ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯವರ ಫಿಟ್‌ನೆಸ್‌ ಪರೀಕ್ಷೆಯ ವಿವಾದದ ಬಗ್ಗೆ ಆಕಾಶ್‌ ಚೋಪ್ರಾ ಹೇಳಿಕೆ!

ಕಳೆದ ಕೆಲವು ದಿನಗಳ ಹಿಂದೆ ವಿರಾಟ್‌ ಕೊಹ್ಲಿಯವರು ಲಂಡನ್‌ನಲ್ಲಿ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿದ್ದರು ಎನ್ನುವ ವಿವಾದದ ಕುರಿತು ಆಕಾಶ್‌ ಚೋಪ್ರಾ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ವದಂತಿಗೆ ಯಾವುದೇ ಧೃಡೀಕರಣ ಇಲ್ಲ. ಒಂದು ವೇಳೆ ಈ ವಿಷಯ ವಾಸ್ತವವಾಗಿದ್ದರೆ ತಪ್ಪೇನು? ಇದು ಹೊಸ ಮಾರ್ಗವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್‌ ಕೊಹ್ಲಿಯ ಫಿಟ್‌ನೆಸ್‌ ಟೆಸ್ಟ್‌ ಬಗ್ಗೆ ಆಕಾಶ್‌ ಚೋಪ್ರಾ ಹೇಳಿಕೆ!

ವಿರಾಟ್‌ ಕೊಹ್ಲಿ ಫಿಟ್‌ನೆಸ್‌ ಟೆಸ್ಟ್‌ ಬಗ್ಗೆ ಆಕಾಶ್‌ ಚೋಪ್ರಾ ಹೇಳಿಕೆ. -

Profile Ramesh Kote Sep 6, 2025 9:29 PM

ದುಬೈ: ಇತ್ತೀಚಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಭಾರತೀಯ ಕ್ರಿಕೆಟ್‌ ಆಟಗಾರರ ಫಿಟ್‌ನೆಸ್‌ ಟೆಸ್ಟ್‌ ನಡೆದಿತ್ತು. ಆದರೆ ವಿರಾಟ್‌ ಕೊಹ್ಲಿಯವರು (Virat Kohli) ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಆದ್ದರಿಂದ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ತಮ್ಮ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗುವ ಕುರಿತು ಬಿಸಿಸಿಐಗೆ (BCCI) ಅನುಮತಿ ಕೋರಿದ್ದರು ಮತ್ತು ಅಲ್ಲಿಂದಲೇ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿದ್ದರು ಎನ್ನುವ ಕುರಿತು ವರದಿಗಳು ಹರಿದಾಡುತ್ತಿವೆ. ಇದು ಹೊಸ ಸಾಂಪ್ರದಾಯ ಎಂದು ಹಲವರು ಬೇಸರ ಹೊರಹಾಕಿದ್ದರು.

ಇದರ ಬೆನ್ನಲ್ಲೇ ವರದಿ ಮಾಡಿದ್ದ ದೈನಿಕ್‌ ಜಾಗರಣ್‌ ವರದಿಯೊಂದನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash Chopra) ಕಟುವಾಗಿ ಟೀಕಿಸಿದ್ದಾರೆ. ವಿರಾಟ್‌ ಕೊಹ್ಲಿಯವರು ಲಂಡನ್‌ನಿಂದದಲೇ ಫಿಟ್‌ನೆಸ್‌ ಟೆಸ್ಟ್‌ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಧೃಡೀಕರಣ ಇಲ್ಲ. ಒಂದು ವೇಳೆ ಅವರು ಹಾಗೆ ಮಾಡಿದರೆ ಅದರಲ್ಲಿ ತಪ್ಪೇನಿದೆ? ಎಂದು ಆಕಾಶ್‌ ಚೋಪ್ರಾ ಪ್ರಶ್ನಿಸಿದ್ದಾರೆ.

Asia Cup 2025: ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ಮದನ್‌ ಲಾಲ್‌!

ಈ ಬಗ್ಗೆ ಕ್ರೆಕ್ಸ್‌ (CREX)ನಲ್ಲಿ ಪ್ರತಿಕ್ರಿಯೆ ನೀಡಿರುವ ಆಕಾಶ್‌ ಚೋಪ್ರಾ, "ಈ ಸಮಯದಲ್ಲಿ ಇವು ಕೇವಲ ಊಹಾಪೋಹಗಳು ಮತ್ತು ವರದಿಗಳು. ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ತಮ್ಮ ಫಿಟ್‌ನೆಸ್ ಪರೀಕ್ಷೆಯನ್ನು ನಡೆಸಿದ್ದರು ಮತ್ತು ಇತರರು ಬೆಂಗಳೂರಿನಲ್ಲಿ ನೀಡಿದರು ಎಂಬುದಕ್ಕೆ ಯಾವುದೇ ದೃಢೀಕರಣ ಅಥವಾ ಸ್ಪಷ್ಟೀಕರಣವಿಲ್ಲ. ಖಂಡಿತಾ, ಅವರು ಇಲ್ಲಿ ಇಲ್ಲ. ಆದರೆ ಅವರು ಲಂಡನ್‌ನಲ್ಲಿ ಫಿಟ್‌ನೆಸ್‌ ಟೆಸ್ಟ್‌ ಕೊಟ್ಟಿದ್ದಾರೆಂಬ ಫೋಟೋಗಳನ್ನು ನಾನು ನೋಡಿಲ್ಲ. ಆದರೆ ಅವರು ಹಾಗೆ ಮಾಡಿದ್ದರೂ ಸಹ, ಅದು ಹೇಗೆ ಮುಖ್ಯ ಎಂದು ಭಾವಿಸೋಣ?" ಎಂದು ಹೇಳಿದ್ದಾರೆ.

ಇತರ ಕ್ರಿಕೆಟಿಗರು ಅನಿವಾರ್ಯದ ಕಾರಣ ತಾವು ಇರುವ ಸ್ಥಳದಿಂದಲೇ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗುವುದು ಉತ್ತಮ. ಇಂತಹ ಸಂದಿಗ್ದ ಸಮಯದಲ್ಲಿ ಫಿಟ್‌ನೆಸ್‌ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ಬದಲಾಗಿ ಈ ಮಾರ್ಗ ಉತ್ತಮ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

Asia Cup 2025: ಏಷ್ಯಾಕಪ್​ ಟಿ20ಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮುಂದಿನ ಬಾರಿ ಯಾರಾದರೂ ಬೇರೆಡೆ ಇದ್ದರೆ ಅಲ್ಲಿಂದಲೇ ಫಿಟ್‌ನೆಸ್ ಪರೀಕ್ಷೆಯನ್ನು ನೀಡುವ ಬಗ್ಗೆ ಪ್ರಕ್ರಿಯೆಗಳನ್ನು ರೂಪಿಸಬೇಕು. ಯಾರಾದರೂ ಇದನ್ನು ಒಮ್ಮೆ ಮಾಡಿದರೆ, ಮರಳಿನಲ್ಲಿ ಗೆರೆ ಎಳೆದು ಇದು ನಿಯಮ ಎಂದು ಹೇಳಬಹುದು. ತದನಂತರ ಫಿಟ್‌ನೆಸ್‌ ಟೆಸ್ಟ್‌ಗೆ ಬೆಂಗಳೂರಿಗೆ ಹೋಗುವ ಅಗತ್ಯ ಇರುವುದಿಲ್ಲ. ಯಾರಾದರೂ ಎಲ್ಲಿಯಾದರೂ ಲಭ್ಯವಿದ್ದರೆ ಅವರು ಅಲ್ಲಿ ಪರೀಕ್ಷೆಯನ್ನು ಮಾಡಲಿ,"ಎಂದು ತಿಳಿಸಿದ್ದಾರೆ.

ಇದಲ್ಲದೆ, ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದಾರೆ ಎನ್ನುವ ವರದಿ ಸತ್ಯವಾಗಿದ್ದರೆ, ಅದು ಹೊಸ ಮಾರ್ಗವಾಗಲಿ ಮತ್ತು ಈ ಬಗ್ಗೆ ಯಾರಿಗೂ ತೊಂದರೆ ಕೊಡಬಾರದು ಎಂದಿದ್ದಾರೆ. ಆಟಗಾರರು ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಹಿರಿಯ ಪುರುಷರ ತಂಡ ದುಬೈಗೆ ಪ್ರಯಾಣ ಬೆಳೆಸಿತು. ಭಾರತ ಸೆಪ್ಟೆಂಬರ್ 9 ರಂದು ಪ್ರಾರಂಭವಾಗುವ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಲಿದೆ.