಟಿಗ ಮದನ್‌ ಲಾಲ್‌ (Madan Lal) ಆಯ್ಕೆ ಮಾಡಿದ್ದಾರೆ. ಟೀಮ್‌ ಇಂಡಿಯಾ ಆರಂಭಿಕ ಸ್ಥಾನಕ್ಕೆ ಮೂವರು ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಭಿಷೇಕ್‌ ಶರ್ಮಾ,‌ ವಿಕೆಟ್‌ ಕೀಪರ್‌ ಸಂಜು ಸ್ಯಾಮನ್ (Sanju Samson) ಹಾಗೂ ಉಪ ನಾಯಕ ಶುಭಮನ್‌ ಗಿಲ್‌ (Shubman Gill) ಇದ್ದಾರೆ. ಈ ಮೂವರ ಪೈಕಿ ಇಬ್ಬರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮದನ್‌ ಲಾಲ್‌ ಆಯ್ಕೆ ಮಾಡಿದ್ದಾರೆ.

ದೀರ್ಘಾವಧಿ ಬಳಿಕ ಭಾರತ ಟಿ20 ತಂಡಕ್ಕೆ ಶುಭಮನ್‌ ಗಿಲ್‌ ಮರಳಿದ್ದಾರೆ ಹಾಗೂ ಅವರಿಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ ಅವರ ಪ್ಲೇಯಿಂಗ್‌ XI ಆಯ್ಕೆಯ ಬಗ್ಗೆ ಅನುಮಾನಗಳು ಉಂಟಾಗಿವೆ. ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಬಹುದು. ಆ ಮೂಲಕ ಸಂಜು ಸ್ಯಾಮ್ಸನ್‌ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಹುದೆಂದು ಹೇಳಲಾಗುತ್ತಿದೆ.

Asia Cup 2025: ಏಷ್ಯಾಕಪ್‌ ಎಲ್ಲ ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ

ಎಎನ್‌ಐ ಜೊತೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದ ಮದನ್‌ ಲಾಲ್‌, "ಅವರು ಚೆನ್ನಾಗಿ ಆಡಿದ್ದಾರೆ ಹಾಗೂ ಮುಂದೆಯೇ ಆಡಬಹುದೆಂಬ ಬಗ್ಗೆ ನನಗೆ ನಂಬಿಕೆ ಇದೆ. ಅಭಿಷೇಕ್‌ ಶರ್ಮಾ ಅವರು 225ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ ಹಾಗೂ ಶುಭಮನ್‌ ಗಿಲ್‌ ಅವರ ಸ್ಟ್ರೈಕ್‌ ರೇಟ್‌ 150ಕ್ಕೂ ಹೆಚ್ಚಿದೆ. ಟಿ20ಐ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ತುಂಬಾ ಮುಖ್ಯ. ಆರಂಭಿಕ ಆರು ಓವರ್‌ಗಳಲ್ಲಿ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳು ಪಂದ್ಯವನ್ನು ಸೆಟ್‌ ಮಾಡುತ್ತಾರೆ. ನಂತರ 7, 8, 9 ಹಾಗೂ ಮುಂದುವರಿದು 16ನೇ ಓವರ್‌ವರೆಗೂ ಸರಾಸರಿಯಲ್ಲಿ ಬ್ಯಾಟ್‌ ಮಾಡಿದರೆ ಸಾಕು. ನಂತರ ಕೊನೆಯ 3-4 ಓವರ್‌ಗಳಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ಅಕ್ಷರ್‌ ಪಟೇಲ್‌ ಅವರಂಥ ಬಿಗ್‌ ಹಿಟ್ಟರ್‌ಗಳು ಆಡಬೇಕು," ಎಂದು ಹೇಳಿದ್ದಾರೆ.

2025ರ ಏಷ್ಯಾ ಕಪ್‌ ಟೂರ್ನಿಯು ದುಬೈನಲ್ಲಿ ನಡೆಯಲಿದೆ. ಇಲ್ಲಿ ಆರ್ದ್ರತೆ ಜಾಸ್ತಿ ಇರುವ ಕಾರಣ, ಕಂಡೀಷನ್ಸ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಹಾಗಾಗಿ ಭಾರತ ತಂಡದಲ್ಲಿ ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ ಹಾಗೂ ಅಕ್ಷರ್‌ ಪಟೇಲ್‌ ಒಳಗೊಂಡ ಬಲಿಷ್ಠ ಸ್ಪಿನ್‌ ಪಡೆ ಇದೆ. ಇನ್ನು ಮೀಸಲು ಆಟಗಾರರ ಗುಂಪಿನಲ್ಲಿ ವಾಷಿಂಗ್ಟನ್‌ ಸುಂದರ್‌ ಇದ್ದಾರೆ.

Asia Cup 2025: ಶ್ರೀಲಂಕಾ ತಂಡದ ವೀಕ್ನೆಸ್‌ ಬಹಿರಂಗಪಡಿಸಿದ ಆಕಾಶ್‌ ಚೋಪ್ರಾ!

ಯುಎಇ ಕಂಡೀಷನ್ಸ್‌ ಬಗ್ಗೆ ಮಾತನಾಡಿದ ಮದನ್‌ ಲಾಲ್‌, "ಇಲ್ಲಿ ಬಿಸಿ ಹವಾಮಾನ ಇದೆ. ಆದ್ದರಿಂದ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಇಲ್ಲಿ ತುಂಬಾ ನಿರ್ಣಾಯಕವಾಗುತ್ತದೆ. ಇಲ್ಲಿ ಬಿಸಿ ಕಂಡೀಷನ್ಸ್‌ ಇರುವ ಕಾರಣ, ಸ್ಪಿನ್ನರ್‌ಗಳು ಆರಂಭದಲ್ಲಿಯೇ ಬೌಲ್‌ ಮಾಡಿದರೆ, ಬೇಗ ವಿಕೆಟ್‌ ಪಡೆಯಬಹುದು. ವಿಶ್ವದಲ್ಲಿಯೇ ಅತ್ಯುತ್ತಮ ಸ್ಪಿನ್ನರ್‌ಗಳು ನಮ್ಮ ತಂಡದಲ್ಲಿದ್ದಾರೆ. ಆರಂಭದಲ್ಲಿಯೇ ಅವರು ವಿಕೆಟ್‌ಗಳನ್ನು ಕಬಳಿಸಿದರೆ, ಪಂದ್ಯವನ್ನು ನಾವು ಮೇಲುಗೈ ಸಾಧಿಸಬಹುದು. ಈ ಟೂರ್ನಿಯಲ್ಲಿ ಸ್ಪಿನ್ನರ್‌ಗಳು ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಫ್ಘಾನಿಸ್ತಾನ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಹಾಗೂ ಪಾಕಿಸ್ತಾನ ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ. ಬಹುತೇಕ ತಂಡಗಳು ಸ್ಪಿನ್ನರ್‌ಗಳನ್ನು ಅವಲಂಬಿಸಿದೆ,"ಎಂದು ತಿಳಿಸಿದ್ದಾರೆ.

ಸೆಪ್ಟಂಬರ್‌ 9 ರಂದು ಏಷ್ಯಾ ಕಪ್‌ ಟೂರ್ನಿಯು ಆರಂಭವಾಗಲಿದ್ದು, ಭಾರತ ತಂಡ ಸೆ 10 ರಂದು ತನ್ನ ಮೊದಲನೇ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ. ನಂತರ ಸೆ 10 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಾದಾಟ ನಡೆಸಲಿದೆ. ನಂತರ ಸೆ 19 ರಂದು ಒಮಾನ್‌ ವಿರುದ್ಧ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಟೀಮ್‌ ಇಂಡಿಯಾ ಆಟಲಿದೆ.