RCB vs LSG: 49 ಎಸೆತಗಳಲ್ಲಿ ಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಮಿಚೆಲ್ ಮಾರ್ಷ್!
RCB vs LSG: ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್ ಭರ್ಜರಿ ಶತಕ ಬಾರಿಸಿದ್ದಾರೆ. ಆ ಮೂಲಕ ಎಲ್‌ಎಸ್‌ಜಿ ತಂಡದ ಪರ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಶತಕ ಬಾರಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಮಿಚೆಲ್ ಮಾರ್ಷ್. -
ಲಖನೌ: ಈಗಾಗಲೇ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಲಖನೌ ಸೂಪರ್ ಜಯಂಟ್ಸ್ (LSG) ತಂಡಕ್ಕೆ ಮಿಚೆಲ್ ಮಾರ್ಷ್ (Mitchell Marsh) ಅವರ ಶತಕ ಸ್ವಲ್ಪ ಸಮಾಧಾನ ತಂದಿದೆ. ಮೇ 7 ರಂದು ಗುರುವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರು 49 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಎಲ್‌ಎಸ್‌ಜಿ ತಂಡದ ಪರ ತಮ್ಮ ಮೊದಲ ಶತಕವನ್ನು ಬಾರಿಸಿದರು. ಆ ಮೂಲಕ ಲಖನೌ ಪರ ವೇಗದ ಶತಕವನ್ನು ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಲಖನೌ ಸೂಪರ್ ಜಯಂಟ್ಸ್ ಪರ ಇನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್, ಅಬ್ಬರಿಸಿದರು. ಅವರು ಆಡಿದ ಮೊದಲ ಎಸೆತದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 49 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಲಖನೌ ಸೂಪರ್ ಜಯಂಟ್ಸ್ ಪರ ವೇಗದ ಶತಕ ಸಿಡಿಸಿದರು. ಹಾಗೂ ಕೆಎಲ್ ರಾಹುಲ್ ಅವರ ದಾಖಲೆಯನ್ನು ಮುರಿದರು.
IPL 2026: ಯಾವುದೇ ವೇಗಿಯಿಂದ ಸಾಧ್ಯವಾಗದ ದಾಖಲೆ ಬರೆದ ಭುವನೇಶ್ವರ್ ಕುಮಾರ್!
ಕೆಎಲ್ ರಾಹುಲ್ ದಾಖಲೆ ಮುರಿದ ಮಾರ್ಷ್
ಕೆಎಲ್ ರಾಹುಲ್ 2022ರಲ್ಲಿ ಮುಂಬೈ ಇಂಡಿಯನ್ಸ್ ಎದುರು 56 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಇದೀಗ ಮಿಚೆಲ್ ಮಾರ್ಷ್ ಎಲ್‌ಎಸ್‌ಜಿ ಪರ ಶತಕವನ್ನು ಪೂರ್ಣಗೊಳಿಸಲು 7ಎಸೆತಗಳನ್ನು ಕಡಿಮೆ ತೆಗೆದುಕೊಂಡಿದ್ದಾರೆ. ಆದರೆ, ಎಲ್‌ಎಸ್‌ಜಿ ಈಗಾಗಲೇ ಪ್ಲೇಆಫ್ಸ್ ರೇಸ್‌ನಿಂದ ಬಹುತೇಕ ಹೊರಬಂದಿದೆ. ಇಂಥಾ ಸಮಯದಲ್ಲಿ ಮಿಚೆಲ್ ಮಾರ್ಷ್ ಶತಕ ಬಾರಿಸಿರುವುದು ಲಖನೌ ತಂಡಕ್ಕೆ ಯಾವುದೇ ನೆರವು ನೀಡುವುದಿಲ್ಲ ಎಂಬುದು ಅವರ ತಂಡದ ಅಭಿಮಾನಿಗಳ ಲೆಕ್ಕಾಚಾರ. ಸದ್ಯ ಇಲ್ಲಿಯವರೆಗೂ ಆಡಿದ ಆಡಿದ 9 ಪಂದ್ಯಗಳಲ್ಲಿ ಎಲ್‌ಎಸ್‌ಜಿ ಕೇವಲ ಎರಡು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
Raise that bat 🙌
— IndianPremierLeague (@IPL) May 7, 2026
And take a bow, Mitchell Marsh 🙇
📸 📸 A 2️⃣nd #TATAIPL ton to savour ✨
Updates ▶️ https://t.co/W0eDq9aWb7#KhelBindaas | #LSGvRCB | @LucknowIPL pic.twitter.com/jsWQnrkglQ
111 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಮಾರ್ಷ್
ಮಳೆಯ ಆಡಚಣೆಯ ಹೊರತಾಗಿಯೂ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ ಮಿಚೆಲ್ ಮಾರ್ಷ್, ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 56 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 111 ರನ್‌ಗಳನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಲಖನೌ ತಂಡದ ಮೊತ್ತವನ್ನು 160ರ ಗಡಿ ದಾಟಿಸಿ ಪೆವಿಲಿಯನ್‌ಗೆ ಮರಳಿದರು. ಅವರು 198.21ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ವಿಶೇಷ.
367 ರನ್ ಕಲೆ ಹಾಕಿದ ಓಪನರ್
ಲಖನೌ ಸೂಪರ್ ಜಯಂಟ್ಸ್ ತಂಡ ಸದ್ಯ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದರೂ ಮಿಚೆಲ್ ಮಾರ್ಷ್ ಅವರು ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 10 ಪಂದ್ಯಗಳಿಂದ 36.70ರ ಸರಾಸರಿ ಹಾಗೂ 152.92ರ ಸ್ಟ್ರೈಕ್ ರೇಟ್‌ನಲ್ಲಿ 367 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಹಲವು ಅರ್ಧಶತಕಗಳನ್ನು ಬಾರಿಸಿದ್ದಾರೆ.