ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

VHT 2025-26: ರಿಷಭ್‌ ಪಂತ್‌ ವಿಫಲವಾದರೂ ಸೌರಾಷ್ಟ್ರ ಎದುರು ಗೆದ್ದ ದೆಹಲಿ!

Delhi vs Saurashtra Match Highlights: ವಿರಾಟ್‌ ಕೊಹ್ಲಿಯ ಅನುಪಸ್ಥಿತಿಯಲ್ಲಿ ದೆಹಲಿ ತಂಡ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತನ್ನ ಗೆಲುವಿನ ಲಯವನ್ನು ಮುಂದುವರಿಸಿದೆ. ಸೋಮವಾರ ಸೌರಾಷ್ಟ್ರ ವಿರುದ್ಧ ದೆಹಲಿ ತಂಡ ಮೂರು ವಿಕೆಟ್‌ಗಳಿಂದ ಗೆದ್ದು ಬೀಗಿತು. ಆದರೆ, ಈ ಪಂದ್ಯದಲ್ಲಿಯೂ ರಿಷಭ್‌ ಪಂತ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ರಿಷಭ್‌ ಪಂತ್‌ ವೈಫಲ್ಯ.

ನವದೆಹಲಿ: ವಿರಾಟ್‌ ಕೊಹ್ಲಿ (Virat Kohli) ಅನುಪಸ್ಥಿತಿಯ ಹೊರತಾಗಿಯೂ ದಹಲಿ (Delhi) ತಂಡ, 2025-26ರ ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಈ ಟೂರ್ನಿಯಲ್ಲಿ ದೆಹಲಿ ತಂಡ ಗೆಲುವಿನ ಲಯವನ್ನು ಮುಂದುವರಿಸಿದೆ. ಅಂದ ಹಾಗೆ ಈ ಪಂದ್ಯದಲ್ಲಿಯೂ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ (Rishabh Pant) ಕೇವಲ 22 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಅಂದ ಹಾಗೆ ಸೌರಾಷ್ಟ್ರ ನೀಡಿದ್ದ 321 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದೆಹಲಿ, 7 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.

ಆರಂಭಿಕ ಬ್ಯಾಟ್ಸ್‌ಮನ್‌ ಅರ್ಪಿತ್‌ ರಾಣಾ ಅವರು ಬಹುಬೇಗ ವಿಕೆಟ್‌ ಒಪ್ಪಿಸಿದ ಬಳಿಕ ದೆಹಲಿ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಪ್ರಿಯಾಂಶ್‌ ಆರ್ಯ 48 ಎಸೆತಗಳಲ್ಲಿ 75 ರನ್‌ ಸಿಡಿಸುವ ಮೂಲಕ ದೆಹಲಿ ತಂಡಕ್ಕೆ ಆಸರೆಯಾಗಿದ್ದರು. ಪ್ರಿಯಾಂಶ್‌ ಆರ್ಯ ವಿಕೆಟ್‌ ಒಪ್ಪಿಸಿದ ಬಳಿಕ ದೆಹಲಿ ತಂಡ ನಿತೀಶ್‌ ರಾಣಾ ಹಾಗೂ ರಿಷಭ್‌ ಪಂತ್‌ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಲೆ ಸೌರಾಷ್ಟ್ರ ತಂಡ ಪಂದ್ಯದ ಮೇಲೆ ಪ್ರಾಬಲ್ಯವನ್ನು ಸಾಧಿಸಿತು.

Vijay Hazare Trophy 2025-26:‌ 101 ಎಸೆತಗಳಲ್ಲಿ 160 ರನ್‌ ಸಿಡಿಸಿದ ಧ್ರುವ್‌ ಜುರೆಲ್!

ದೆಹಲಿ ತಂಡಕ್ಕೆ ರಿಷಭ್‌ ಪಂತ್‌ ಕೀ ಆಟಗಾರ. ಆದರೆ, ಅವರು ಇನ್ನೂ ದೆಹಲಿ ಪರ ದೊಡ್ಡ ಇನಿಂಗ್ಸ್‌ ಆಡಿಲ್ಲ. ಭಾರತ ಏಕದಿನ ತಂಡದಿಂದ ದೀರ್ಘಾವಧಿ ಹೊರಗುಳಿದಿದ್ದಾರೆ. ಇದೀಗ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಆದರೆ, ಅವರಿಂದ ಇನ್ನು ದೇಶಿ ಕ್ರಿಕೆಟ್‌ನಲ್ಲಿ ದೊಡ್ಡ ಇನಿಂಗ್ಸ್‌ ಬಂದಿಲ್ಲ. ಹಾಗಾಗಿ ಭಾರತ ಏಕದಿನ ತಂಡದಲ್ಲಿ ಅವರಿಗೆ ಸ್ಥಾನ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ರಿಷಭ್‌ ಪಂತ್‌ ವಿಕೆಟ್‌ ಒಪ್ಪಿಸಿದ ಬಳಿಕ ಸೌರಾಷ್ಟ್ರ ಮಧ್ಯಮ ಓವರ್‌ಗಳಲ್ಲಿ ತೀವ್ರ ಕಠಣತೆಯಿಂದ ಬೌಲಿಂಗ್‌ ನಡೆಸಿದ್ದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ತೇಜಸ್ವಿ ಸಿಂಗ್‌, 51 ಎಸೆತಗಳಲ್ಲಿ 53 ರನ್‌ಗಳನ್ನು ಕಲೆ ಹಾಕಿದರು. ಇವರ ಜೊತೆಗೆ ಹರ್ಷ್‌ ತ್ಯಾಗಿ ಅವರು 45 ಎಸೆತಗಳಲ್ಲಿ 49 ರನ್‌ಗಳನ್ನು ಮೌಲ್ಯಯುತ ರನ್‌ಗಳನ್ನು ಕಲೆ ಹಾಕಿದರು. ಕೊನೆಯಲ್ಲಿ ಕೆಳ ಕ್ರಮಾಂಕದಲ್ಲಿ ವೇಗದ ಬೌಲರ್‌ ನವದೀಪ್‌ ಸೈನಿ ಅವರು 29 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿದ್ದಾರೆ. ಅಂತಿಮವಾಗಿ ದೆಹಲಿ ತಂಡ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.

Abhishek sharma: ಈ ಯುವ ಆಟಗಾರನಿಗೆ ಏಕದಿನ ತಂಡದಲ್ಲಿಯೂ ಸ್ಥಾನ ನೀಡಬೇಕೆಂದ ಆರ್‌ ಅಶ್ವಿನ್‌!

ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ರಿಷಭ್‌ ಪಂತ್‌ ಮೂರು ಪಂದ್ಯಗಳನ್ನು ಆಡಿದ್ದಾರೆ. ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಉಪಯುಕ್ತ ಕೊಡುಗೆ ನೀಡಿದ್ದರು. ಅವರು 79 ಎಸೆತಗಳಲ್ಲಿ 70 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಇದೇ ಲಯವನ್ನು ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ದೆಹಲಿ ತಂಡ ಗೆಲುವು ಪಡೆದರೂ ರಿಷಭ್‌ ಪಂತ್‌ ಅವರ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ನವದೀಪ್‌ ಸೈನಿ ಮಾರಕ ಬೌಲಿಂಗ್‌ ದಾಳಿ ನಡೆಸಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಪ್ರಿನ್ಸ್‌ ಯಾದವ್‌, ಹರ್ಷ್‌ ತ್ಯಾಗಿ ಹಾಗೂ ಅರ್ಪಿತ್‌ ರಾಣಾ ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ಸೌರಾಷ್ಟ್ರ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 320 ರನ್‌ಗಳನ್ನು ಕಲೆ ಹಾಕಿತ್ತು.