ನವದೆಹಲಿ: ಪ್ರಸ್ತುತ ಸಾಗುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯು ನಿರ್ಣಾಯಕ ಘಟ್ಟವನ್ನು ತಲುಪಿದೆ. ಎಲ್ಲಾ ತಂಡಗಳು ಬಹುತೇಕ 10 ಪಂದ್ಯಗಳನ್ನು ಮುಗಿಸಿವೆ. ಇದರ ನಡುವೆ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಅಲಂಕರಿಸಲು ಪ್ರಯತ್ನಿಸುತ್ತಿವೆ. ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ವಸೀಮ್ ಜಾಫರ್ (Wasim Jaffer) ಅವರು ದೊಡ್ಡ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಬಲ್ಲ ಎರಡು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ, ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೈಬಿಡುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವಸೀಮ್ ಜಾಫರ್, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಆಯ್ಕೆ ಮಾಡಿದ್ದಾರೆ. 6 ಗೆಲುವುಗಳು ಮತ್ತು 13 ಅಂಕಗಳೊಂದಿಗೆ ಪಂಜಾಬ್ ಕಿಂಗ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ ಕಾರಣ ಶ್ರೇಯಸ್ ಅಯ್ಯರ್ ಪಡೆ ಅಗ್ರಸ್ಥಾನ ಕಳೆದುಕೊಂಡಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಈಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 7 ಗೆಲುವುಗಳು ಹಾಗೂ 14 ಅಂಕಗಳನ್ನು ಹೊಂದಿದೆ.
IPL 2026: ಯಾವುದೇ ವೇಗಿಯಿಂದ ಸಾಧ್ಯವಾಗದ ದಾಖಲೆ ಬರೆದ ಭುವನೇಶ್ವರ್ ಕುಮಾರ್!
“ಪಂಜಾಬ್ ಕಿಂಗ್ಸ್ ಇನ್ನೂ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಮುಗಿಸುವ ಅವಕಾಶವನ್ನು ಹೊಂದಿದೆ. ಅದಕ್ಕೆ ಬೇಕಾದ ಎಲ್ಲಾ ಸಾಮರ್ಥ್ಯ ಈ ತಂಡದಲ್ಲಿದೆ. ಈಗ ಕೆಲವು ಸಂಗತಿಗಳು ಸರಿಯಾಗಿ ನಡೆಯುತ್ತಿಲ್ಲ ಅಷ್ಟೇ. ಕ್ಯಾಚಿಂಗ್ ಸಮಸ್ಯೆಯನ್ನು ಅವರು ಖಂಡಿತವಾಗಿ ಸರಿಪಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಕ್ರಿಕೆಟ್ ಆಡದವರು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ — ಬೆಳಕಿನ ಅಡಿಯಲ್ಲಿ ಬಿಳಿ ಚೆಂಡನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಅವರು ಯಾವುದೇ ಪ್ರಯತ್ನವನ್ನು ಬಾಕಿ ಬಿಡುವುದಿಲ್ಲ ಎಂದು ನನಗೆ ನಂಬಿಕೆ ಇದೆ. ಮೊದಲ ಎರಡು ಸ್ಥಾನಗಳಲ್ಲಿ ಮುಗಿಸಲು ಅವರಿಗೆ ಇನ್ನೂ ಅವಕಾಶ ಇದೆ,” ಎಂದು ವಸೀಮ್‌ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
RCB vs LSG: 49 ಎಸೆತಗಳಲ್ಲಿ ಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಮಿಚೆಲ್ ಮಾರ್ಷ್!
“ಫಿಲ್ ಸಾಲ್ಟ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಭ್ಯವಿಲ್ಲದಿರುವುದು ಆತಂಕಕಾರಿ ಸಂಗತಿ. ತಂಡ ಬಹಳಷ್ಟು ಮಟ್ಟಿಗೆ ವಿರಾಟ್ ಕೊಹ್ಲಿ ಮೇಲೆಯೇ ಅವಲಂಬಿತವಾಗಿದೆ. ಅವರು ಬೇಗ ಔಟಾದರೆ ತಂಡ ಹಿನ್ನಡೆಯನ್ನು ಅನುಭವಿಸುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಆರ್‌ಸಿಬಿಗೂ ಕೆಲವು ಚಿಂತನೆಗಳಿವೆ. ಫಿಲ್ ಸಾಲ್ಟ್ ಸ್ಫೋಟಕ ಆರಂಭಿಕ ಬ್ಯಾಟರ್ ಆಗಿದ್ದು, ಅವರು ಕೆಲವು ಪಂದ್ಯಗಳಿಗೆ ಹೊರಗುಳಿದಿದ್ದಾರೆ. ಒಂದು ಹಂತದಲ್ಲಿ ಆರ್‌ಸಿಬಿ ಅತ್ಯಂತ ಬಲಿಷ್ಠ ತಂಡದಂತೆ ಕಾಣಿಸುತ್ತಿತ್ತು. ಆದರೆ ಇತ್ತೀಚಿನ ಕೆಲವು ಸೋಲುಗಳ ನಂತರ ಅವರಿಗೆ ಸಹ ಆತಂಕ ಉಂಟಾಗಿದೆ. ಆದ್ದರಿಂದ, ಅಂಕಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿ ಮುಗಿಸುವ ಉತ್ತಮ ಅವಕಾಶ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳಿಗೆ ಇದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಭವಿಷ್ಯ ನುಡಿದಿದ್ದಾರೆ.