ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ (IND vs SA)ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 101 ರನ್‌ಗಳಿಂದ ಗೆದ್ದು ಬೀಗಿತ್ತು. ಬಳಿಕ ಮಹಾರಾಜ ಯದುವೀಂದ್ರ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಆ ಮೂಲಕ ಉಭಯ ತಂಡಗಳು ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿವೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ (Suryakumar Yadav) ಐತಿಹಾಸಿಕ ದಾಖಲೆ ಬರೆದಿದ್ದಾರೆ. ಸೂರ್ಯಕುಮಾರ್ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ 36 ಪಂದ್ಯಗಳನ್ನಾಡಿದ್ದು, 28 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಎರಡು ಬಾರಿ ಸೂಪರ್ ಓವರ್‌ನಲ್ಲಿ ಟೀಮ್ ಇಂಡಿಯಾ ಗೆಲುವು ಕಂಡಿದೆ. ಇನ್ನು ಆರು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಉಳಿದ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಇದರಿರೊಂದಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತದ ಗೆಲುವಿನ ಸರಾಸರಿ ಹೆಚ್ಚಾಗಿದ್ದು, ರೋಹಿತ್ ಶರ್ಮಾ (Rohit Sharma) ಹಾಗೂ ಮಿಚೆಲ್ ಮಾರ್ಷ್ (Michel Marsh) ಅವರ ದಾಖಲೆಗಳನ್ನು ಮುರಿದಿದ್ದಾರೆ.
ಸೂರ್ಯಕುಮಾರ್ ಯಾದವ್ ಇತ್ತೀಚಿಗೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅವರ ಬ್ಯಾಟಿಂಗ್ ವೈಫಲ್ಯ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲೂ ಮುಂದುವರಿದಿದೆ. ಇದರ ಹೊರತಾಗಿಯೂ, 2024ರ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡ ಪೂರ್ಣಾವಧಿ ನಾಯಕರನ್ನಾಗಿ ನೇಮಿಸಿದ ನಂತರ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಅವರು ಶ್ರೀಲಂಕಾದಲ್ಲಿ ಮೊದಲ ಬಾರಿ ನಾಯಕನಾಗಿ ಆಯ್ಕೆಯಾದ ಬಳಿಕ ಭಾರತ ತಂಡ, ಏಷ್ಯಾ ಕಪ್ ಸೇರಿದಂತೆ ಆಡಿರುವ ಎಲ್ಲಾ ಸರಣಿಗಳಲ್ಲಿ ಜಯ ದಾಖಲಿಸಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ 27 ಪಂದ್ಯಗಳನ್ನಾಡಿದ್ದು, 22 ಪಂದ್ಯಗಳಲ್ಲಿ ಗೆದ್ದಿದೆ.
IND vs SA: ಕ್ವಿಂಟಕ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ನಾಯಕರ ಅತ್ಯುತ್ತಮ ಟಿ20ಐ ಗೆಲುವಿನ ಶೇಕಡವಾರು ಪ್ರಮಾಣ
ಸೂರ್ಯಕುಮಾರ್ ಯಾದವ್- ಭಾರತ, 84.9%
ಮಿಚೆಲ್ ಮಾರ್ಷ್- ಆಸ್ಟ್ರೇಲಿಯಾ, 81.3%
ಅಸ್ಗರ್ ಅಫ್ಘನ್- ಅಫ್ಘಾನಿಸ್ತಾನ, 80.8%
ರೋಹಿತ್ ಶರ್ಮಾ- ಭಾರತ, 80.7%
ಸರ್ಫರಾಜ್ ಅಹ್ಮದ್- ಪಾಕಿಸ್ತಾನ, 78.4%
ವಿರಾಟ್ ಕೊಹ್ಲಿ- ಭಾರತ, 66.7%
IND vs SA: ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್ ಯಾದವ್!
ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾದ ಸೂರ್ಯ ಫಾರ್ಮ್
ಆಯ್ಕೆ ಸಮಿತಿ ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಎದುರು ನೋಡುತ್ತಿದೆ. ಈ ಮಧ್ಯೆ, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಆಯ್ಕೆ ಸಮಿತಿಗೆ ದೊಡ್ಡ ತಲೆ ನೋವಾಗಿದೆ. ಸೂರ್ಯಕುಮಾರ್ ಯಾದವ್ ಅವರು ಇತ್ತೀಚಿಗೆ ಫಾರ್ಮ್ ಕಳೆದುಕೊಂಡಿದ್ದು, ಪುನಃ ಲಯಕ್ಕೆ ಮರಳುವಲ್ಲಿ ವಿಫಲರಾಗುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡೂ ಟಿ20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.