92 ರನ್‌ಗೆ ವಿಕೆಟ್ ಒಪ್ಪಿಸಿದರೂ 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್ ಸೂರ್ಯವಂಶಿ!
ಕೇಂದ್ರ ವಲಯ ವಿರುದ್ಧದ ಪಂದ್ಯದಲ್ಲಿ ಪೂರ್ವ ವಲಯ ನಾಯಕ ವೈಭವ್ ಸೂರ್ಯವಂಶಿ 92 ರನ್‌ಗಳನ್ನು ಕಲೆ ಹಾಕಿದರು. ಆದರೆ, ಅವರು ಕೇವಲ 8 ರನ್‌ಗಳ ಅಂತರದಲ್ಲಿ ಶತಕವನ್ನು ಕಳೆದುಕೊಂಡರು. ಇದರ ಹೊರತಾಗಿಯೂ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಅರ್ಧಶತಕ ಬಾರಿಸಿ 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್. -
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 2026ರ ದುಲೀಪ್ ಟ್ರೋಫಿ (Duleep Trophy 2026) ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸುವ ಅವಕಾಶವನ್ನು ವೈಭವ್ ಸೂರ್ಯವಂಶಿ (Vaibhav Sooryavanshi) ಕಳೆದುಕೊಂಡಿದ್ದಾರೆ. ಇದರ ಹೊರತಾಗಿಯೂ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ . ಅಲ್ಲದೆ, ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೊದಲನೇ ಮೈದಾನದಲ್ಲಿ ನಡೆಯುತ್ತಿರುವ ಕೇಂದ್ರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅದ್ಭುತವಾಗಿ ಬ್ಯಾಟ್ ಮಾಡಿದರು. ಆ ಮೂಲಕ ಚೊಚ್ಚಲ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅರ್ಧಶತಕದ ಬಳಿಕ ಚೊಚ್ಚಲ ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ತಮ್ಮ ಚೊಚ್ಚಲ ದುಲೀಪ್ ಟ್ರೋಫಿ ಶತಕವನ್ನು ಕಳೆದುಕೊಂಡರು.
ಸಾರಾಂಶ್ ಜೈನ್ ಎಸೆತದಲ್ಲಿ ಸಿಕ್ಸರ್ ಬಾರಿಸಿ 42 ಎಸೆತಗಳಲ್ಲಿ ವೈಭವ್ ಸೂರ್ಯವಂಶಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದಾರೆ.
Duleep Trophy: ಇಶಾನ್ ಕಿಶನ್‌ಗೆ ಗಾಯ, ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿ ನಾಯಕ!
40 ರನ್ ವೇಳೆ ಒಂದು ಜೀವದಾನ ಪಡೆದಿದ್ದ ವೈಭವ್ ಸೂರ್ಯವಂಶಿ ಅವರು ಸೆಂಟ್ರಲ್ ಝೋನ್ ಬೌಲರ್‌ಗಳ ಬೆವರಿಳಿಸಿದರು. 81 ರನ್ ಗಳಿಸಿದ ಬಳಿಕ ವೈಭವ್, ಸಾರಾಂಶ್ ಜೈನ್‌ಗೆ ಸಿಕ್ಸರ್ ಹಾಗೂ ಬೌಂಡರಿ ಗಳಿಸಿ 90ರ ಗಡಿಯನ್ನು ದಾಟಿದರು. 81 ಎಸೆತಗಳಲ್ಲಿ 92 ರನ್ ಗಳಿಸಿದ ಬಳಿಕ 26ನೇ ಓವರ್ ಹರ್ಷ್ ದುಬೇ ಅವರ ಎಸೆತದಲ್ಲಿ ವೈಭವ್ ವಿಕೆಟ್ ಒಪ್ಪಿಸುವ ಮೂಲಕ ಶತಕವನ್ನು ಕಳೆದುಕೊಂಡು ನಿರಾಶೆ ಅನುಭವಿಸಿದರು.
ಅಭಿಮನ್ಯು ಈಶ್ವರನ್ ಅವರ ಜೊತೆಗೆ ವೈಭವ್ ಸೂರ್ಯವಂಶಿ 162 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಪೂರ್ವ ವಲಯ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿದರು. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅವರು 11 ಶತಕಗಳನ್ನು ಸಿಡಿಸಿದ್ದರೂ 7 ಬಾರಿ 90ರಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
ನನ್ನ ಪಾಕಿಸ್ತಾನ ಸಂಬಂಧ ಮುಗಿಯಿತು, ಇನ್ನು ಮುಂದೆ ನಾನು ಬ್ರಿಟಿಷ್ ಪ್ರಜೆ ಎಂದ ಮೊಹಮ್ಮದ್ ಆಮಿರ್!
1969ರ ಆವೃತ್ತಿಯಲ್ಲಿ ಲಕ್ಷಣ್ ಸಿಂಗ್ ಅವರು 16 ವರ್ಷ 23 ದಿನಗಳ ವಯಸ್ಸಿನಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಇದಾದ ಬಳಿಕ 2005ರಲ್ಲಿ16 ವರ್ಷ, 307 ದಿನಗಳ ವಯಸ್ಸಿನಲ್ಲಿ ಪಿಯೂಷ್ ಚಾವ್ಲಾ ಅರ್ಧಶತಕವನ್ನು ಬಾರಿಸಿ ಎರಡನೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು.
ಸಚಿನ್ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ ವೈಭವ್
ಸೂರ್ಯವಂಶಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸುವ ಅವಕಾಶದ ಅಂಚಿನಲ್ಲಿದ್ದರು. ಅವರು ಶತಕ ಸಿಡಿಸಿದ್ದರೆ, ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಈ ಮೂಲಕ 36 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆಯನ್ನು ಮುರಿಯಬಹುದಾಗಿತ್ತು. ಸಚಿನ್ ಅವರು 1990/91ರ ಋತುವಿನಲ್ಲಿ 17 ವರ್ಷ 262 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿ ಶತಕ ಸಿಡಿಸಿದ್ದರು.