ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hockey Asia Cup: ಅಭಿಮಾನಿಗಳಿಗೆ ಉಚಿತ ಪ್ರವೇಶ ಘೋಷಿಸಿದ ಹಾಕಿ ಇಂಡಿಯಾ

ಗುಂಪು ಹಂತದ ಪಂದ್ಯಗಳ ನಂತರ ಸೆ. 3 ರಿಂದ 6ರವರೆಗೆ ಸೂಪರ್‌-4 ಹಂತದ ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ. ಆತಿಥೇಯ ಭಾರತ ತಂಡವು ಜಪಾನ್, ಚೀನಾ ಮತ್ತು ಕಜಕಿಸ್ತಾನ್ ಜತೆಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ.

ಹಾಕಿ ಏಷ್ಯಾಕಪ್: ಪ್ರೇಕ್ಷಕರಿಗೆ ಉಚಿತ ಪ್ರವೇಶ

Abhilash BC Abhilash BC Aug 26, 2025 2:23 PM

ರಾಜ್‌ಗಿರ್‌ (ಬಿಹಾರ): ಇದೇ ತಿಂಗಳು 29ರಿಂದ ಆರಂಭವಾಗುವ ಏಷ್ಯಾಕಪ್‌ ಹಾಕಿ(Hockey Asia Cup) ಟೂರ್ನಿಯನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೆ ಹಾಕಿ ಇಂಡಿಯಾ(hockey india) ಉಚಿತ ಟಿಕೆಟ್‌ಗಳನ್ನು ಘೋಷಿಸಿದೆ. ಅಭಿಮಾನಿಗಳು ಉಚಿತ ಟಿಕೆಟ್‌ಗಳಿಗಾಗಿ www.ticketgenie.in ಅಥವಾ ಹಾಕಿ ಇಂಡಿಯಾ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿದ ನಂತರ, ಅವರಿಗೆ ವರ್ಚುವಲ್ ಟಿಕೆಟ್ ಸಿಗುತ್ತದೆ.

"ಈ ವ್ಯವಸ್ಥೆಯನ್ನು ಸುಗಮ ಮತ್ತು ತೊಂದರೆ-ಮುಕ್ತ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಟಿಕೆಟ್‌ಗಾಗಿ ಕೌಂಟರ್‌ನಲ್ಲಿ ಸಾಲು ನಿಲ್ಲುವ ಮತ್ತು ನೂಕು ನುಗ್ಗಲು ತಡೆಯುವಲ್ಲಿ ಈ ವ್ಯವಸ್ಥೆ ಉತ್ತಮವಾಗಿದೆ" ಎಂದು ಹಾಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಹೀರೋ ಪುರುಷರ ಏಷ್ಯಾ ಕಪ್ ಎಂಟು ಅಗ್ರ ಏಷ್ಯಾದ ರಾಷ್ಟ್ರಗಳನ್ನು ಒಳಗೊಂಡಿದ್ದು, ಅವುಗಳೆಂದರೆ ಭಾರತ, ಜಪಾನ್, ಚೀನಾ, ಕಜಕಿಸ್ತಾನ್, ಮಲೇಷ್ಯಾ, ಕೊರಿಯಾ, ಬಾಂಗ್ಲಾದೇಶ ಮತ್ತು ಚೈನೀಸ್ ತೈಪೆ. ಪಂದ್ಯಾವಳಿಯಲ್ಲಿ ಗೆದ್ದ ತಂಡ 2026ರಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿದೆ.

ಗುಂಪು ಹಂತದ ಪಂದ್ಯಗಳ ನಂತರ ಸೆ. 3 ರಿಂದ 6ರವರೆಗೆ ಸೂಪರ್‌-4 ಹಂತದ ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ. ಆತಿಥೇಯ ಭಾರತ ತಂಡವು ಜಪಾನ್, ಚೀನಾ ಮತ್ತು ಕಜಕಿಸ್ತಾನ್ ಜತೆಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ಆಗಸ್ಟ್ 29 ರಂದು ಚೀನಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಭಾರತ ತಂಡ

ಗೋಲ್‌ಕೀಪರ್ಸ್: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ.

ಡಿಫೆಂಡರ್ಸ್: ಸುಮೀತ್‌, ಜರ್ಮನ್‌ಪ್ರೀತ್ ಸಿಂಗ್‌, ಸಂಜಯ್‌, ಹರ್ಮನ್‌ಪ್ರೀತ್‌ ಸಿಂಗ್ (ನಾಯಕ), ಅಮಿತ್ ರೋಹಿದಾಸ್ , ಜುಗರಾಜ್‌ ಸಿಂಗ್.

ಮಿಡ್‌ಫೀಲ್ಡರ್ಸ್: ರಾಜಿಂದರ್ ಸಿಂಗ್, ರಾಜ್‌ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಶಿಲಾನಂದ್ ಲಾಕ್ರ.

ಮೀಸಲು ಆಟಗಾರರು: ನೀಲಮ್ ಸಂಜೀಪ್ ಕ್ಸೆಸ್, ಸಿಲ್ವಂ ಕಾರ್ತಿ.

ಇದನ್ನೂ ಓದಿ Women’s Hockey Asia Cup 2025: ಮಹಿಳಾ ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ