ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻದಿನ ನಿತ್ಯ 10 ಕಿಮೀ ಓಡಬೇಕುʼ: ರೋಹಿತ್‌ ಶರ್ಮಾಗೆ ಯೋಗರಾಜ್‌ ಸಿಂಗ್‌ ಫಿಟ್ನೆಸ್‌ ಪಾಠ!

ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು ಹಾಗೂ ಇದೀಗ ಅವರು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಿದ್ದಾರೆ. ಅಕ್ಟೋಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ರೋಹಿತ್‌ ಶರ್ಮಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದಾರೆ. ಇದರ ನಡುವೆ ರೋಹಿತ್‌ ಶರ್ಮಾಗೆ ಯೋಗರಾಜ್‌ ಸಿಂಗ್‌ ಫಿಟ್ನೆಸ್‌ ಪಾಠ ಮಾಡಿದ್ದಾರೆ.

ರೋಹಿತ್‌ ಶರ್ಮಾಗೆ ಯುವರಾಜ್‌ ಸಿಂಗ್‌ ತಂದೆಯಿಂದ ಫಿಟ್ನೆಸ್‌ ಪಾಠ!

‌ರೋಹಿತ್‌ ಶರ್ಮಾಗೆ ಯೋಗರಾಜ್‌ ಸಿಂಗ್ ಫಿಟ್ನೆಸ್‌ ಪಾಠ.

Profile Ramesh Kote Aug 17, 2025 12:30 PM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್‌ ತಿಂಗಳಲ್ಲಿ ಏಕದಿನ ಸರಣಿಯನ್ನು(AUS vs IND) ಆಡಲು ಎದುರು ನೋಡುತ್ತಿರುವ ಭಾರತ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾಗೆ (Rohit Sharma) ದಿಗ್ಗಜ ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್‌ ಸಿಂಗ್‌ (Yograj Singh) ಫಿಟ್ನೆಸ್‌ ಪಾಠ ಮಾಡಿದ್ದಾರೆ. ರೋಹಿತ್‌ ಶರ್ಮಾ ಅವರು ಮುಂದಿನ ಐದು ವರ್ಷಗಳ ಕಾಲ ಕ್ರಿಕೆಟ್‌ ಆಡಬೇಕೆಂದು ಟೀಮ್‌ ಇಂಡಿಯಾ ಮಾಜಿ ವೇಗಿ ಬಯಸಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಬಳಿಕ ರೋಹಿತ್‌ ಶರ್ಮಾ ಇನ್ನೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್‌ ಆದ ಬಳಿಕ ರೋಹಿತ್‌ ಶರ್ಮಾ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಾದ ಬಳಿಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದರು. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯವರೆಗೂ 50 ಓವರ್‌ಗಳ ಸ್ವರೂಪದಲ್ಲಿ ಮುಂದುವರಿಯಲು ರೋಹಿತ್‌ ಶರ್ಮಾ ಬಯಸಿದ್ದಾರೆ. ಅಂದ ಹಾಗೆ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಪ್ರಕ್ರಿಯೆ ಕೂಡ ಇದೇ ರೀತಿ ಇದೆ.

ಒಡಿಐ ಕ್ರಿಕೆಟ್‌ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ರೋಹಿತ್‌ ಶರ್ಮಾ!

ಇದೀಗ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡಲು ಎದುರು ನೋಡುತ್ತಿರುವ ರೋಹಿತ್‌ ಶರ್ಮಾಗೆ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌,ಫಿಟ್‌ನೆಸ್‌ ಪಾಠ ಮಾಡಿದ್ದಾರೆ. ಮುಂದಿನ 5 ವರ್ಷಗಳ ಕಾಲ ರೋಹಿತ್‌ ಶರ್ಮಾ ಕ್ರಿಕೆಟ್‌ ಆಡಬೇಕು, ಹಾಗಾಗಿ ಅವರು ದಿನನಿತ್ಯ 10 ಕಿ.ಮೀ ಓಡಬೇಕೆಂದು ಸಲಹೆ ನೀಡಿದ್ದಾರೆ.

ನ್ಯೂಸ್‌18 ಜೊತೆ ಮಾತನಾಡಿದ ಯೋಗರಾಜ್‌ ಸಿಂಗ್‌, "ಇಷ್ಟು ಜನರು ಯಾರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೋ, ಆ ವ್ಯಕ್ತಿ ರೋಹಿತ್ ಶರ್ಮಾ - ಆ ದಿನ ನಾನು ರೋಹಿತ್ ನನ್ನ ಹುಡುಗ, ಆ ಮನುಷ್ಯ ನನ್ನ ಹುಡಗ ಎಂದು ಹೇಳಿದ್ದೆ" ಎಂದು ತಿಳಿಸಿದ್ದಾರೆ.

ಭಾರತ ಏಕದಿನ ತಂಡಕ್ಕೆ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾರ ಮಹತ್ವವನ್ನು ತಿಳಿಸಿದ ಸುರೇಶ್‌ ರೈನಾ!

"ಅವರು ಬ್ಯಾಟಿಂಗ್ ಮಾಡಿದ ರೀತಿ, ಒಂದು ಕಡೆ ಅವರ ಬ್ಯಾಟಿಂಗ್ ಮತ್ತು ಇನ್ನೊಂದು ಕಡೆ ತಂಡದ ಉಳಿದವರ ಬ್ಯಾಟಿಂಗ್. ಒಂದು ಕಡೆ ಅವರ ಇನಿಂಗ್ಸ್ ಮತ್ತು ಇನ್ನೊಂದು ಕಡೆ ವಿಶ್ವದ ಉಳಿದ ಭಾಗ. ಅದು ಅವರ ಕ್ಲಾಸ್. ರೋಹಿತ್ ನಮಗೆ ನೀವು ಇನ್ನೂ ಐದು ವರ್ಷಗಳ ಕಾಲ ಬೇಕು ಎಂದು ಹೇಳಬಹುದು, ಆದ್ದರಿಂದ ದಯವಿಟ್ಟು ನಿಮ್ಮ ದೇಶಕ್ಕಾಗಿ ಹೆಚ್ಚಿನದನ್ನು ಮಾಡಿ, ನಿಮ್ಮ ಫಿಟ್ನೆಸ್ ಮತ್ತು ಎಲ್ಲದರಲ್ಲೂ ಕೆಲಸ ಮಾಡಿ. ಅವರ ಮೇಲೆ ನಾಲ್ಕು ಜನರನ್ನು ಕೂರಿಸಿ, ಪ್ರತಿದಿನ ಬೆಳಿಗ್ಗೆ 10 ಕಿಲೋಮೀಟರ್ ಓಡುವಂತೆ ಮಾಡಿ. ಅವರು ಬಯಸಿದರೆ, 45 ವರ್ಷ ವಯಸ್ಸಿನವರೆಗೆ ಆಡಲು ಅವನ ಆಟದಲ್ಲಿ ಕ್ಲಾಸ್‌ ಇದೆ," ಎಂದು ಯೋಗರಾಜ್‌ ಸಿಂಗ್‌ ಶ್ಲಾಘಿಸಿದ್ದಾರೆ.

IND vs ENG: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ ಎಂದ ಕೆಎಲ್‌ ರಾಹುಲ್!

ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ಕೊಹ್ಲಿ

ರೋಹಿತ್ ಶರ್ಮಾ ಜೊತೆಗೆ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮರಳಲಿದ್ದಾರೆ. ಭಾರತದ ಮಾಜಿ ನಾಯಕ ಟೆಸ್ಟ್ ಮತ್ತು ಟಿ20ಐಗಳನ್ನು ತ್ಯಜಿಸಿ ಈಗ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ವಿರಾಟ್ ಮತ್ತು ರೋಹಿತ್ 2027ರ ಏಕದಿನ ವಿಶ್ವಕಪ್ ತಂಡದ ಭಾಗವಾಗುವ ಸಾಧ್ಯತೆಯಿದೆ.