IND vs SL: ಶ್ರೀಲಂಕಾ ಎದುರು ಟಾಸ್ ಗೆದ್ದುಬೌಲಿಂಗ್ ಆಯ್ದುಕೊಂಡ ಶ್ರೀಲಂಕಾ, ಭಾರತ ಮೊದಲ ಬ್ಯಾಟಿಂಗ್!
IND vs SL: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಏಷ್ಯಾ ಕಪ್ ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಏಷ್ಯಾ ಕಪ್ ಸೂಪರ್-4ರ ಪಂದ್ಯ. -

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಏಷ್ಯಾ ಕಪ್(Asia Cup 2025) ಟೂರ್ನಿಯ ಕೊನೆಯ ಸೂಪರ್-4ರ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು (IND vs SL) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದ ಭಾರತ ತಂಡ ಮೊದಲು ಬ್ಯಾಟ್ ಮಾಡಲಿದೆ. ಟೀಮ್ ಇಂಡಿಯಾ ಈಗಾಗಲೇ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಹಾಗಾಗಿ ಈ ಪಂದ್ಯದ ಫಲಿತಾಂಶ ಭಾರತ ತಂಡಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಈ ಪಂದ್ಯವನ್ನು ಗೆದ್ದು ಗೌರವದೊಂದಿಗೆ ಏಷ್ಯಾ ಕಪ್ ಅಭಿಯಾನವನ್ನು ಮುಗಿಸಲು ಶ್ರೀಲಂಕಾ ಎದುರು ನೋಡುತ್ತಿದೆ.
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ಜಸ್‌ಪ್ರೀತ್ ಬುಮ್ರಾ ಹಾಗೂ ಶಿವಂ ದುಬೆಗೆ ವಿಶ್ರಾಂತಿಯನ್ನು ನೀಡಲಾಗಿದೆ. ಹಾಗಾಗಿ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾಗೆ ಆಡುವ ಬಳಗದಲ್ಲಿಅವಕಾಶವನ್ನು ನೀಡಲಾಗಿದೆ. ಶ್ರೀಲಂಕಾ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಜನಿತ್ ಲಿಯಾಂಗೆ ಅವರು ಚಮಿಕಾ ಕರುಣಾರತ್ನೆ ಅವರ ಸ್ಥಾನಕ್ಕೆ ಬಂದಿದ್ದಾರೆ ಎಂದು ನಾಯಕ ಚರಿತಾ ಅಸಲಂಕಾ ಟಾಸ್ ವೇಳೆ ಮಾಹಿತಿ ನೀಡಿದ್ದಾರೆ.
IND vs SL: ಶ್ರೀಲಂಕಾ ವಿರುದ್ದ ಸೂಪರ್-4ರ ಪಂದ್ಯಕ್ಕೆ ಭಾರತ ಸಜ್ಜು, ಪಿಚ್ ರಿಪೋರ್ಟ್, ಮುಖಮುಖಿ ದಾಖಲೆ!
ಭಾರತ ತಂಡ ಸೂಪರ್-4ರಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಈಗಾಗಲೇ ಪ್ರವೇಶ ಮಾಡಿದೆ. ಹಾಗಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಫೈನಲ್ ನಿಮಿತ್ತ ಅಭ್ಯಾಸವನ್ನು ನಡೆಸಲಿದೆ. ಆದರೆ, ಶ್ರೀಲಂಕಾ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲುವ ಮೂಲಕ ಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆದಿದೆ. ಆದರೂ ಗೆಲುವಿನ ಮೂಲಕ ಟೂರ್ನಿಯನ್ನು ಮುಗಿಸಲು ಪ್ರಯತ್ನಿಸಲಿದೆ.
🚨 Playing XI 🚨
— AsianCricketCouncil (@ACCMedia1) September 26, 2025
Lineups announced! 🗒️
India find themselves one last opportunity to 🔒 their team combination, whereas Sri Lanka will look to end on a high.#INDvSL #DPWorldAsiaCup2025 #ACC pic.twitter.com/3326NYjg6O
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ
ಶ್ರೀಲಂಕಾ: ಪತುಮ್ ನಿಸಾಂಕ, ಕುಸಾಲ್ ಮೆಂಡಿಸ್ (ವಿ.ಕೀ), ಕುಸಾಲ್ ಪೆರೇರಾ, ಚರಿತ್ ಅಸಲಂಕ (ನಾಯಕ), ಜನಿತ್ ಲಿಯಾನಗೆ, ಕಮಿಂದು ಮೆಂಡಿಸ್, ದಸೂನ್ ಶನಕ, ವಾನಿಂದು ಹಸರಂಗ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ನುವಾನ್ ತುಷಾರ