ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ: ಯುಜ್ವೇಂದ್ರ ಚಹಲ್‌ ಜೊತೆ ಕಾಣಿಸಿಕೊಂಡ ಸುಂದರಿ ಯಾರು? ಇಲ್ಲಿದೆ ಮಾಹಿತಿ...

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಯುಜ್ವೇಂದ್ರ ಚಹಲ್ ಜೊತೆ ಸುಂದರಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಇವರು ಬೇರೆ ಯಾರೂ ಅಲ್ಲ ಪ್ರಸಿದ್ಧ ಆರ್ ಜೆ ಮಹ್ವಾಶ್. ಇದಕ್ಕೂ ಮುಂಚೆಯೇ, ಮಹ್ವಾಶ್ ಮತ್ತು ಚಹಲ್ ಒಂದು ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಫೈನಲ್‌ ಹಣಾಹಣಿಯನ್ನು ಕಣ್ತುಂಬಿಸಿಕೊಳ್ಳಲು ಇಬ್ಬರೂ ಜೊತೆಯಾಗಿ ಅಂಗಣಕ್ಕೆ ಬಂದಿದ್ದಾರೆ.

IND vs NZ: ಯುಜ್ವೇಂದ್ರ ಚಹಲ್‌ ಜತೆ ಕಾಣಿಸಿಕೊಂಡ ಸುಂದರಿ ಯಾರು?

ಯುಜ್ವೇಂದ್ರ ಚಹಲ್‌-ಮಹ್ವಾಶ್‌

Profile Ramesh Kote Mar 9, 2025 8:39 PM

ದುಬೈ: ಕಳೆದ ತಿಂಗಳು ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದಿದ್ದ ಕ್ರಿಕೆಟಿಗ ಯುಜ್ವೇಂದ್ರ ಚಹಲ್ (Yuzvendra Chahal) ಇದೀಗ ತಮ್ಮ ಹೊಸ ಸಂಬಂಧದ ಹುಡುಕಾಟದಲ್ಲಿರಬಹುದೆಂದು ಹೇಳಲಾಗುತ್ತಿದೆ. ಅದರಂತೆ ಅದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯದ ಸಮಯದಲ್ಲಿ ಯುಜ್ವೇಂದ್ರ ಚಹಲ್ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವನೊಂದಿಗೆ ಒಬ್ಬ ಸುಂದರಿ ಯುವತಿ ಕೂಡ ಕಾಣಿಸಿಕೊಂಡಿದ್ದಾಳೆ. ಆರಂಭದಲ್ಲಿ ಈ ನಿಗೂಢ ಹುಡುಗಿಯ ಗುರುತು ಪತ್ತೆಯಾಗದಿದ್ದರೂ, ಸಾಮಾಜಿಕ ಮಾಧ್ಯಮದ ಬಳಕೆದಾರರು ಆಕೆ ಯಾರೆಂದು ಪತ್ತೆ ಮಾಡಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿಲ್ಲ.

ಅಂದಹಾಗೆ ಚಹಲ್‌ ಜೊತೆ ಕಾಣಿಸಿಕೊಂಡ ಯುವತಿ ಬೇರೆ ಯಾರೂ ಅಲ್ಲ ಆರ್ ಜೆ ಮಹ್ವಾಶ್. ಈ ಹಿಂದೆ ಯುಜ್ವೇಂದ್ರ ಚಹಲ್ ಅವರ ಹೆಸರು ಆರ್‌ಜೆ ಮಹ್ವಾಶ್ ಜೊತೆ ತಳುಕು ಹಾಕಿಕೊಂಡಿತ್ತು. ಧನಶ್ರೀ ವರ್ಮಾ ಅವರಿಂದ ಚಹಲ್ ವಿಚ್ಛೇದನ ಪಡೆದ ಸುದ್ದಿ ಹರಡಿದ್ದ ವೇಳೆ, ಪಾರ್ಟಿಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಆದರೆ, ಆ ಸಮಯದಲ್ಲಿ ಮಹ್ವಾಶ್, ಚಹಲ್ ತನ್ನ ಒಳ್ಳೆಯ ಸ್ನೇಹಿತ ಮಾತ್ರ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ, ಮತ್ತೊಮ್ಮೆ ಚಹಲ್ ಅವರ ಹೊಸ ಸಂಬಂಧದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

IND vs NZ: 37 ರನ್‌ ಗಳಿಸಿ ಕೇನ್‌ ವಿಲಿಯಮ್ಸನ್‌ ದಾಖಲೆ ಮುರಿದ ರಚಿನ್‌ ರವೀಂದ್ರ!

ಚಹಲ್‌ ಜೊತೆ ಕಾಣಿಸಿಕೊಂಡಿದ್ದ ಸುಂದರಿ ಯಾರು?

ಆರ್‌ಜೆ ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ. ರೇಡಿಯೋ ಜಾಕಿಯಾಗಿರುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದಾರೆ. ಅವರು ತಮ್ಮ ಉತ್ತಮ ಧ್ವನಿ ಮತ್ತು ಮನರಂಜನಾ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಹಿಂಬಾಲಕರನ್ನು ಹೊಂದಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. ಮಹ್ವಾಶ್‌ಗೆ ಬಿಗ್ ಬಾಸ್ ಮತ್ತು ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಕೆಲಸ ಮಾಡುವ ಆಫರ್ ಸಿಕ್ಕಿತು ಎಂದು ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅವರು ಕೆಲಸ ಮಾಡಲು ಸಾಧ್ಯವಾಗಲಿಲ್ಲ.



ಕ್ರಿಸ್‌ಮಸ್ ಸಂದರ್ಭದ ಔತಣಕೂಟದಲ್ಲಿ ಯುಜ್ವೇಂದ್ರ ಚಹಲ್‌ ಹಾಗೂ ಆರ್‌ಜೆ ಮಹ್ವಾಶ್ ಕಾಣಿಸಿಕೊಂಡಿದ್ದರು. ಇದಾದ ನಂತರ ಅವರು ಮತ್ತೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರು ಡೇಟಿಂಗ್ ಮಾಡುತ್ತಿರಬಹುದೆಂಬ ಸುದ್ದಿ ಹೊರಬಿದ್ದಿತ್ತು. ಇದರ ಹೊರತಾಗಿಯೂ ಮಹ್ವಾಶ್‌ ಇದನ್ನು ತಳ್ಳಿ ಹಾಕಿದ್ದರು.



251 ರನ್‌ ಕಲೆ ಹಾಕಿದ್ದ ಕಿವೀಸ್‌

ಇನ್ನೂ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ಬಗ್ಗೆ ಹೇಳುವುದಾರೆ, ಟಾಸ್‌ ಗೆದ್ದಿದ್ದ ನ್ಯೂಜಿಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ನಿರ್ಧಾರವನ್ನು ತೆಗೆದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಕಿವೀಸ್‌, ತನ್ನ ಸ್ಟಾರ್‌ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಡ್ಯಾರಿಲ್‌ ಮಿಚೆಲ್‌ (63 ರನ್‌) ಹಾಗೂ ಮೈಕಲ್‌ ಬ್ರೇಸ್‌ವೆಲ್‌ (53 ರನ್‌) ಅವರ ಅರ್ಧಶತಕದ ಬಲದಿಂದ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 251 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ 252 ರನ್‌ಗಳ ಗುರಿಯನ್ನು ನೀಡಿತು.