IND vs SA: ವಿರಾಟ್ ಕೊಹ್ಲಿಯ ಎರಡು ವಿಶೇಷ ದಾಖಲೆಗಳನ್ನು ಮುರಿದ ತಿಲಕ್ ವರ್ಮಾ!
ಧರ್ಮಶಾಲಾದಲ್ಲಿ ನಡೆದಿದ್ದ ದಕ್ಷಿಣ ಆಪ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ, ಬೌಲರ್‌ಗಳ ಪ್ರಾಬಲ್ಯದಿಂದಾಗಿ ಸುಲಭ ಜಯ ದಾಖಲಿಸಿತು. ಈ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತು. ಈ ನಡುವೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ತಿಲಕ್ ವರ್ಮಾ ವಿರಾಟ್ ಕೊಹ್ಲಿಯವರ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ. -
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ(IND vs SA) ಭಾರತ ತಂಡ ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ದಕ್ಷಿಣ ಆಫ್ರಿಕಾ ತಂಡ, ಭಾರತ (India) ತಂಡದ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿತು. ಇದರ ನಡುವೆ ಟೀಮ್ ಇಂಡಿಯಾ ಆಟಗಾರ ತಿಲಕ್ ವರ್ಮಾ (Tilak Verma) ಟಿ20ಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ತಿಲಕ್ ವರ್ಮಾ ಭಾರತ ತಂಡದ ಪರ 39 ಟಿ20ಐ ಪಂದ್ಯಗಳನ್ನಾಡಿದ್ದು, 48ರ ಸರಾಸರಿ ಮತ್ತು 143ರ ಸ್ಟ್ರೈಕ್ ರೇಟ್‌ನಲ್ಲಿ 1009 ರನ್ ಗಳಿಸಿದ್ದಾರೆ.
ತಿಲಕ್ ವರ್ಮಾ ಅವರು ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿಯ ತಂಡವೊಂದರ ವಿರುದ್ಧ ಉತ್ತಮ ಸರಾಸರಿ ಹೊಂದಿದ್ದ ದಾಖಲೆಯನ್ನು ತಿಲಕ್ ಮುರಿದಿದ್ದು, ಚೇಸಿಂಗ್‌ನಲ್ಲಿ ಈವರೆಗೆ ಆಡಿರುವ 16 ಪಂದ್ಯಗಳಲ್ಲಿ 68ರ ಸರಾಸರಿಯಲ್ಲಿ 500ಕ್ಕಿಂತಲೂ ಹೆಚ್ಚು ರನ್ ಕಲೆಹಾಕಿದ್ದಾರೆ.
IND vs SA: ಮೂರನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡಿದ್ದೇಕೆ? ತಿಲಕ್ ವರ್ಮಾ ಪ್ರತಿಕ್ರಿಯೆ!
ಟಿ20ಐ ಚೇಸಿಂಗ್‌ನಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಆಟಗಾರರು
ತಿಲಕ್ ವರ್ಮಾ- 68
ವಿರಾಟ್ ಕೊಹ್ಲಿ- 67.1
ಎಂಎಸ್ ಧೋನಿ- 47.71
ಜೆಪಿ ಡುಮಿನಿ- 45.55
ಕುಮಾರ್ ಸಂಗಕ್ಕಾರ- 44.93
ತಂಡವೊಂದರ ವಿರುದ್ಧ ಉತ್ತಮ ಸರಾಸರಿ ಹೊಂದಿದ್ದ ದಾಖಲೆ ಮುರಿದ ತಿಲಕ್
ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು 70.50ರ ಸರಾಸರಿಯನ್ನು ಹೊಂದಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನದ ವಿರುದ್ಧ 70.28ರ ಸರಾಸರಿಯನ್ನು ಹೊಂದಿದ್ದರು. ಆ ದಾಖಲೆಯನ್ನು ಕೂಡ ಇದೀಗ ತಿಲಕ್ ಮುರಿದಿದ್ದಾರೆ. ತಿಲಕ್ ವರ್ಮಾ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದನ್ನು ಪ್ರಾರಂಭಿಸಿದ ಬಳಿಕ 167ರ ಸ್ಟ್ರೈಕ್ ರೇಟ್‌ನಲ್ಲಿ 2 ಶತಕಗಳೊಂದಿಗೆ 468 ರನ್ ಗಳಿಸಿದ್ದಾರೆ.
IND vs SA: ರೋಹಿತ್ ಶರ್ಮಾರ ವಿಶೇಷ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್!
ತಂಡವೊಂದರ ವಿರುದ್ಧ ಅತ್ಯುತ್ತಮ ಸರಾಸರಿ ಹೊಂದಿರುವ ಆಟಗಾರರು
ತಿಲಕ್ ವರ್ಮಾ- 70.50, ಭಾರತ vs ದಕ್ಷಿಣ ಆಫ್ರಿಕಾ
ವಿರಾಟ್ ಕೊಹ್ಲಿ- 70.28, ಭಾರತ vs ಪಾಕಿಸ್ತಾನ
ವಿರಾಟ್ ಕೊಹ್ಲಿ- 67.8, ಭಾರತ vs ಶ್ರೀಲಂಕಾ
ಕೆಎಲ್ ರಾಹುಲ್- 58.83, ಭಾರತ vs ವೆಸ್ಟ್ ಇಂಡೀಸ್
ವಿರಾಟ್ ಕೊಹ್ಲಿ- 57.0, ಭಾರತ vs ವೆಸ್ಟ್ ಇಂಡೀಸ್
IND vs SA: ಒಂದೇ ಓವರ್‌ನಲ್ಲಿ 7 ವೈಡ್ ಹಾಕಿದ ಅರ್ಷದೀಪ್ ಸಿಂಗ್ ವಿರುದ್ಧ ಗಂಭೀರ್ ಕಿಡಿ!
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಿಲಕ್ ವರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೂರು ಪಂದ್ಯಗಳಲ್ಲಿ ಒಟ್ಟು ಅವರು ಒಟ್ಟು 113 ರನ್ ಕಲೆಹಾಕಿದ್ದಾರೆ. ಮುಲ್ಲಾನ್‌ಪುರ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ 62 ರನ್‌ಗಳ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಭಾರತ ತಂಡದ ಪರ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರಾಗಿದ್ದಾರೆ. ಇನ್ನು ಮುಂದಿನ ಪಂದ್ಯ ಡಿಸೆಂಬರ್ 17ರಂದು ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಭಾರತ ತಂಡ ಈ ಪಂದ್ಯ ಗೆಲ್ಲುವ ಮೂಲಕ ತವರಿನಲ್ಲಿ ಸರಣಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.