ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಪಿಚ್‌ ಮೇಲೆ ಪ್ರಪೋಸ್‌ ಮಾಡಿದ್ದೆʼ: ತಮ್ಮ ಲವ್‌ ಸ್ಟೋರಿಯನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

ಭಾರತೀಯ ಕ್ರಿಕೆಟ್‌ನ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಅವರು ಆಗಸ್ಟ್‌ 27 ರಂದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಮಾತ್ರ ತನ್ನನ್ನು ತಾನು ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಪತ್ನಿ ಪ್ರೀತಿ ನಾರಯಣ್‌ ಅವರೊಂದಿಗಿನ ಪ್ರೇಮ ಕಥೆಯನ್ನು ರಿವೀಲ್‌ ಮಾಡಿದ ಅಶ್ವಿನ್‌.

ನವದೆಹಲಿ: ಭಾರತೀಯ ಕ್ರಿಕೆಟ್‌ನ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು ಆಗಸ್ಟ್‌ 27 ರಂದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ವಿಶ್ವದ ಇತರೆ ಲೀಗ್‌ಗಳಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿ ಆರ್‌ ಅಶ್ವಿನ್‌, ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಪರ ಆಡಿದ್ದರು. ಅಂದ ಹಾಗೆ 2024ರ ಡಿಸೆಂಬರ್‌ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 537 ವಿಕೆಟ್‌ಗಳು ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 156 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2011ರ ನವೆಂಬರ್‌ 6 ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಆರ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯವನ್ನು ವೀಕ್ಷಿಸಲು ಪ್ರೀತಿ ನಾರಯಣ್‌ ಕೂಡ ಸ್ಟೇಡಿಯಂನ ಗ್ಯಾಲರಿಯಲ್ಲಿದ್ದರು. ಈ ಇಬ್ಬರೂ 2011ರ ನವೆಂಬರ್‌ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಬೌಲಿಂಗ್‌ನಲ್ಲಿ ಭಾರತ ತಂಡವನ್ನು ಗೆಲ್ಲಿಸಿದ ಬಳಿಕ ಅಶ್ವಿನ್‌ ವಿವಾಹವಾಗಿದ್ದರು. 2024ರಲ್ಲಿ 7 ಕ್ರಿಕೆಟ್‌ ಜೊತೆ ಮಾತನಾಡಿದ್ದ ಆರ್‌ ಅಶ್ವಿನ್‌ ತಮ್ಮ ಹಾಗೂ ಪ್ರೀತಿ ನಾರಯಣ್‌ ಅವರ ನಡುವಣ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದರು.

ಐಪಿಎಲ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಿ ಶಾಕ್‌ ನೀಡಿದ ಆರ್‌ ಅಶ್ವಿನ್‌!

"ಮಿಡೆಲ್‌ ಸ್ಕೂಲ್‌ನಿಂದಲೂ ನಾವು ಒಬ್ಬರಿಗೊಬ್ಬರು ಪರಿಚಯ. ಶಾಲೆಯಲ್ಲಿ ನಾವು ಸಹಪಾಠಿಗಳಾಗಿದ್ದೆವು. ಇದಕ್ಕಿಂತೆ ಹೆಚ್ಚೇನೂ ಇರಲಿಲ್ಲ. ಆ ಕಾಲದಲ್ಲಿ ಸೆಲ್‌ ಫೋನ್‌ಗಳು ಇರಲಿಲ್ಲ ಅಲ್ಲವಾ? ನೀವು ಯಾರಿಗಾದರೂ ಕರೆ ಮಾಡಬೇಕೆಂದರೆ, ಲ್ಯಾಂಡ್‌ ಲೈನ್‌ ಬಳಸಬೇಕಾಗಿತ್ತು. ನಾನು ಲ್ಯಾಂಡ್‌ ಲೈನ್‌ಗೆ ಯಾವಾಗ ಕರೆ ಮಾಡಿದ್ದರೂ ಅವರ ಅಪ್ಪ ಫೋನ್‌ ಎತ್ತುತ್ತಿದ್ದರು. ಸನ್ನಿವೇಶ ಹೀಗಿರುವಾರ ಸಂಬಂಧದಲ್ಲಿ ದೀರ್ಘಾಕಾಲ ಉಳಿಯುವ ಸಾಧ್ಯತೆ ಏನು," ಎಂದು ಅಶ್ವಿನ್‌ ತಿಳಿಸಿದ್ದಾರೆ.

ಐಪಿಎಲ್‌ ಟೂರ್ನಿಯನ್ನು ಆಡಿಕೊಂಡ ಬಂದು ದೀರ್ಘಾವಧಿಯ ಬಳಿಕ ಪ್ರೀತಿ ಅವರನ್ನು ಭೇಟಿಯಾಗಿದ್ದೆ ಹಾಗೂ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆಕೆಗೆ ಪ್ರಪೋಸ್‌ ಮಾಡಿದ್ದೆ ಎಂದು ಅಶ್ವಿನ್‌ ರಿವೀಲ್‌ ಮಾಡಿದ್ದಾರೆ. "ನೀವು ಐಪಿಎಲ್‌ ಆಡುತ್ತಿರುವಾಗ, ಇದು ಮುಗಿದ ಬಳಿಕ ಕೆಲ ಸಂಗತಿಗಳನ್ನು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಾನು ದೀರ್ಘಾವಧಿಯ ಬಳಿಕ ಆಕೆಯನ್ನು ಮೊದಲ ಬಾರಿ ಭೇಟಿಯಾಗಿದ್ದೆ. ಚೆಂಪ್ಲಾಸ್ಟ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಒಂದು ಒಳ್ಳೆಯ ದಿನ ನಾನು ಆಕೆಗೆ ಪ್ರಪೋಸ್‌ ಮಾಡಿದ್ದೆ. ಅಂದು ನನ್ನ ಉದ್ದೇಶ ಪ್ರಪೋಸ್‌ ಮಾಡುವುದಾಗಿರಲಿಲ್ಲ; ಇದರ ಬದಲಿಗೆ ಹೊರಗಡೆ ಕರೆದುಕೊಂಡು ಹೋಗುವುದಾಗಿತ್ತು," ಎಂದು ಸ್ಮರಿಸಿಕೊಂಡಿದ್ದಾರೆ.

ಐಪಿಎಲ್‌ ವೃತ್ತಿ ಜೀವನದಲ್ಲಿ ಆರ್‌ ಅಶ್ವಿನ್‌ರ 4 ವಿವಾದಾತ್ಮಕ ಘಟನೆಗಳು!

2011ರ ಬಳಿಕ ಆರ್‌ ಅಶ್ವಿನ್‌ ಅವರು ಭಾರತ ತಂಡಕ್ಕೆ ಮೂರೂ ಸ್ವರೂಪದಲ್ಲಿ ನಿಯಮಿತವಾಗಿ ಆಡುವ ಆಟಗಾರರಾಗಿದ್ದರು. ಇದಾದ ಬಳಿಕ ಅವರು ಎಂದಿಗೂ ತಂಡದಿಂದ ಹೊರಗೆ ಬಂದಿರಲಿಲ್ಲ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಆಗಿದೆ.