ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Varyun Chakravarthy: ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಕೀ ಆಟಗಾರನನ್ನು ಆರಿಸಿದ ಸೌರವ್‌ ಗಂಗೂಲಿ!

varun Chakravarthy on India's Key Bowler: ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ ಹಾಗೂ ಮಾರ್ಚ್‌ ಅವಧಿಯಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಈಗಾಗಲೇ ಆಯ್ಕೆ ಮಾಡಿದೆ. ಇವರ ಪೈಕಿ ಭಾರತ ತಂಡಕ್ಕೆ ವರುಣ್‌ ಚಕ್ರವರ್ತಿ ಕೀ ಆಟಗಾರ ಎಂದು ಮಾಜಿ ನಾಯಕ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಕೀ ಆಟಗಾರನನ್ನು ಆರಿಸಿದ ಗಂಗೂಲಿ!

ಭಾರತ ತಂಡಕ್ಕೆ ಕೀ ಆಟಗಾರನನ್ನು ಆರಿಸಿದ ಸೌರವ್‌ ಗಂಗೂಲಿ. -

Profile
Ramesh Kote Jan 11, 2026 4:56 PM

ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ ಹಾಗೂ ಮಾರ್ಚ್‌ ಅವಧಿಯಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ (ICC T20 World Cup 2026) ನಡೆಯಲಿದೆ. ಈ ಟೂರ್ನಿಯ ಸಲುವಾಗಿ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಕಳೆದ ತಿಂಗಳು ಆಯ್ಕೆ ಮಾಡಿತ್ತು. ಅದರಂತೆ ಟಿ20 ವಿಶ್ವಕಪ್‌ ಭಾರತ ತಂಡದ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಇದೀಗ ಭಾರತ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟ್ಸ್‌ಮನ್‌ ಸೌರವ್‌ ಗಂಗೂಲಿ (Sourav Ganguly), ಟಿ20 ವಿಶ್ವಕಪ್‌ ತಂಡದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ವರುಣ್‌ ಚಕ್ರವರ್ತಿ (Varun Chakravarthy) ಕೀ ಆಟಗಾರ ಎಂದು ಹೇಳಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸೌರವ್‌ ಗಂಗೂಲಿ, ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ತಯಾರಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ಕಂಡೀಷನ್ಸ್‌ಗೆ ಸ್ಪಿನ್‌ ನೆರವು ನೀಡಲಿದೆ. ಹಾಗಾಗಿ ತಂಡದಲ್ಲಿನ ಉತ್ತಮ ಗುಣಮಟ್ಟದ ಸ್ಪಿನ್‌ ಭಾರತ ತಂಡಕ್ಕೆ ಪ್ರಮುಖ ಅಸ್ತ್ರವಾಗಲಿದೆ ಎಂದಿದ್ದಾರೆ.

ʻಸೆಲೆಕ್ಟರ್‌ಗಳ ನಿರ್ಧಾರವನ್ನು ಗೌರವಿಸಬೇಕುʼ: ಟಿ20 ವಿಶ್ವಕಪ್‌ ಭಾರತ ತಂಡದಿಂದ ಕೈ ಬಿಟ್ಟ ಬಗ್ಗೆ ಶುಭಮನ್‌ ಗಿಲ್‌ ಪ್ರತಿಕ್ರಿಯೆ!

"ತವರಿನಲ್ಲಿ ವಿಶ್ವಕಪ್‌ ಟೂರ್ನಿಗಿಂತ ಬೇರೆ ಯಾವುದೂ ದೊಡ್ಡದಿಲ್ಲ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾರತ ತಂಡದಲ್ಲಿ ಬಲಿಷ್ಠ ಸ್ಪಿನ್‌ ಪಡೆ ಇದೆ ಹಾಗೂ ವರುಣ್‌ ಚಕ್ರವರ್ತಿ ಸಂಪೂರ್ಣವಾಗಿ ಫಿಟ್‌ ಇದ್ದರೆ, ಭಾರತ ತಂಡಕ್ಕೆ ಇದು ಒಳ್ಳೆಯದಾಗಲಿದೆ, " ಎಂದು 2003ರ ವಿಶ್ವಕಪ್‌ ರನ್ನರ್‌ ಅಪ್‌ ಆಗಿದ್ದ ಭಾರತ ತಂಡದ ನಾಯಕ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ಸ್ಪಿನ್‌ ವಿಭಾಗದಲ್ಲಿ ಬಲಿಷ್ಠ ಸ್ಪಿನ್ನರ್‌ಗಳಿದ್ದಾರೆ. ವರುಣ್‌ ಚಕ್ರವರ್ತಿ, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಇದ್ದಾರೆ. ಫೆಬ್ರವರಿ 7 ರಿಂದ ಮಾರ್ಚ್‌ 8 ರವರಗೆ ಟಿ20 ವಿಶ್ವಕಪ್‌ ಟೂರ್ನಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿವೆ. ಏಷ್ಯಾ ಉಪ ಖಂಡದಲ್ಲಿ ಪಿಚ್‌ಗಳು ಸ್ಪಿನ್‌ ಸ್ನೇಹಿಯಾಗುವೆ. ಹಾಗಾಗಿ ಎಲ್ಲಾ ತಂಡಗಳು ಹೆಚ್ಚಿನ ಸ್ಪಿನ್ನರ್‌ಗಳಿಗೆ ಒತ್ತು ನೀಡಲಿದ್ದಾರೆ.

ನ್ಯೂಜಿಲೆಂಡ್‌ ತಂಡದ ಭಾರತೀಯ ಮೂಲದ ಸ್ಪಿನ್ನರ್‌ ಆದಿತ್ಯ ಅಶೋಕ್ ಯಾರು?

ಭಾರತ ತಂಡದಲ್ಲಿ ವರುಣ್‌ ಚಕ್ರವರ್ತಿ ಪ್ರಮುಖ ಅಸ್ತ್ರವಾಗಿ ಎದ್ದು ಕಾಣುತ್ತಾರೆ. ಈ ನಿಗೂಢ ಸ್ಪಿನ್ನರ್ 32 ಟಿ20ಐ ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ವಿಶ್ವಕಪ್‌ಗೆ ಆಗಮಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ವಂಚಿಸುವ ಅವರ ಸಾಮರ್ಥ್ಯವು ಅವರನ್ನು ಭಾರತದ ಯೋಜನೆಗಳಿಗೆ ಕೇಂದ್ರಬಿಂದುವನ್ನಾಗಿ ಮಾಡುತ್ತದೆ, ವಿಶೇಷವಾಗಿ ಹೆಚ್ಚಿನ ಒತ್ತಡದ ನಾಕೌಟ್ ಪಂದ್ಯಗಳಲ್ಲಿ.

ಜನವರಿ 21 ರಿಂದ ಪರಿಚಿತ ಎದುರಾಳಿ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತನ್ನ ಕೊನೆಯ ಟಿ20ಐ ಸರಣಿಗೆ ಸಜ್ಜಾಗುತ್ತಿರುವಾಗ, ವರುಣ್ ಚಕ್ರವರ್ತಿ ಅವರ ಫಾರ್ಮ್ ಅಭಿಮಾನಿಗಳು ಮತ್ತು ತಜ್ಞರಲ್ಲಿ ಅತಿ ದೊಡ್ಡ ಚರ್ಚೆಯ ವಿಷಯಗಳಲ್ಲಿ ಒಂದಾಗಿದೆ.