ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಾಖಲೆಯ ಶತಕ ಸಿಡಿಸಿದ ಬಳಿಕ ಯುವರಾಜ್‌ ಸಿಂಗ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಅಭಿಷೇಕ್‌ ಶರ್ಮಾ!

ಅಫ್ಘಾನಿಸ್ತಾನ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ದಾಖಲೆಯ ಶತಕವನ್ನು ಬಾರಿಸಿದರು. ಶತಕದ ಬಳಿಕ ಮಾತನಾಡಿದ ಅಭಿಷೇಕ್‌ ಶರ್ಮಾ, ತಮ್ಮ ಮೆಂಟರ್‌ ಹಾಗೂ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ನೀಡಿದ್ದ ಉಪಯುಕ್ತ ಸಲಹೆಯನ್ನು ಸ್ಮರಿಸಿಕೊಂಡಿದ್ದಾರೆ.

ಯುವರಾಜ್‌ ಸಿಂಗ್‌ ನೀಡಿದ್ದ ಸಲಹೆಯನ್ನು ನೆನೆದ ಅಭಿಷೇಕ್‌ ಶರ್ಮಾ!

ಯುವರಾಜ್‌ ಸಿಂಗ್‌ ನೀಡಿದ್ದ ಸಲಹೆಯನ್ನು ನೆನೆದ ಅಭಿಷೇಕ್‌ ಶರ್ಮಾ. -

Profile
Ramesh Kote Sep 18, 2026 3:46 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ (IND vs AFG) ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಅತ್ಯಂತ ವೇಗದ ಶತಕವನ್ನು ಬಾರಿಸಿದ್ದರು. ಇವರ ಶತಕದ ಬಲದಿಂದ ಭಾರತ ತಂಡ ಮೂರನೇ ಪಂದ್ಯವನ್ನೂ ಗೆದ್ದು ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್‌ ಶರ್ಮಾ, ತಮ್ಮ ಗುರು ಹಾಗೂ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ (Yuvraj Singh) ನೀಡಿದ್ದ ಸಲಹೆಯನ್ನು ಸ್ಮರಿಸಿಕೊಂಡಿದ್ದಾರೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತದ ಪರ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಟೆಸ್ಟ್‌ ಆಡುವ ರಾಷ್ಟ್ರಗಳ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅವರು ತಮ್ಮ ದಾಖಲೆಯ ಇನಿಂಗ್ಸ್‌ನಲ್ಲಿ ಆಡಿದ 34 ಎಸೆತಗಳಲ್ಲಿ 108 ರನ್‌ಗಳನ್ನು ಸಿಡಿಸಿದ್ದರು. ಅವರು ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ 11 ಸಿಕ್ಸರ್‌ ಹಾಗೂ 9 ಬೌಂಡರಿಗಳನ್ನು ಬಾರಿಸಿದ್ದರು.

ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯಬೇಕು: ಗೌತಮ್ ಗಂಭೀರ್

ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್‌ ಶರ್ಮಾ, "ಎರಡನೇ ಪಂದ್ಯದ ಬಳಿಕ ಯುವರಾಜ್‌ ಸಿಂಗ್‌ ಅವರಿಂದ ಒಂದು ಸಂದೇಶ ಬಂದಿತ್ತು. ಅದೇನೆಂದರೆ, ನಾನು ಪ್ರತಿಯೊಂದು ಎಸೆತದಲ್ಲಿಯೂ ಹೊಡೆಯಬಾರದೆಂದು ಅವರು ಸೂಚನೆ ನೀಡಿದ್ದರು. ಇಂಥಾ ಕಂಡೀಷನ್ಸ್‌ನಲ್ಲಿ ನೀವು ಶಾಟ್ಸ್‌ ಹೊಡೆಯುವ ಜೊತೆಗೆ ಒಂದು ಹಾಗೂ ಎರಡು ರನ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು. ಅದರಂತೆ ನನ್ನ ಸ್ಲಾಟ್‌ನಲ್ಲಿ ಚೆಂಡಿದ್ದರೆ ಹೊಡೆಯುತ್ತೇನೆ, ಇಲ್ಲವಾದರೆ ಸಿಂಗಲ್ಸ್‌ ತೆಗೆದುಕೊಳ್ಳುತ್ತೇನೆ," ಎಂದು ಹೇಳುದ್ದಾರೆ.

"ಆದರೆ, ನಿಸ್ಸಂಶಯವಾಗಿ ನಾನು ದೀರ್ಘಾವಧಿ ಬ್ಯಾಟ್‌ ಮಾಡಬೇಕೆಂಬುದು ಯುವಿ ಸಾರ್‌ ಉದ್ದೇಶ. ಅವರು ಹೇಳಿದ್ದು ಯಾವಾಗಲೂ ನನ್ನ ಮನಸಿನಲ್ಲಿ ಇದ್ದೇ ಇರುತ್ತದೆ. ನಾನು ಸ್ಪೋಟಕ ಬ್ಯಾಟ್‌ ಮಾಡಿ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟರೆ, ನಮ್ಮ ಗೆಲುವಿನ ಹಾದಿ ಸುಲಭವಾಗುತ್ತದೆ. ಇದು ನನ್ನ ಮನಸಿನಲ್ಲಿರುತ್ತದೆ," ಎಂದು ತಿಳಿಸಿದ್ದಾರೆ.

IND vs AFG: ಅಭಿಷೇಕ್‌ ಅಬ್ಬರಕ್ಕೆ ಕಂಗಾಲಾದ ಆಫ್ಘನ್‌, ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

ಈ ದಾಖಲೆಯ ಇನಿಂಗ್ಸ್‌ಗೂ ಮುನ್ನ ಅಭಿಷೇಕ್‌ ಶರ್ಮಾ ಟಿ20ಐ ಸರಣಿಯ ಆರಂಭಿಕ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿದ್ದರು. ನಂತರ ಎರಡನೇ ಪಂದ್ಯದಲ್ಲಿ ಅವರು 39 ರನ್‌ಗಳನ್ನು ಸಿಡಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅಂತಿಮವಾಗಿ ಅವರು ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಅವರು ನಿರೀಕ್ಷಿತ ಇನಿಂಗ್ಸ್‌ ಆಡಿ ಭಾರತ ತಂಡವನ್ನು ಗೆಲ್ಲಿಸಿದರು. ಈ ಸರಣಿಯಲ್ಲಿ ಅಭಿಷೇಕ್‌ ಶರ್ಮಾ, 229 ರನ್‌ಗಳನ್ನು ಬಾರಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೂ ಆಗಮಿಸುವ ಮೊದಲು ಅಭಿಷೇಕ್‌ ಶರ್ಮಾ ಮೇಲೆ ಒತ್ತಡವಿತ್ತು. ಏಕೆಂದರೆ ಅವರು ಕಳೆದ 7 ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಸಿಡಿಸಲಿಲ್ಲ. ಒಂದು ಕಡೆ ಜಿಂಬಾಬ್ವೆ ಸರಣಿಯಲ್ಲಿ ವೈಭವ್‌ ಸೂರ್ಯವಂಶಿ ಯೋಗ್ಯ ಪ್ರದರ್ಶನವನ್ನು ತೋರಿದ್ದರು. ಹಾಗಾಗಿ ಆಫ್ಘನ್‌ ಸರಣಿಯಲ್ಲಿ ಅಭಿಷೇಕ್‌ ಬ್ಯಾಟ್‌ನಿಂದ ರನ್‌ ಹೊಳೆ ಹರಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಅದರಂತೆ ಎಡಗೈ ಬ್ಯಾಟ್ಸ್‌ಮನ್‌ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ತೋರಿದರು.