ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಸ್ಟ್ರೇಲಿಯಾದಲ್ಲಿ ಶ್ರೇಯಸ್‌ ಅಯ್ಯರ್‌ರ ಆಕ್ಸಿಜನ್‌ ಲೆವೆಲ್‌ ಶೇ 50ಕ್ಕೆ ಇಳಿದಿತ್ತು! ವರದಿ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಪಂದ್ಯದಲ್ಲಿ ಕ್ಯಾಚ್ ಪಡೆಯುವ ವೇಳೆ ಭಾರತ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಗಂಭೀರ ಗಾಯಗೊಂಡಿದ್ದರು. ಇದರಿಂದಾಗಿ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ನಂತರ ಚೇತೆರಿಸಿಕೊಂಡಿದ್ದ ಅವರನ್ನು ಭಾರತಕ್ಕೆ ಶಿಫ್ಟ್‌ ಮಾಡಲಾಗಿತ್ತು. ಇದೀಗ ಅವರ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿ ಹೊರ ಬಿದ್ದಿದೆ.‌

ಶ್ರೇಯಸ್‌ ಅಯ್ಯರ್‌ರ ಆಕ್ಸಿಜನ್‌ ಲೆವೆಲ್‌  ಶೇ 50ಕ್ಕೆ ಇಳಿದಿತ್ತು!

ಶ್ರೇಯಸ್‌ ಅಯ್ಯರ್‌ರ ಆಮ್ಲಜನಕ ಮಟ್ಟ ಶೇ 50ಕ್ಕೆ ಇಳಿದಿತ್ತು ಎಂದ ವರದಿಯಾಗಿದೆ. -

Profile
Ramesh Kote Nov 11, 2025 5:38 PM

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಗಂಭೀರ ಗಾಯದಿಂದ ಚಿಕಿತ್ಸೆ ಪಡೆದ ನಂತರ ಭಾರತ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ (Shreyas Iyer) ಭಾರತಕ್ಕೆ ಮರಳಿದ್ದಾರೆ, ಆದರೆ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅಯ್ಯರ್ ಅವರ ಆರೋಗ್ಯ ಗಮನಾರ್ಹವಾಗಿ ಸುಧಾರಿಸುತ್ತಿದೆ ಮತ್ತು ಅವರು ಚೇತರಿಸಿಕೊಳ್ಳುವ ಸಕಾರಾತ್ಮಕ ಲಕ್ಷಣಗಳು ಕಂಡುಬರುತ್ತಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಆದಾಗ್ಯೂ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ(IND vs SA) ಅವರು ಆಡಲು ಸಾಧ್ಯವಾಗುವ ಸಾಧ್ಯತೆ ತುಂಬಾ ಕಡಿಮೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (IND vs AUS) ಭಾರತ 1-2 ಅಂತರದಲ್ಲಿ ಕಳೆದುಕೊಂಡಿತ್ತು.

ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯು ನವೆಂಬರ್ 30 ರಂದು ರಾಂಚಿಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದೊಂದಿಗೆ ಆರಂಭವಾಗುತ್ತದೆ. ಸರಣಿಯ ಆರಂಭದ ವೇಳೆಗೆ ಅಯ್ಯರ್ ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆಯಿಲ್ಲ. ವರದಿಗಳ ಪ್ರಕಾರ, ಗಾಯದ ನಂತರ ಒಂದು ಹಂತದಲ್ಲಿ ಅಯ್ಯರ್ ಅವರ ಆರೋಗ್ಯವು ತುಂಬಾ ಹದಗೆಟ್ಟಿತು, ಅವರ ಆಮ್ಲಜನಕದ ಮಟ್ಟವು ಅಪಾಯಕಾರಿಯಾಗಿ 50 ಕ್ಕೆ ಇಳಿದಿತ್ತು ಮತ್ತು ಅವರು ಸುಮಾರು 10 ನಿಮಿಷಗಳ ಕಾಲ ನಿಲ್ಲಲು ಸಾಧ್ಯವಾಗಲಿಲ್ಲ. ಅವರ ಆರೋಗ್ಯ ಸ್ಥಿತಿಯಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡದಿತ್ತು ಎಂಬ ವಿಷಯ ಇದೀಗ ಬಹಿರಂಗವಾಗಿದೆ.

Shreyas Iyer: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಶ್ರೇಯಸ್‌ ಅಯ್ಯರ್‌

ಮೂರನೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ಸಮಯದಲ್ಲಿ ಶ್ರೇಯಸ್ ಅಯ್ಯರ್ ಗಂಭೀರ ಗಾಯಕ್ಕೆ ಒಳಗಾಗಿದ್ದರು. ಸಿಡ್ನಿಯಲ್ಲಿ ನಡೆದಿದ್ದ ಆ ಪಂದ್ಯದಲ್ಲಿ, ಹರ್ಷಿತ್ ರಾಣಾ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಹೊಡೆದಿದ್ದ ಚೆಂಡನ್ನು ಅಸಾಧಾರಣವಾದ ಕ್ಯಾಚ್‌ ಪಡೆಯಲು ಶ್ರೇಯಸ್‌ ಅಯ್ಯರ್ ಪ್ರಯತ್ನಿಸಿದರು. ಅವರು ಕ್ಯಾಚ್ ಹಿಡಿದರು, ಆದರೆ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದ್ದರು ಹಾಗೂ ಅವರ ಪಕ್ಕೆಲುಬುಗಳಿಗೆ ತೀವ್ರ ಗಾಯವಾಗಿತ್ತು. ಇದರಿಂದಾಗಿ ಅಯ್ಯರ್ ಉಸಿರಾಟದ ತೊಂದರೆ ಅನುಭವಿಸಿದರು ಮತ್ತು ಅವರನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಬೇಕಾಯಿತು. ಅಯ್ಯರ್ ಕಳೆದ ವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಶ್ರೇಯಸ್‌ ಅಯ್ಯರ್‌ ಇಲ್ಲ

ಆಸ್ಟ್ರೇಲಿಯಾದ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಅಯ್ಯರ್ ಭಾರತಕ್ಕೆ ಮರಳಿದ್ದಾರೆ. ಆದರೆ ಅವರು ಇಲ್ಲಿ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಪಂದ್ಯದ ಫಿಟ್‌ನೆಸ್ ಅನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಅವರಿಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಂಡಳಿ ಮತ್ತು ಆಯ್ಕೆ ಸಮಿತಿಯು ಗಾಯದಿಂದ ಅವರು ಬೇಗನೆ ಮರಳಲು ಸಿದ್ಧರಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದನ್ನು ವರದಿ ಉಲ್ಲೇಖಿಸಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ, ಇದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಭಾಗವಹಿಸುವುದು ಅಸಾಧ್ಯ.

Shreyas Iyer: 'ಪ್ರತಿದಿನ ಉತ್ತಮಗೊಳ್ಳುತ್ತಿದೆ'; ಗಾಯದ ಬಗ್ಗೆ ಶ್ರೇಯಸ್‌ ಅಯ್ಯರ್‌ ಮೊದಲ ಪ್ರತಿಕ್ರಿಯೆ

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ ಅಯ್ಯರ್‌

ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ತನ್ನ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದೆ. ಈ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳು ನವೆಂಬರ್ 14 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಪ್ರಾರಂಭವಾಗಲಿವೆ. ಎರಡು ಟೆಸ್ಟ್ ಪಂದ್ಯಗಳ ನಂತರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನವೆಂಬರ್ 30 ರಿಂದ ರಾಂಚಿ, ರಾಯ್‌ಪುರ ಮತ್ತು ವಿಶಾಖಪಟ್ಟಣದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.

ಗಾಯದಿಂದಾಗಿ ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದರೂ, ಅಯ್ಯರ್ ಸಂಪೂರ್ಣವಾಗಿ ಸಕಾರಾತ್ಮಕವಾಗಿ ಕಾಣುತ್ತಿದ್ದಾರೆ. ಸೋಮವಾರ, ಅವರು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಲಿನಲ್ಲಿ ಮೈಯೊಡ್ಡಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಅವರು ಫೋಟೋಗೆ "ಸೂರ್ಯನ ಬೆಳಕು ಉತ್ತಮ ಚಿಕಿತ್ಸೆ, ಹಿಂತಿರುಗಲು ಸಂತೋಷವಾಗಿದೆ. ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು," ಎಂದು ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.