ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prithvi Shaw: ಮುಂಬೈ ತೊರೆದು ಮಹಾರಾಷ್ಟ್ರ ತಂಡ ಸೇರಿದ ಪೃಥ್ವಿ ಶಾ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದ ಪೃಥ್ವಿ ಶಾ, ನಾನು ತಪ್ಪು ಸ್ನೇಹಿತರನ್ನು ಆಯ್ಕೆ ಮಾಡಿಕೊಂಡೆ. ಅವರ ಸಹವಾಸ ದೋಷದಿಂದಾಗಿ ದಾರಿ ತಪ್ಪಿದೆ. ಈ ಮೂಲಕ ನನ್ನ ಕ್ರಿಕೆಟ್‌ ಬದುಕಿಗೆ ನಾನೇ ಕೊಳ್ಳಿ ಇಟ್ಟುಕೊಂಡೆ ಎಂದು ಹೇಳಿಕೊಂಡಿದ್ದರು. ಮೈದಾನದಲ್ಲಿ 8 ಗಂಟೆ ಅಭ್ಯಾಸ ಮಾಡಬೇಕಾಗಿದ್ದ ನಾನು ಕೆಟ್ಟ ಸಹವಾಸ ದೋಷದಿಂದಾಗಿ 4 ಗಂಟೆ ಮಾತ್ರ ಇರುವಂತಾಯಿತು. ಇದು ನನ್ನ ಕ್ರಿಕೆಟ್‌ಗೆ ಮುಳುವಾಯಿತು ಎಂದಿದ್ದರು.

ಮುಂಬೈ ತೊರೆದು ಮಹಾರಾಷ್ಟ್ರ ತಂಡ ಸೇರಿದ ಪೃಥ್ವಿ ಶಾ

Profile Abhilash BC Jul 7, 2025 4:29 PM

ಮುಂಬಯಿ: ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟರ್‌ ಆಗಿದ್ದ ಪೃಥ್ವಿ ಶಾ (Prithvi Shaw) ಅವರು ಮುಂದಿನ ಆವೃತ್ತಿಯ ದೇಶೀಯ ಕ್ರಿಕೆಟ್‌ ಋತು ಆರಂಭಕ್ಕೂ ಮುನ್ನ ಮುಂಬೈ ತಂಡ ತೊರೆದು ಮಹಾರಾಷ್ಟ್ರ(Prithvi Shaw joins Maharashtra) ಸೇರಿಕೊಂಡಿದ್ದಾರೆ. ಕಳೆದ ತಿಂಗಳು ತಂಡಗಳನ್ನು ಬದಲಾಯಿಸಲು ಶಾ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(MCA) ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಕೋರಿದ್ದರು. ಅದನ್ನು ಜೂನ್ ಅಂತ್ಯದಲ್ಲಿ ಅವರಿಗೆ ನೀಡಲಾಗಿತ್ತು.

"ನನ್ನ ವೃತ್ತಿಜೀವನದ ಈ ಹಂತದಲ್ಲಿ, ಮಹಾರಾಷ್ಟ್ರ ತಂಡವನ್ನು ಸೇರುವುದರಿಂದ ನಾನು ಕ್ರಿಕೆಟಿಗನಾಗಿ ಮತ್ತಷ್ಟು ಬೆಳೆಯಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ" ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ವರ್ಷಗಳಿಂದ ನನಗೆ ದೊರೆತ ಅವಕಾಶಗಳು ಮತ್ತು ಬೆಂಬಲಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದ ಶಾ, ನಾನು ತಪ್ಪು ಸ್ನೇಹಿತರನ್ನು ಆಯ್ಕೆ ಮಾಡಿಕೊಂಡೆ. ಅವರ ಸಹವಾಸ ದೋಷದಿಂದಾಗಿ ದಾರಿ ತಪ್ಪಿದೆ. ಈ ಮೂಲಕ ನನ್ನ ಕ್ರಿಕೆಟ್‌ ಬದುಕಿಗೆ ನಾನೇ ಕೊಳ್ಳಿ ಇಟ್ಟುಕೊಂಡೆ ಎಂದು ಹೇಳಿಕೊಂಡಿದ್ದರು. ಮೈದಾನದಲ್ಲಿ 8 ಗಂಟೆ ಅಭ್ಯಾಸ ಮಾಡಬೇಕಾಗಿದ್ದ ನಾನು ಕೆಟ್ಟ ಸಹವಾಸ ದೋಷದಿಂದಾಗಿ 4 ಗಂಟೆ ಮಾತ್ರ ಇರುವಂತಾಯಿತು. ಇದು ನನ್ನ ಕ್ರಿಕೆಟ್‌ಗೆ ಮುಳುವಾಯಿತು ಎಂದಿದ್ದರು.

ಪೃಥ್ವಿ ಶಾ ಅವರ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಅನುಭವವು ಅಮೂಲ್ಯವಾದುದು ಮತ್ತು ಮುಂದಿನ ಋತುಗಳಲ್ಲಿ ತಂಡವು ಪೃಥ್ವಿ ಅವರ ಹೊಸ ಪ್ರಯಾಣದಲ್ಲಿ ಅವರ ಹಿಂದೆ ದೃಢವಾಗಿ ನಿಲ್ಲುತ್ತದೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಧ್ಯಕ್ಷ ರೋಹಿತ್ ಪವಾರ್ ಹೇಳಿದರು. ಮಹಾರಾಷ್ಟ್ರ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸುವ ಸಾಧ್ಯತೆ ಇದೆ.



ತನ್ನ ಪ್ರತಿಭೆಯಿಂದಲೇ ಸದ್ದು ಮಾಡಿದ್ದ ಅಂಡರ್‌ 19 ವಿಶ್ವಕಪ್‌ ವಿಜೇತ ನಾಯಕ ಶಾ, 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ್ದರು. ಆದರೆ ತನ್ನ ಅಶಿಸ್ತಿನ ಕಾರಣದಿಂದ ಅಷ್ಟೇ ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾದರು. ಶಾ ಭಾರತ ಪರ ಕೇವಲ ಐದು ಟೆಸ್ಟ್, ಆರು ಏಕದಿನ ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಕಳೆದ ವರ್ಷ ಫಿಟ್ನೆಸ್ ಕಾರಣದಿಂದ ಅವರನ್ನು ಮುಂಬೈ ರಣಜಿ ತಂಡದಿಂದಲೂ ಕೈ ಬಿಡಲಾಗಿತ್ತು.

ಇದನ್ನೂ ಓದಿ ಎರಡು ತಿಂಗಳ ಹಿಂದೆ ತೆಂಡೂಲ್ಕರ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಪೃಥ್ವಿ ಶಾ!