ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ-ಪಾಕಿಸ್ತಾನ ತಂಡಗಳು ಟೆಸ್ಟ್‌ ಕ್ರಿಕೆಟ್‌ ಆಡಬೇಕೆಂದ ವಸೀಮ್‌ ಅಕ್ರಮ್‌!

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್‌ ಕ್ರಿಕೆಟ್‌ ನಡೆಯಬೇಕೆಂದು ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್‌ ವಸೀಮ್‌ ಅಕ್ರಮ್‌ ಆಗ್ರಹಿಸಿದ್ದಾರೆ. ಅಂದ ಹಾಗೆ ಭಾರತ ಹಾಗೂ ಪಾಕಿಸ್ತಾನ ನಡುವಣ ರಾಜಕೀಯ ಕಾರಣಗಳಿಂದ ಉಭಯ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತಿಲ್ಲ. ಇದರ ಬದಲು ಈ ದೇಶಗಳು ಏಷ್ಯಾ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತಿವೆ.

ಭಾರತ-ಪಾಕಿಸ್ತಾನ ತಂಡಗಳ ನಡುವಣ ಟೆಸ್ಟ್‌ ಕ್ರಿಕೆಟ್‌ ನಡೆಯಬೇಕೆಂದ ವಸೀಮ್‌ ಅಕ್ರಮ್‌.

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು (IND vs PAK) ಮುಂಬರುವ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಪಾಕ್‌ ದಿಗ್ಗಜ ವೇಗಿ ವಸೀಮ್‌ ಅಕ್ರಮ್‌ (Wasim Akram) ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಬೇಕೆಂದು ಮಾಜಿ ವೇಗಿ ಆಗ್ರಹಿಸಿದ್ದಾರೆ. ಅಂದ ಹಾಗೆ 2012ರಿಂದ ಇಲ್ಲಿಯವರೆಗೂ ಇಂಡೋ-ಪಾಕ್‌ ನಡುವೆ ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತಿಲ್ಲ ಹಾಗೂ ಕೇವಲ ಏಷ್ಯಾ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಕಾದಾಟ ನಡೆಸುತ್ತಿವೆ.

ಯೂನಿಸ್‌ ಖಾನ್‌ ಅವರ ನಾಯಕತ್ವದ ಪಾಕಿಸ್ತಾನ ತಂಡ, ಕೊನೆಯ ಬಾರಿ ಭಾರತಕ್ಕೆ ಪ್ರವಾಸ ಮಾಡಿತ್ತು. ಈ ಸರಣಿಯಲ್ಲಿ ಸೌರವ್‌ ಗಂಗೂಲಿ ಅವರು ಈ ಸರಣಿಯಲ್ಲಿ 500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದರು. ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ತಂಡ 1-0 ಅಂತರದಲ್ಲಿ ಗೆಲುವು ಪಡೆದಿತ್ತು. ಭಾರತ ಹಾಗೂ ಪಾಕ್‌ ನಡುವಣ ಟೆಸ್ಟ್‌ ಸರಣಿ ಅತ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಅಭಿಮಾನಿಗಳು ಈ ಸ್ಪರ್ಧೆಯನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.

ಟೆಲಿಕಾಮ್‌ ಏಷ್ಯಾ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿದ ವಸೀಮ್‌ ಅಕ್ರಮ್‌, "ಈ ಏಷ್ಯಾ ಕಪ್‌ ಟೂರ್ನಿಯನ್ನು ಇಡೀ ವಿಶ್ವದ ಅಭಿಮಾನಿಗಳು ಕಣ್ತುಂಬಿಸಿಕೊಳ್ಳಲಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪುನಾರಂಭಿಸಬೇಕೆಂದು ನಾನು ಬಯಸುತ್ತಿದ್ದೇನೆ. ಈ ಎರಡೂ ತಂಡಗಳು ಕಾದಾಟ ನಡೆಸಿ ದೀರ್ಘಾವಧಿಯಾಗಿದೆ. ಒಂದು ವೇಳೆ ಇದು ನಡೆದರೆ ಅಭಿಮಾನಿಗಳ ಪಾಲಿಗೆ ಐತಿಹಾಸಿಕ ದೃಶ್ಯವಾಗಲಿದೆ," ಎಂದು ಹೇಳಿದ್ದಾರೆ.

Hockey Asia Cup: ಅಭಿಮಾನಿಗಳಿಗೆ ಉಚಿತ ಪ್ರವೇಶ ಘೋಷಿಸಿದ ಹಾಕಿ ಇಂಡಿಯಾ

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಗಡಿಯಾಚೆಗಿನ ಉದ್ವಿಗ್ನತೆಯಿಂದಾಗಿ 2014 ರಿಂದ ಉಭಯ ತಂಡಹಳ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಆಡುತ್ತಿಲ್ಲ. 2025ರಲ್ಲಿ ಫೆಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ತನ್ನ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಹೆಚ್ಚಿಸಿತು, ಆಪರೇಷನ್ ಸಿಂಧೂರ್ ಮೂಲಕ ತ್ವರಿತ ಪ್ರತಿಕ್ರಿಯೆ ನೀಡಿತು.

ದೇಶಗಳ ನಡುವಿನ ಸಂಬಂಧಗಳು ಇನ್ನೂ ಹದಗೆಟ್ಟಿರುವುದರಿಂದ ಏಷ್ಯಾ ಕಪ್ ಟೂರ್ನಿಯ ಪಂದ್ಯವು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಮುರಿಯಲು ಬಯಸಿದ ಅಭಿಮಾನಿಗಳು ಮತ್ತು ತಜ್ಞರಿಂದ ಬಹಳಷ್ಟು ಟೀಕೆಗಳನ್ನು ಎದುರಿಸಿತು.

ಆದಾಗ್ಯೂ, ಭಾರತ ಸರ್ಕಾರವು ಅಧಿಕೃತ ಆದೇಶವೊಂದರಲ್ಲಿ ಬಹುಪಕ್ಷೀಯ ಕ್ರೀಡಾಕೂಟಗಳಲ್ಲಿ ಪಾಕಿಸ್ತಾನಿ ಆಟಗಾರರ ವಿರುದ್ಧ ಆಡುವುದನ್ನು ಎಲ್ಲಾ ವಿಭಾಗಗಳ ಭಾರತೀಯ ಆಟಗಾರರು ತಡೆಯುವುದಿಲ್ಲ ಎಂದು ಹೇಳಿದೆ.

Asia Cup 2025: ʻಜಸ್‌ಪ್ರೀತ್‌ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!

"ಭಾರತ ಅಥವಾ ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ, ನಾವು ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಅಭ್ಯಾಸಗಳು ಮತ್ತು ನಮ್ಮದೇ ಆದ ಕ್ರೀಡಾಪಟುಗಳ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಡುತ್ತೇವೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ವಿಶ್ವಾಸಾರ್ಹ ಸ್ಥಳವಾಗಿ ಭಾರತ ಹೊರಹೊಮ್ಮುವುದನ್ನು ಗಣನೆಗೆ ತೆಗೆದುಕೊಳ್ಳುವುದು ಸಹ ಪ್ರಸ್ತುತವಾಗಿದೆ," ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

"ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ಭಾರತವನ್ನು ಆದ್ಯತೆಯ ತಾಣವಾಗಿ ಇರಿಸಲು, ಕ್ರೀಡಾಪಟುಗಳು, ತಂಡದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಆಡಳಿತ ಸಂಸ್ಥೆಗಳ ಪದಾಧಿಕಾರಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಸಂಸ್ಥೆಗಳ ಪದಾಧಿಕಾರಿಗಳಿಗೆ ಅವರ ಅಧಿಕೃತ ಅಧಿಕಾರಾವಧಿಯ ಅವಧಿಗೆ ಆದ್ಯತೆಯ ಆಧಾರದ ಮೇಲೆ ಬಹು-ಪ್ರವೇಶ ವೀಸಾಗಳನ್ನು ನೀಡಲಾಗುವುದು, ಗರಿಷ್ಠ ಐದು ವರ್ಷಗಳ ಅವಧಿಗೆ ಒಳಪಟ್ಟಿರುತ್ತದೆ," ಎಂದು ಕ್ರೀಡಾ ಸಚಿವಾಲಯ ಹೇಳಿದೆ.