IND vs WI: ಮೂರನೇ ಟಿ20ಐ ಗೆಲುವಿನ ಬಳಿಕ ಬೌಲರ್‌ಗಳ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದಿದು!
ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20ಐ ಪಂದ್ಯದ ಗೆಲುವಿನ ಬಳಿಕ ಭಾರತ ತಂಡದ ಬೌಲಿಂಗ್ ಪ್ರದರ್ಶನವನ್ನು ನಾಯಕ ಶ್ರೇಯಸ್ ಅಯ್ಯರ್ ಗುಣಗಾನ ಮಾಡಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 14 ರನ್‌ಗಳ ಗೆಲುವಿನ ಬಳಿಕ ಮೂರು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ 2-1 ಅಂತರದಲ್ಲಿ ಮುನ್ನಡೆಯನ್ನು ಪಡೆದಿದೆ.
ಭಾರತ ತಂಡದ ಬೌಲಿಂಗ್ ಪ್ರದರ್ಶನವನ್ನು ಶ್ಲಾಘಿಸಿದ ಶ್ರೇಯಸ್ ಅಯ್ಯರ್. -
ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ (IND vs WI) ಭಾರತ ತಂಡ 14 ರನ್‌ಗಳ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ತಮ್ಮ ತಂಡದ ಬೌಲಿಂಗ್ ಪ್ರದರ್ಶನವನ್ನು ಗುಣಗಾಣ ಮಾಡಿದ್ದಾರೆ. ಭಾನುವಾರ ಇಲ್ಲಿನ ಹೋಳ್ಕರ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ 2-1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿವೆ.
ಮೊದಲು ಬ್ಯಾಟ್ ಭಾರತ ತಂಡ, ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 223 ರನ್‌ಗಳನ್ನು ಕಲೆ ಹಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ 209 ರನ್‌ಗಳಿಗ ಸೀಮಿತವಾಯಿತು. ಭಾರತದ ಪರ ಮೂರು ವಿಕೆಟ್‌ಗಳನ್ನು ಕಬಳಿಸಿದ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಭಾರತ ತಂಡದ ಬೌಲರ್‌ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೌಲರ್‌ಗಳು ತಾವು ಯಾವ ರೀತಿಯಲ್ಲಿ ಬೌಲ್ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಅಲ್ಲದೆ, ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಉತ್ತಮ ಆತ್ಮವಿಶ್ವಾಸ ಪ್ರದರ್ಶಿಸಿದರು ಎಂದು ಅವರು ಹೇಳಿದ್ದಾರೆ.
IND vs WI: ಭಾರತ ಟಿ 20 ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಯ ಪಾತ್ರವನ್ನು ವಹಿಸಿದ ದಿನೇಶ್ ಕಾರ್ತಿಕ್!
“ನಿಜ ಹೇಳಬೇಕೆಂದರೆ, ಅದು ಅದ್ಭುತವಾಗಿತ್ತು. ಬೌಲರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದರು. ತಾವು ಏನನ್ನು ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ ಅವರಿಗೆ ಸಾಕಷ್ಟು ವಿಶ್ವಾಸವಿತ್ತು. ಅವರೊಂದಿಗೆ ಮಾತನಾಡುವಾಗ ಅವರ ಯೋಜನೆಗಳಲ್ಲಿನ ಸ್ಪಷ್ಟತೆ ನನಗೆ ಕಾಣಿಸಿತು. ತಮ್ಮ ಕಾರ್ಯತಂತ್ರಗಳನ್ನು ಜಾರಿಗೆ ತರುವಲ್ಲಿ ಅವರು ದೃಢ ನಿರ್ಧಾರದಿಂದ ವರ್ತಿಸಿದರು. ನಾನು ಪ್ರತಿಯೊಬ್ಬ ಬೌಲರ್‌ಗೆ ಚೆಂಡು ನೀಡಿದಾಗಲೂ, ಅವರು ಸವಾಲನ್ನು ಸ್ವೀಕರಿಸಲು ಸಿದ್ಧರಾಗಿದ್ದರು. ತಂಡದಿಂದ ನಾವು ಇದೇ ರೀತಿಯ ಮನೋಭಾವವನ್ನು ನಿರೀಕ್ಷಿಸಲಾಗಿತ್ತು,” ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
🔴 MY BOWLERS WERE READY TO TAKE ON EVERY CHALLENGE 🤯 🎙️: Shreyas Iyer praised his bowlers for their confidence and clarity in execution. He said the dry ball made a huge difference, as the bowlers were ready to take on every challenge.🔥 https://t.co/QcXNGVo6Am
— Sam (@cricsam02) October 11, 2026
ಅಭಿಷೇಕ್ ಶರ್ಮಾ ಆಟಕ್ಕೆ ಶ್ರೇಯಸ್ ಅಯ್ಯರ್ ಮೆಚ್ಚುಗೆ
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ನೀಡಿದ ಸ್ಫೋಟಕ ಆರಂಭಕ್ಕೆ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಪವರ್‌ಪ್ಲೇ ಓವರ್‌ಗಳಲ್ಲಿ ಅವರು ಗಳಿಸಿದ ನಿರ್ಣಾಯಕ ರನ್‌ಗಳು ಭಾರತದ ಬ್ಯಾಟಿಂಗ್‌ಗೆ ಬಲ ತುಂಬಿದವು ಎಂದು ಅಯ್ಯರ್ ಹೇಳಿದ್ದಾರೆ.
IND vs WI: ಭಾರತ ಟಿ 20 ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿಯ ಪಾತ್ರವನ್ನು ವಹಿಸಿದ ದಿನೇಶ್ ಕಾರ್ತಿಕ್!
“ಅಭಿಷೇಕ್ ಶರ್ಮಾ ನಮಗೆ ಒದಗಿಸಿದ ಆರಂಭ ಅದ್ಭುತವಾಗಿತ್ತು. ಪವರ್‌ಪ್ಲೇನಲ್ಲಿ ಅವರು ಗಳಿಸಿದ ನಿರ್ಣಾಯಕ ರನ್‌ಗಳು ತಂಡಕ್ಕೆ ಬಹಳ ಮುಖ್ಯವಾಗಿದ್ದವು. ಅವರಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಬಳಿಕ ಇಶಾನ್ ಕಿಶನ್ ಕ್ರೀಸ್‌ಗೆ ಬಂದು ಬೌಲರ್‌ಗಳ ಮೇಲೆ ಆಕ್ರಮಣ ನಡೆಸಿದರು. ಕಳೆದ ಒಂದೆರಡು ತಿಂಗಳುಗಳಿಂದ ಇಶಾನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ,” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.