IND vs SA: ಒಂದೇ ಓವರ್‌ನಲ್ಲಿ 7 ವೈಡ್ ಹಾಕಿದ ಅರ್ಷದೀಪ್ ಸಿಂಗ್ ವಿರುದ್ಧ ಗಂಭೀರ್ ಕಿಡಿ!
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಯುವ ವೇಗಿ ಅರ್ಷದೀಪ್ ಸಿಂಗ್ ಅತ್ಯಂತ ದುಬಾರಿಯಾದರು. ಇವರು ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ ಬರೋಬ್ಬರಿ 54 ರನ್ ಬಿಟ್ಟು ಕೊಟ್ಟರು. ಆದರೆ, ಅವರು ವಿಕೆಟ್ ಪಡೆಯಲಿಲ್ಲ. ಅಂದ ಹಾಗೆ ಬರೋಬ್ಬರಿ 9 ವೈಡ್‌ಗಳನ್ನು ಹಾಕಿದ್ದಾರೆ. ಇದರಲ್ಲಿ ಒಂದೇ ಓವರ್‌ನಲ್ಲಿ 7 ವೈಡ್ ಹಾಕಿದ್ದಾರೆ.
ಅರ್ಷದೀಪ್ ಸಿಂಗ್ ವಿರುದ್ಧ ಗೌತಮ್ ಗಂಭೀರ್ ಕಿಡಿ. -
ನವ ಚಂಡೀಗಢ: ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟಿ20ಐ ಪಂದ್ಯದಲ್ಲಿ (IND vs SA) ಭಾರತ ತಂಡದ ಬೌಲರ್‌ಗಳು ಅತ್ಯಂತ ದುಬಾರಿಯಾದರು. ಅದರಲ್ಲಿಯೂ ವಿಶೇಷ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಭಾರತೀಯರ ಪೈಕಿ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಇವರು ತಮ್ಮ ಬೌಲಿಂಗ್ ಸ್ಪೆಲ್ ಹೆಚ್ಚಿನ ಹೆಚ್ಚುವರಿ ರನ್‌ಗಳನ್ನು ವೈಡ್ ರೂಪದಲ್ಲಿ ನೀಡಿದ್ದಾರೆ. ಎಡಗೈ ವೇಗಿ ತಮ್ಮ ಏಕೈಕ ಓವರ್‌ನಲ್ಲಿ ಒಂದಲ್ಲ, ಎರಡರಲ್ಲ ಬರೋಬ್ಬರಿ 7 ವೈಡ್‌ಗಳನ್ನು ಬೌಲ್ ಮಾಡಿದ್ದಾರೆ. ಈ ಕಾರಣದಿಂದಾಗಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ (Gautam Gambhir), ಅರ್ಷದೀಪ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುರುವಾರ ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ಸೂರ್ಯಕುಮಾರ್ ಯಾದವ್ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಹರಿಣ ಪಡೆಯ ಆರಂಭಿಕ ಕ್ವಿಂಟನ್ ಡಿ ಕಾಕ್, ಈ ಪಂದ್ಯದಲ್ಲಿ ಹುಲಿಯಂತೆ ತಮ್ಮ ಬ್ಯಾಟಿಂಗ್‌ನಲ್ಲಿ ಘರ್ಜಿಸಿದರು. ಅವರು ಆರಂಭದಿಂದಲೇ ಟೀಮ್ ಇಂಡಿಯಾ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಕಟಕ್‌ನಲ್ಲಿ ಡಿ ಕಾಕ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದ ಅರ್ಷದೀಪ್ ಸಿಂಗ್, ತವರು ಅಂಗಣದಲ್ಲಿ ಪರದಾಡಿದರು.
IND vs SA: ವಿರಾಟ್ ಕೊಹ್ಲಿಯ ಟಿ20ಐ ದಾಖಲೆ ಮುರಿಯುವ ಸನಿಹದಲ್ಲಿ ಅಭಿಷೇಕ್ ಶರ್ಮಾ!
ಪಂದ್ಯದ ಮೊದಲನೇ ಓವರ್‌ನಲ್ಲಿ 8 ರನ್ ನೀಡಿದ್ದ ಅರ್ಷದೀಪ್ ಸಿಂಗ್, ತಮ್ಮ ಎರಡನೇ ಓವರ್‌ನಲ್ಲಿ 12 ರನ್ ನೀಡಿ ಸ್ವಲ್ಪ ದುಬಾರಿಯಾದರು ಹಾಗೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ನಂತರ ನಾಯಕ ಸೂರ್ಯಕುಮಾರ್ ಯಾದವ್ ಆರಂಭಿಕ ಜೊತೆಯಾಟವನ್ನು ಮುರಿಯಲು ವರುಣ್ ಚಕ್ರವರ್ತಿಯನ್ನು ತಂದಿದ್ದರು ಹಾಗೂ ಇದು ಫಲ ನೀಡಿತು. ರೀಝಾ ಹೆಂಡ್ರಿಕ್ಸ್ ಅವರನ್ನು ವರುಣ್, ಮೊದಲನೇ ಎಸೆತದಲ್ಲಿಯೇ ಔಟ್ ಮಾಡಿದರು. ನಂತರ ಎರಡನೇ ವಿಕೆಟ್‌ಗೆ 83 ರನ್‌ಗಳ ಜೊತೆಯಾಟವನ್ನು ಆಡಿದ ಕ್ವಿಂಟನ್ ಡಿ ಕಾಕ್ ಹಾಗೂ ಏಡೆನ್ ಮಾರ್ಕ್ರಮ್ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಾಯಕ ಸೂರ್ಯಕುಮಾರ್ ಯಾದವ್, ಯುವ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮತ್ತೊಮ್ಮೆ ಕರೆ ತಂದರು.
No matter the situation, abusing a youngster is never justified. Shame on Gautam Gambhir for his actions towards Arshdeep Singh pic.twitter.com/05Ie1q4auy
— 𝐀𝐚𝐫𝐚𝐯𝐌𝐒𝐃𝐢𝐚𝐧™ (@AaravMsd_07) December 11, 2025
11ನೇ ಓವರ್‌ನಲ್ಲಿ 7 ವೈಡ್ ಹಾಕಿದ ಅರ್ಷದೀಪ್ ಸಿಂಗ್
ಪಂದ್ಯದ 11ನೇ ಓವರ್ ಬೌಲ್ ಮಾಡಲು ಬಂದ ಅರ್ಷದೀಪ್ ಸಿಂಗ್ ಲಯ ತಪ್ಪಿದಂತೆ ಕಂಡು ಬಂದರು. ಓವರ್‌ನ ಮೊದಲ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಅವರಿಂದ ಸಿಕ್ಸರ್ ಹೊಡೆಸಿಕೊಂಡರು. ನಂತರ ಅವರು ಸತತ ಎರಡು ವೈಡ್‌ಗಳನ್ನು ಹಾಕಿದರು. ಮುಂದಿನ ಚೆಂಡು ಯಾವುದೇ ರನ್ ಗಳಿಸಲಿಲ್ಲ ಮತ್ತು ನಂತರ ಅವರು ಸತತ ನಾಲ್ಕು ವೈಡ್‌ಗಳನ್ನು ಬೌಲ್ ಮಾಡಿದರು. ಬಳಿಕ ಸತತ ಮೂರು ಎಸೆತಗಳನ್ನು ಚೆನ್ನಾಗಿ ಹಾಕಿದರು. ಆದರೆ, ಆರನೇ ಎಸೆತದಲ್ಲಿ ಪುನಃ ವೈಡ್ ಬಾಲ್ ಹಾಕಿದರು. ಆ ಮೂಲಕ ತಮ್ಮ ಮೂರನೇ ಓವರ್‌ನಲ್ಲಿ ಇವರು7 ವೈಡ್‌ಗಳು ಸೇರಿದಂತೆ 18 ರನ್‌ಗಳನ್ನು ಬಿಟ್ಟುಕೊಟ್ಟರು.
Arshdeep Singh delivered 6 wides in an Over🤯
— CREX (@Crex_live) December 11, 2025
Guatam Gambhir reaction says it all👀#INDvsSA #Cricket pic.twitter.com/SBz1wEQWFo
ಅರ್ಷದೀಪ್ ವಿರುದ್ಧ ಗಂಭೀರ್ ಗರಂ
ಅರ್ಷದೀಪ್ ಸಿಂಗ್ 7 ವೈಡ್‌ಗಳನ್ನು ಹಾಕಿದ ಬಳಿಕ ಡಗೌಟ್‌ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಯುವ ವೇಗಿ ವಿರುದ್ಧ ಕಿಡಿ ಕಾರಿದರು. ಒಂದು ಓವರ್ ಅನ್ನು ಪೂರ್ಣಗೊಳಿಸಲು ಎಡಗೈ ವೇಗಿ ಒಟ್ಟು 13 ಎಸೆತಗಳನ್ನು ತೆಗೆದುಕೊಂಡಿದ್ದರು. ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್ ಅನ್ನು ಮುಗಿಸಲು ಹೆಚ್ಚಿನ ಎಸೆತಗಳನ್ನು ತೆಗೆದುಕೊಂಡ ಐಸಿಸಿ ಪೂರ್ಣ ಸದಸ್ಯತ್ವ ತಂಡದ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಅರ್ಷದೀಪ್ ಭಾಜನರಾಗಿದ್ದಾರೆ.
IND vs SA: ಭಾರತ ಟಿ20 ತಂಡದಲ್ಲಿ ಸಮಸ್ಯೆ ಹುಟ್ಟು ಹಾಕಿದ ಶುಭಮನ್ ಗಿಲ್!
ಟಿ20ಐ ಪಂದ್ಯದ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಬೌಲರ್‌ಗಳು (ಪೂರ್ಣ ಸದಸ್ಯ ತಂಡಗಳು)
13 - ನವೀನ್-ಉಲ್-ಹಕ್ vs ಜಿಂಬಾಬ್ವೆ, ಹರಾರೆ, 2024
13 - ಅರ್ಷದೀಪ್ ಸಿಂಗ್ vs ದಕ್ಷಿಣ ಆಫ್ರಿಕಾ, ಮುಲ್ಲನ್‌ಪುರ, 2025
12 - ಸಿಸಂದಾ ಮಗಾಳ vs ಪಾಕಿಸ್ತಾನ, ಜೋಹಾನ್ಸ್‌ಬರ್ಗ್, 2021