IPL 2026: ಯಾವುದೇ ವೇಗಿಯಿಂದ ಸಾಧ್ಯವಾಗದ ದಾಖಲೆ ಬರೆದ ಭುವನೇಶ್ವರ್ ಕುಮಾರ್!
ಲಖನೌ ಸೂಪರ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ನೂತನ ಮೈಲಗಲ್ಲು ತಲುಪಿದ್ದಾರೆ. ಐಪಿಎಲ್ ಇತಿಹಾಸದಲ್ಲಿಯೇ ಯಾವುದೇ ವೇಗಿಯಿಂದ ಸಾಧ್ಯವಾಗದ ದಾಖಲೆಯನ್ನು ಬರೆದಿದ್ದಾರೆ.
200 ಐಪಿಎಲ್ ಪಂದ್ಯಗಳನ್ನು ಆಡಿದ ಭುವನೇಶ್ವರ್ ಕುಮಾರ್. -
ಲಖನೌ: ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ (RCB vs LSG) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ (Bhvneshwar Kumar) ನೂತನ ಮೈಲುಗಲ್ಲು ತಲುಪಿದ್ದಾರೆ. ಅಂದರೆ ಐಪಿಎಲ್ ಇತಿಹಾಸದಲ್ಲಿಯೇ ಯಾವುದೇ ವೇಗದ ಬೌಲರ್‌ನಿಂದ ಸಾಧ್ಯವಾಗದ ದಾಖಲೆಯನ್ನು ಆರ್‌ಸಿಬಿ ವೇಗಿ ಬರೆದಿದ್ದಾರೆ. ಭುವಿಯ ಈ ದಾಖಲೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ.
ಭುವನೇಶ್ವರ್ ಕುಮಾರ್ ಅವರು ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವಣ ಕಣಕ್ಕೆಇಳಿಯುವ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 200ನೇ ಪಂದ್ಯವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಎರಡನೇ ವೇಗಿ ಎಂಬ ದಾಖಲೆ ಕೂಡ ಭುವಿ ಹೆಸರಿನಲ್ಲಿದೆ. ಅವರು ಇಲ್ಲಿಯವರೆಗೂ 215 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2011ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು ಹಾಗೂ 2013ರ ವರೆಗೂ ಅವರು ಇದೇ ತಂಡದ ಪರ ಆಡಿದ್ದರು. ತದನಂತರ 2014 ರಿಂದ 2024ರ ವರೆಗೆ ಒಂದು ದಶಕದ ಕಾಲ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಆದರೆ, 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡಕ್ಕೆ ಬಂದಿದ್ದರು.
RCB vs LSG: ಟಾಸ್ ಗೆದ್ದು ಚೇಸಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಇತಿಹಾಸ ನಿರ್ಮಿಸಿದ ಭುವನೇಶ್ವರ್ ಕುಮಾರ್
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ 200 ಪಂದ್ಯಗಳನ್ನು ಆಡಿದ ಮೊದಲ ವಿಶೇಷ ವೇಗದ ಬೌಲರ್ ಅಥವಾ ವೇಗದ ಬೌಲಿಂಗ್ ಆಲ್‌ರೌಂಡರ್ ಎಂಬ ದಾಖಲೆಯನ್ನು ಭುವನೇಶ್ವರ್ ಕುಮಾರ್ ಬರೆದಿದ್ದಾರೆ. ಒಟ್ಟಾರೆ 200 ಐಪಿಎಲ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಆರ್‌ಸಿಬಿ ವೇಗಿ 12ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸಾಲಿನಲ್ಲಿರುವ ಎಲ್ಲಾ ಆಟಗಾರರು ಭಾರತದ ಆಟಗಾರರಾಗಿದ್ದಾರೆ.
ಸ್ಪೆಷಲಿಸ್ಟ್ ಫಾಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬುಮ್ರಾ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಅಗ್ರ ಸ್ಥಾನದಲ್ಲಿದ್ದಾರೆ. ಮಧ್ಯಮ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ವಿಭಾಗಕ್ಕೆ ಬಂದಾಗ ಮುಂಬೈ ಇಂಡಿಯನ್ಸ್ ಮಾಜಿ ಆಲ್‌ರೌಂಡರ್ ಕೈರೊನ್ ಫೊಲಾರ್ಡ್ ಎರಡನೇ ಸ್ಥಾನದಲ್ಲಿದ್ದಾರೆ.
2️⃣0️⃣0️⃣* #TATAIPL games. 🥹
— Royal Challengers Bengaluru (@RCBTweets) May 7, 2026
2️⃣1️⃣5️⃣* #TATAIPL wickets. 🤌
No pacer has ever breached the 200-game and wickets mark in the league before.... Bhuvi just did tonight. 🤌
We're glad to witness your magic in Red, Blue, and Gold, 𝐒𝐖𝐈𝐍𝐆 𝐊𝐈𝐍𝐆. ❤️ pic.twitter.com/gcAfALeuck
ಐಪಿಎಲ್ ಇತಿಹಾಸದಲ್ಲಿ ವಿಶೇಷ ವೇಗದ ಬೌಲರ್‌ಗಳು / ಪೇಸ್-ಬೌಲಿಂಗ್ ಆಲ್‌ರೌಂಡರ್‌ಗಳು ಆಡಿರುವ ಅತ್ಯಧಿಕ ಪಂದ್ಯಗಳು
ಭುವನೇಶ್ವರ್ ಕುಮಾರ್: 200 ಪಂದ್ಯಗಳು- 215 ವಿಕೆಟ್‌ಗಳು
ಡ್ವೇನ್ ಬ್ರಾವೊ: 161 ಪಂದ್ಯಗಳು-183 ವಿಕೆಟ್‌ಗಳು
ಹಾರ್ದಿಕ್ ಪಾಂಡ್ಯ: 160 ಪಂದ್ಯಗಳು- 82 ವಿಕೆಟ್‌ಗಳು
ಜಸ್‌ಪ್ರೀತ್ ಬುಮ್ರಾ: 155 ಪಂದ್ಯಗಳು- 186 ವಿಕೆಟ್‌ಗಳು
ಉಮೇಶ್ ಯಾದವ್: 148 ಪಂದ್ಯಗಳು-144 ವಿಕೆಟ್‌ಗಳು
ಶೇನ್ ವಾಟ್ಸನ್: 145 ಪಂದ್ಯಗಳು-92 ವಿಕೆಟ್‌ಗಳು
ಸಂದೀಪ್ ಶರ್ಮಾ: 142 ಪಂದ್ಯಗಳು- 151 ವಿಕೆಟ್‌ಗಳು
ಆಂಡ್ರೆ ರಸೆಲ್: 140 ಪಂದ್ಯಗಳು-123 ವಿಕೆಟ್‌ಗಳು
ಮೊಹಮ್ಮದ್ ಶಮಿ: 129 ಪಂದ್ಯಗಳು- 141 ವಿಕೆಟ್‌ಗಳು
ಟ್ರೆಂಟ್ ಬೌಲ್ಟ್: 125 ಪಂದ್ಯಗಳು- 145 ವಿಕೆಟ್‌ಗಳು