ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ತಂಡದ ಟ್ರೋಫಿ ಸಂಭ್ರಮಕ್ಕೆ ಇಬ್ರಾಂಹಿಂ ಝದ್ರಾನ್‌ಗೆ ಆಹ್ವಾನ ನೀಡಿದ ಶ್ರೇಯಸ್‌ ಅಯ್ಯರ್‌!

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಪಂದ್ಯದ ಬಳಿಕ ಟ್ರೋಫಿ ಸಂಭ್ರಮದ ವೇಳೆ ಭಾರತದ ನಾಯಕ ಶ್ರೇಯಸ್‌ ಅಯರ್‌, ಎದುರಾಳಿ ಇಬ್ರಾಹಿಂ ಝದ್ರಾನ್‌ ಅವರನ್ನು ಟ್ರೋಫಿ ಸಂಭ್ರಮಕ್ಕೆ ಆಹ್ವಾನ ನೀಡಿದರು. ಆ ಮೂಲಕ ಅಯ್ಯರ್‌ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

ಟ್ರೋಫಿ ಸಂಭ್ರಮಕ್ಕೆ ಇಬ್ರಾಹಿಂ ಝದ್ರಾನ್‌ಗೆ ಆಹ್ವಾನಿಸಿದ ಶ್ರೇಯಸ್‌ ಅಯ್ಯರ್‌.

ನವದೆಹಲಿ: ಅಭಿಷೇಕ್‌ ಶರ್ಮಾ (Abhishek Sharma) ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಮೂರನೇ ಪಂದ್ಯದಲ್ಲಿ (IND vs AFG) 127 ರನ್‌ಗಳ ದೊಡ್ಡ ಅಂತರದಲ್ಲಿ ಗೆಲುವು ಪಡೆಯಿತು. ಈ ಗೆಲುವಿನ ಬಳಿಕ ಟೀಮ್‌ ಇಂಡಿಯಾ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ, ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಹೃದಯವಂತಿಕೆಯ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಟ್ರೋಫಿ ಸಂಭ್ರಮದ ವೇಳೆ ಎದುರಾಳಿ ನಾಯಕ ಇಬ್ರಾಹಿಂ ಝದ್ರಾನ್‌ ಅವರನ್ನು ಸೇರಿಸಿಕೊಂಡಿದ್ದರು.

ʻಫ್ರೆಂಡ್‌ಶಿಪ್ ಕಪ್’ ಕೇವಲ ಗೆಲುವಿಗಾಗಿ ಮಾತ್ರವಲ್ಲ, ಕ್ರೀಡಾಸ್ಫೂರ್ತಿ ಮತ್ತು ಸ್ನೇಹಕ್ಕೂ ಮಹತ್ವ ನೀಡುತ್ತದೆ ಎಂಬುದನ್ನು ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ತೋರಿಸಿಕೊಟ್ಟಿದ್ದಾರೆ. ಗುರುವಾರ ದೆಹಲಿಯಲ್ಲಿ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ, ಅಯ್ಯರ್ ಅವರು ಅಫ್ಘಾನಿಸ್ತಾನ ನಾಯಕ ಇಬ್ರಾಹಿಂ ಜದ್ರಾನ್ ಅವರನ್ನು ಭಾರತದ ಟ್ರೋಫಿ ಸಂಭ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನಿಸಿದರು.

ದಾಖಲೆಯ ಶತಕ ಸಿಡಿಸಿದ ಬಳಿಕ ಯುವರಾಜ್‌ ಸಿಂಗ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಅಭಿಷೇಕ್‌ ಶರ್ಮಾ!

ಟ್ರೋಫಿ ಪ್ರದಾನ ಸಮಾರಂಭದ ವೇಳೆ ಅಯ್ಯರ್ ಅವರು ಝದ್ರಾನ್ ಅವರನ್ನು ವೇದಿಕೆಗೆ ಕರೆದು, ಭಾರತೀಯ ತಂಡದೊಂದಿಗೆ ಟ್ರೋಫಿಯನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದರು. ಅಷ್ಟೇ ಅಲ್ಲದೆ, ವಿಜೇತ ತಂಡದ ಫೋಟೋದಲ್ಲೂ ಅಫ್ಘಾನಿಸ್ತಾನ ನಾಯಕ ಭಾಗಿಯಾಗುವಂತೆ ಅಯ್ಯರ್ ಖಚಿತಪಡಿಸಿದರು. ಈ ಮೂಲಕ ಟ್ರೋಫಿ ಪ್ರದಾನ ಸಮಾರಂಭವನ್ನು ಕ್ರೀಡಾ ಸ್ನೇಹದ ವಿಶೇಷ ಕ್ಷಣವನ್ನಾಗಿ ಪರಿವರ್ತಿಸಿದರು.

ಪಂದ್ಯದ ಫಲಿತಾಂಶವನ್ನು ಮೀರಿ ಕ್ರೀಡೆಯ ನಿಜವಾದ ಅರ್ಥವೇನು ಎಂಬುದನ್ನು ಈ ನಡೆ ತೋರಿಸಿಕೊಟ್ಟಿತು. ಗೌರವ, ವಿನಯ ಮತ್ತು ಕ್ರೀಡಾಸ್ಫೂರ್ತಿಗೆ ಅಯ್ಯರ್ ಆದ್ಯತೆ ನೀಡಿದರು. ಭಾರತ ಸರಣಿಯನ್ನು ಗೆದ್ದಿದ್ದರೂ, ಅಫ್ಘಾನಿಸ್ತಾನ ನಾಯಕನೂ ಗೆಲುವಿನ ಸಂಭ್ರಮದ ಭಾಗವಾಗುವಂತೆ ಅವರು ನೋಡಿಕೊಂಡರು.

ದಾಖಲೆಯ ಶತಕ ಸಿಡಿಸಿ ಧ್ಯಾನ ಮಾಡಿ ಸಂಭ್ರಮಿಸಲು ಕಾರಣ ತಿಳಿಸಿದ ಅಭಿಷೇಕ್‌ ಶರ್ಮಾ!

ಭಾರತದ ನಡೆಯನ್ನು ಶ್ಲಾಘಿಸಿದ ಸುನೀಲ್‌ ಗವಾಸ್ಕರ್‌

"ಎದುರಾಳಿ ತಂಡದ ನಾಯಕನನ್ನು ನಿಮ್ಮ ತಂಡದ ಫೋಟೋಗೆ ಸೇರಿಸಿಕೊಳ್ಳುವುದು ಅದ್ಭುತ ಸಂಗತಿ. ಹೌದು, ಇದು ನಿಜಕ್ಕೂ ಅತ್ಯುತ್ತಮ ನಡೆ. ಈಗ ಅವರು ತೆರಳಿದ್ದಾರೆ ಮತ್ತು ಸಹಾಯಕ ಸಿಬ್ಬಂದಿ ತಂಡವನ್ನು ಸೇರಿಕೊಂಡಿದ್ದಾರೆ. ಇಲ್ಲಿದೆ ನೋಡಿ, ಚಾಂಪಿಯನ್‌ಗಳ ಚಿತ್ರ. ಭಾರತ ತಂಡ ಮತ್ತು ಸಹಾಯಕ ಸಿಬ್ಬಂದಿಯ ಈ ಚಿತ್ರವೇ ನಿಜವಾದ ವಿಶೇಷ ಕ್ಷಣ,” ಎಂದು ಸುನೀಲ್‌ ಗವಾಸ್ಕರ್ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಅವರ ಈ ನಡೆ, 2018ರ ಜೂನ್‌ನಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಮತ್ತೊಮ್ಮೆ ನೆನಪಿಸಿತು. ಭಾರತ ವಿರುದ್ಧದ ಆ ಪಂದ್ಯ ಅಫ್ಘಾನಿಸ್ತಾನ ಕ್ರಿಕೆಟ್‌ನ ಪಯಣದಲ್ಲಿ ಮಹತ್ವದ ಮೈಲುಗಲ್ಲಾಗಿತ್ತು. ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಐಸಿಸಿ ಪೂರ್ಣ ಸದಸ್ಯತ್ವ ಪಡೆದ 12ನೇ ರಾಷ್ಟ್ರವಾಗಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆದರೆ, ಭಾರತ ತಂಡ ಇನಿಂಗ್ಸ್ ಮತ್ತು 262 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಪಂದ್ಯ ಕೇವಲ ಎರಡು ದಿನಗಳಲ್ಲೇ ಮುಕ್ತಾಯಗೊಂಡಿತ್ತು.