ನವದೆಹಲಿ: ಮುಂದಿನ ವರ್ಷ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ನಿಮಿತ್ತ ಔಟ್ ಆಫ್ ಫಾರ್ಮ್ ಭಾರತ ತಂಡದ ಉಪ ನಾಯಕ ಶುಭಮನ್ ಗಿಲ್‌ಗೆ (Shubman Gill) ಒತ್ತಡ ಶುರುವಾಗಿದೆ ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಎಚ್ಚರಿಕೆ ನೀಡಿದ್ದಾರೆ. ಭಾರತ ಟಿ20ಐ ತಂಡಕ್ಕೆ ಮರಳಿದಾಗಿನಿಂದ ಶುಭಮ್ ಗಿಲ್ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇದೀಗ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಎರಡೂ ಪಂದ್ಯಗಳಲ್ಲಿಯೂ ಮಕಾಡೆ ಮಲಗಿದ್ದಾರೆ. ಮುಂದಿನ ಪಂದ್ಯದಲ್ಲಿಯೂ ಅವರ ವಿಫಲರಾದರೆ, ಅವರ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಮರಳಲಿದ್ದಾರೆಂದು ಮಾಜಿ ಆಲ್‌ರೌಂಡರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಟಕ್‌ನಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಎರಡು ಎಸೆತಗಳಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಗಿಲ್, ಬಳಿಕ ಎರಡನೇ ಟಿ20ಐ ಪಂದ್ಯದಲ್ಲಿ ಗೋಲ್ಡನ್ ಡಕ್‌ಔಟ್ ಆಗಿದ್ದಾರೆ. ಆ ಮೂಲಕ ಇವರು ತಮ್ಮ ಟಿ20 ಕ್ರಿಕೆಟ್‌ನ ಕಳೆದ 14 ಇನಿಂಗ್ಸ್‌ಗಲ್ಲಿ ಒಂದೇ ಒಂದು ಅರ್ಧಶತಕವನ್ನು ಸಿಡಿಸಲು ಇವರಿಂದ ಸಾಧ್ಯವಾಗಿಲ್ಲ. ಈ ಕಾರಣದಿಂದ ಗಿಲ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ.
IND vs SA: ಕ್ವಿಂಟಕ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, "ಇದೀಗ ಮುಖ್ಯ ವಿಷಯ ಶುಭಮನ್ ಗಿಲ್. ಅವರು ಉಪ ನಾಯಕ ಹಾಗೂ ಟಿ20 ವಿಶ್ವಕಪ್ ಟೂರ್ನಿ ಸನಿಹದಲ್ಲಿದೆ. ಆದರೆ, ಅವರಿಂದ ರನ್‌ಗಳು ಮೂಡಿಬರುತ್ತಿಲ್ಲ ಹಾಗೂ ಫಾರ್ಮ್‌ಗಾಗಿ ಅವರು ತಿಣುಕಾಡುತ್ತಿದ್ದಾರೆ. ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಬೇಕೆಂದರೆ, ಅವರು ಕಡ್ಡಾಯವಾಗಿ ರನ್ ಗಳಿಸಬೇಕಾಗಿದೆ, ಇಲ್ಲವಾದಲ್ಲಿ ಅವರು ಒತ್ತಡಕ್ಕೆ ಒಳಗಾಗಬೇಕಾಗುತ್ತದೆ," ಎಂದು ಎಚ್ಚರಿಕೆ ನೀಡಿದ್ದಾರೆ.
ಶುಭಮನ್ ಗಿಲ್ ಮೇಲೆ ಒತ್ತಡವಿದೆ
"ಗಿಲ್ ಎರಡನೇ ಟಿ20ಐ ಪಂದ್ಯದಲ್ಲಿ ಮೊದಲನೇ ಎಸೆತದಲ್ಲಿಯೇ ಡಕ್‌ಔಟ್ ಆಗಿದ್ದರು. ಆದರೆ, ಮೊದಲನೇ ಪಂದ್ಯದಂತೆ ಈ ಪಂದ್ಯದಲ್ಲಿ ಆಡಲು ಅವರಿಂದ ಸಾಧ್ಯವಾಗಲಿಲ್ಲ. ಅವರು ರನ್ ಗಳಿಸದೇ ಇದ್ದಾಗಲೆಲ್ಲಾ, ಬೆಂಚ್ ಕಾಯುತ್ತಿರುವ ಸಂಜು ಸ್ಯಾಮ್ಸನ್ ಅವರ ಕಡೆಯಿಂದ ಒತ್ತಡ ಜಾಸ್ತಿಯಾಗುತ್ತದೆ," ಎಂದಯ ಮಾಜಿ ಆಲ್‌ರೌಂಡರ್ ಹೇಳಿದ್ದಾರೆ.
IND vs SA: ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್ ಯಾದವ್!
"ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಕರೆತಂದು ರನ್ ಗಳಿಸದಿದ್ದರೆ, ಭಾರತ ತಂಡ ಕ್ಯಾಚ್ -22 ಸ್ಥಿತಿಯಲ್ಲಿರುತ್ತದೆ. ಆದರೆ ಭಾರತ ವಿಶ್ವಕಪ್ ಟೂರ್ನಿಗಾಗಿ ಶುಭಮನ್ ಗಿಲ್ ಅವರನ್ನು ಬೆಂಬಲಿಸುತ್ತಿದ್ದರೆ, ಅವರು ರನ್ ಗಳಿಸುವುದು ನಿರ್ಣಾಯಕ. ಅದು ವಿಫಲವಾದರೆ, ಭಾರತಕ್ಕೆ ಉತ್ತಮ ಆರಂಭ ಸಿಗದ ಕಾರಣ ಅದು ತಂಡಕ್ಕೆ ಹಾನಿ ಮಾಡುತ್ತದೆ. ಎರಡನೆಯದಾಗಿ, ಗಿಲ್ ನಾಯಕತ್ವದ ಗುಂಪಿನ ಭಾಗವಾಗಿರುವುದರಿಂದ ಅವರು ನಿರಂತರ ಒತ್ತಡದಲ್ಲಿದ್ದಾರೆ," ಎಂದು ಪಠಾಣ್ ವಿವರಿಸಿದ್ದಾರೆ.
IND vs SA: ಒಂದೇ ಓವರ್‌ನಲ್ಲಿ 7 ವೈಡ್ ಹಾಕಿದ ಅರ್ಷದೀಪ್ ಸಿಂಗ್ ವಿರುದ್ಧ ಗಂಭೀರ್ ಕಿಡಿ!
ಸಂಜು ಸದಾ ಸಿದ್ದರಾಗಿರಬೇಕು: ಪಠಾಣ್
"ಆದ್ದರಿಂದ, ಸಂಜು ಸ್ಯಾಮ್ಸನ್ ಮಾನಸಿಕವಾಗಿಯೂ ಸಿದ್ಧರಾಗಿರಬೇಕು. ಗಿಲ್ ತನ್ನದೇ ಆದ ಆಟದ ಯೋಜನೆಗೆ ಅಂಟಿಕೊಂಡರೆ ರನ್ ಗಳಿಸುತ್ತಾರೆ ಎಂದು ನಾನು ಮತ್ತೆ ಹೇಳುತ್ತೇನೆ. ಇನ್ನೊಬ್ಬ ಆಟಗಾರ ಕಾಯುತ್ತಿದ್ದಾರೆ ಎಂದು ಅವರು ಯೋಚಿಸುತ್ತಲೇ ಇದ್ದರೆ, ಅದು ತೊಂದರೆಯಾಗುತ್ತದೆ. ಆಗ ಟೀಮ್ ಮ್ಯಾನೇಜ್‌ಮೆಂಟ್‌ನ ಪಾತ್ರ ಮುಖ್ಯವಾಗಿರುತ್ತದೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.