ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek sharma: ಈ ಯುವ ಆಟಗಾರನಿಗೆ ಏಕದಿನ ತಂಡದಲ್ಲಿಯೂ ಸ್ಥಾನ ನೀಡಬೇಕೆಂದ ಆರ್‌ ಅಶ್ವಿನ್‌!

R Ashwin on Abhishek Sharma: 2025ರಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದೆ. ಅಭಿಷೇಕ್‌ ಶರ್ಮಾಗೆ ಭಾರತ ಏಕದಿನ ತಂಡದಲ್ಲಿಯೂ ಅವಕಾಶ ನೀಡಬೇಕೆಂದು ಆರ್‌ ಅಶ್ವಿನ್‌ ಆಗ್ರಹಿಸಿದ್ದಾರೆ.

ಅಭಿಷೇಕ್‌ ಶರ್ಮಾಗೆ ಒಡಿಐ ತಂಡದಲ್ಲಿ ಸ್ಥಾನ ನೀಡಬೇಕೆಂದ ಅಶ್ವಿನ್‌!

ಅಭಿಷೇಕ್‌ ಶರ್ಮಾ ಅವರನ್ನು ಶ್ಲಾಘಿಸಿದ ಆರ್‌ ಅಶ್ವಿನ್‌. -

Profile
Ramesh Kote Dec 29, 2025 9:41 PM

ನವದೆಹಲಿ: ಪ್ರಸಕ್ತ 2025ರ ವರ್ಷದಲ್ಲಿ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಅವರನ್ನು ಭಾರತೀಯ ಸ್ಪಿನ್‌ ದಿಗ್ಗಜ ರವಿಚಂದ್ರನ್‌ (R Ashwin) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತ ಟಿ20ಐ ತಂಡದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಅಭಿಷೇಕ್‌ ಶರ್ಮಾ ಅವರಿಗೆ ದೀರ್ಘಾವಧಿ ಸ್ವರೂಪದಲ್ಲಿಯೂ ಅವಕಾಶ ನೀಡಬೇಕೆಂದು ಸ್ಪಿನ್‌ ದಂತಕತೆ ತಿಳಿಸಿದ್ದಾರೆ. ಅಲ್ಲದೆ ಈ ವರ್ಷದ ಬ್ಯಾಟ್ಸ್‌ಮನ್‌ ಆಗಿ ಅಭಿಷೇಕ್‌ ಶರ್ಮಾ ಮತ್ತು ಬೌಲರ್‌ ಆಗಿ ವರುಣ್‌ ಚಕ್ರವರ್ತಿ ಅವರನ್ನು ಆರಿಸಿದ್ದಾರೆ. ಭಾರತ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ ಏಷ್ಯಾ ಕಪ್‌ ಗೆಲುವಿನಲ್ಲಿ ವರುಣ್‌ ಚಕ್ರವರ್ತಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ ಆಶ್‌ ಕೀ ಬಾತ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, ಅಭಿಷೇಕ್‌ ಶರ್ಮಾ ಅವರು ಆಗಮನವು ಮುಂದಿನ ತಲೆ ಮಾರಿನ ಎಕ್ಸ್‌ ಫ್ಯಾಕ್ಟರ್‌ ಆಟಗಾರನಾಗಿ ಮೂಡಿ ಬಂದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಈ ವರ್ಷ ಆಡಿದ 21 ಟಿ20ಐ ಪಂದ್ಯಗಳಿಂದ 42.95ರ ಸರಾಸರಿ ಹಾಗೂ 193.46ರ ಸರಾಸರಿಯಲ್ಲಿ 859 ರನ್‌ಗಳನ್ನು ಬಾರಿಸಿದ್ದಾರೆ.

"ಇದು ಅಭಿಷೇಕ್ ಶರ್ಮಾ ಆಗಮನ ಮಾತ್ರವಲ್ಲ, ಭಾರತದ ಮುಂದಿನ ಪೀಳಿಗೆಯ ಎಕ್ಸ್-ಫ್ಯಾಕ್ಟರ್ ಆಟಗಾರನ ಆಗಮನ. 2025 ರಲ್ಲಿ ಭಾರತಕ್ಕೆ ಅತ್ಯುತ್ತಮ ಆಟಗಾರ ಯಾರೆಂದರೆ ಅದು ಅಭಿಷೇಕ್‌ ಶರ್ಮಾ ಆಗಿರಬೇಕು. ಅವರು ನಿಜವಾಗಿಯೂ ಚೆನ್ನಾಗಿ ಬ್ಯಾಟ್‌ ಮಾಡಿದ್ದಾರೆ. ಅವರು ಭಾರತದ ಪವರ್‌ಪ್ಲೇ ಬ್ಯಾಟಿಂಗ್ ಅನ್ನು ಮರುಕಲ್ಪಿಸಿಕೊಂಡಿದ್ದಾರೆ ಮತ್ತು ಅಸಾಧಾರಣರಾಗಿದ್ದಾರೆ. ನಾನು ಅವರನ್ನು ಒಡಿಐ ಸ್ವರೂಪದಲ್ಲಿಯೂ ನೋಡಲು ಇಷ್ಟಪಡುತ್ತೇನೆ. ಅವರು ಬಹುಶಃ ವರ್ಷದ ಪುರುಷರ ತಂಡದ ಆಟಗಾರನಾಗುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿಗೆ ಶುಭಮನ್‌ ಗಿಲ್‌ ಹೋಲಿಕೆ ಇಲ್ಲವೇ ಇಲ್ಲ ಎಂದ ಮಾಂಟಿ ಪನೇಸರ್‌!

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ಆರ್‌ ಅಶ್ವಿನ್‌ ಮೆಚ್ಚುಗೆ

ಭಾರತ ತಂಡದ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿನ ಪ್ರದರ್ಶನವನ್ನು ಅಶ್ವಿನ್‌ ಶ್ಲಾಘಿಸಿದ್ದಾರೆ. ಈ ವರ್ಷ ಇಬ್ಬರಿಗೂ ಕಠಿಣ ವರ್ಷವಾಗಿತ್ತು ಎಂದು ಸ್ಪಿನ್ನರ್‌ ಒಪ್ಪಿಕೊಂಡರು. ಆದಾಗ್ಯೂ, ಅವರಿಬ್ಬರೂ ಅದನ್ನು ತೊಂದರೆಗೊಳಿಸಲಿಲ್ಲ ಮತ್ತು 2027ರಲ್ಲಿ ಭಾರತ ತಂಡಕ್ಕಾಗಿ ವಿಶ್ವಕಪ್ ಗೆಲ್ಲಬಲ್ಲರು ಎಂದು ಎಲ್ಲರಿಗೂ ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

KAR vs TN: ಕೆ ಶ್ರೀಜಿತ್‌ ಬ್ಯಾಟಿಂಗ್‌ ಬಲದಿಂದ ತಮಿಳುನಾಡು ವಿರುದ್ಧದ ಗೆದ್ದು ಬೀಗಿದ ಕರ್ನಾಟಕ!

"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಮುಂದಿನ 50 ಓವರ್‌ಗಳ ವಿಶ್ವಕಪ್ ಗೆಲ್ಲುವ ಉತ್ಸಾಹವಿದೆ ಮತ್ತು ಅವರು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ನಮಗೆ ನೀಡುತ್ತಿರುವ ಪ್ರತಿಯೊಂದು ಪಂದ್ಯವನ್ನು ನಾವು ಆನಂದಿಸುವುದು ಮುಖ್ಯ. ಹಲವು ವಿಧಗಳಲ್ಲಿ ಅವರು ವರ್ಷಗಳನ್ನು ಮರು ವ್ಯಾಖ್ಯಾನಿಸಿದ್ದಾರೆ. ಅವರಿಬ್ಬರೂ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದ ಕಾರಣ ಈ ವರ್ಷ ಸುಲಭವಾಗಿರಲಿಲ್ಲ ಮತ್ತು ವಿಶ್ವಕಪ್‌ ಟೂರ್ನಿಗೆ ಅವರ ಅವಕಾಶಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಅವರು ಮರಳಿ ಬಂದು ನಿಜವಾಗಿಯೂ ಉತ್ತಮವಾಗಿ ಆಡಿದ್ದಾರೆ," ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.