INDW vs AUSW: ಭಾರತ ತಂಡವನ್ನು ಗೆಲ್ಲಿಸಿ ಜೀಸಸ್‌ಗೆ ಥ್ಯಾಂಕ್ಸ್ ಹೇಳಿ ಕಣ್ಣೀರಿಟ್ಟ ಜೆಮಿಮಾ ರೊಡ್ರಿಗಸ್!
Jemimah Rodrigues Statement: ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ದ 2025ರ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ್ದ ಭಾರತ ತಂಡದ ಜೆಮಿಮಾ ರೊಡ್ರಿಗಸ್ ಶತಕ ಬಾರಿಸಿದರು. ಆ ಮೂಲಕ ಭಾರತವನ್ನು ಗೆಲ್ಲಿಸಿದರು. ಪಂದ್ಯದ ಬಳಿಕ ಜೀಸಸ್‌ಗೆ ರೊಡ್ರಿಗಸ್ ಧನ್ಯವಾದ ಅರ್ಪಿಸಿದರು.
 
                                ಭಾರತ ತಂಡವನ್ನು ಗೆಲ್ಲಿಸಿ ಜೀಸಸ್‌ಗೆ ಥ್ಯಾಂಕ್ಸ್ ಹೇಳಿದ ಜಿಮಿಮಾ ರೊಡ್ರಿಗಸ್! -
 Ramesh Kote
                            
                                Oct 31, 2025 4:11 PM
                                
                                Ramesh Kote
                            
                                Oct 31, 2025 4:11 PM
                            ಮುಂಬೈ: ಆಸ್ಟ್ರೇಲಿಯಾ ವಿರುದ್ಧ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women's World Cup) ಸೆಮಿಫೈನಲ್ ಪಂದ್ಯದಲ್ಲಿ (INDW vs AUSW) ಭಾರತ ಮಹಿಳಾ ತಂಡ ದಾಖಲೆಯ ಮೊತ್ತವನ್ನು ಚೇಸ್ ಮಾಡಿ 5 ವಿಕೆಟ್ ರೋಚಕ ಗೆಲುವು ಸಾಧಿಸಿತು. ಭಾರತ ತಂಡದ ಈ ಗೆಲುವಿನ ಶ್ರೇಯ ಜೆಮಿಮಾ ರೊಡ್ರಿಗಸ್‌ಗೆ (Jemimah Rodrigues) ಸಲ್ಲಬೇಕು. ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಇವರು ಅಜೇಯ 127 ರನ್‌ಗಳನ್ನು ಕಲೆ ಹಾಕಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನ ಮೂಲಕ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು.
ಗುರುವಾರ ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ, 49.5 ಓವರ್‌ಗಳಿಗೆ 338 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ, ಜೆಮಿಮಾ ರೊಡ್ರಿಗಸ್ (127) ಶತಕ ಹಾಗೂ ಹರ್ಮನ್‌ಪ್ರೀತ್ ಕೌರ್ (89) ಅವರ ಬ್ಯಾಟಿಂಗ್ ಬಲದಿಂದ 48.3 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿ ಗೆಲುವಿನ ದಡ ಸೇರಿತು.
Women's World Cup: ಜೆಮಿಮಾ ರೊಡ್ರಿಗಸ್ ಭರ್ಜರಿ ಶತಕ, ಆಸ್ಟ್ರೇಲಿಯಾಗೆ ಆಘಾತ ನೀಡಿ ಫೈನಲ್‌ಗೇರಿದ ಭಾರತ!
ಜೇಸಸ್‌ಗೆ ಧನ್ಯವಾದ ಹೇಳಿದ ರೊಡ್ರಿಗಸ್
ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಭಾವುಕರಾದ ಜೆಮಿಮಾ ರೊಡ್ರಿಗಸ್ ತಮ್ಮ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಬಗ್ಗೆ ಮಾತನಾಡಿದರು. "ಈ ಪ್ರವಾಸದಲ್ಲಿ ನಾನು ಪ್ರತಿದಿನ ಅಳುತಿದ್ದೆ ಹಾಗೂ ಆತಂಕಕ್ಕೆ ಒಳಗಾಗುತ್ತಿದ್ದೆ. ನಾನು ಇಲ್ಲಿ ಪ್ರದರ್ಶನವನ್ನು ತೋರಲೇಬೇಕಾಗಿತ್ತು ಹಾಗೂ ದೇವರು ಇದನ್ನು ನೋಡಿಕೊಂಡಿದ್ದಾನೆ. ಆರಂಭದಲ್ಲಿ ನಾನು ಸುಮ್ಮನೆ ಆಡುತ್ತಿದ್ದೆ ಹಾಗೂ ನನಗೆ ನಾನೇ ಮಾತನಾಡುತ್ತಿದ್ದೆ. ಮೊದಲನೆಯದಾಗಿ ನಾನು ಜೀಸಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಒಬ್ಬಂಟಿಯಾಗಿ ನಾನು ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೊನೆಯ ಹಂತದಲ್ಲಿ ನಾನು ಬೈಬಲ್‌ನ ವಚನಗಳನ್ನು ಜಪಿಸುತ್ತಿದ್ದೆ ಹಾಗೂ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತರೆ, ದೇವರು ನಿಮ್ಮಲ್ಲಿ ಹೋರಾಟ ಮಾಡುತ್ತಾನೆ ಎಂಬುದನ್ನು ನಂಬಿದ್ದೆ," ಎಂದು ಹೇಳಿದ್ದಾರೆ.
Jemimah Rodrigues has thanked Jesus in her interview 😂😂
— 𝐀. (@was_abdd) October 30, 2025
I hope the bhakts would at least spare her for today.#INDWvsAUSW
pic.twitter.com/boSNGPBjP7
ತಮ್ಮ ಬ್ಯಾಟಿಂಗ್ ಸಕ್ಸಸ್‌ನ ಶ್ರೇಯ ಸಹ ಆಟಗಾರ್ತಿಯರಿಗೆ ಅರ್ಪಿಸಿದ ಜೆಮಿಮಾ
ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಬಹುಬೇಗ ವಿಕೆಟ್ ಒಪ್ಪಿಸಿದ ಬಳಿಕ ಜೆಮಿಮಾ ರೊಡ್ರಿಗಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ಮೂರನೇ ವಿಕೆಟ್‌ಗೆ 167 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಂತರ ದೀಪ್ತಿ ಶರ್ಮಾ, ರಿಚಾ ಘೋಷ್ ಹಾಗೂ ಅಮನ್‌ಜೋತ್ ಕೌರ್ ಜೆಮಿಮಾಗೆ ಸಾಥ್ ನೀಡಿದ್ದರು. ಭಾರತ ತಂಡ ನವೆಂಬರ್ 2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.
Jemimah Rodrigues with her father Ivan after her World Cup semi-final heroics 💙 #CWC25 pic.twitter.com/yOV6otuO5h
— ESPNcricinfo (@ESPNcricinfo) October 30, 2025
"ಹರ್ಮನ್‌ಪ್ರೀತ್ ಕೌರ್ ಬಂದಾಗ, ಒಂದು ಒಳ್ಳೆಯ ಜೊತೆಯಾಟ ಬೇಕೆಂದು ಮನವರಿಕೆಯಾಗಿತ್ತು. ಕೊನೆಯ ಹಂತದಲ್ಲಿ ನನಗೆ ನಾನೇ ತಳ್ಳುತ್ತಿದ್ದೆ, ಆದರೆ ಇದು ನನ್ನಿಂದ ಸಾಧ್ಯವಾಗಿರಲಿಲ್ಲ. ಪ್ರತಿಯೊಂದು ಎಸೆತದಲ್ಲಿಯೂ ದೀಪ್ತಿ ನನ್ನ ಬಳಿ ಮಾತನಾಡುತ್ತಿದ್ದರು ಪ್ರೋತ್ಸಾಹ ನೀಡುತ್ತಿದ್ದರು. ನಾನು ಮುಂದುವರಿಯಲು ಸಾಧ್ಯವಾಗದಾಗ, ನನ್ನ ಸಹ ಆಟಗಾರ್ತಿಯರು ಪ್ರೋತ್ಸಾಹ ನೀಡುತ್ತಿದ್ದರು. ಯಾವುದಕ್ಕೂ ನನಗೆ ನಾನೇ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಹಾಗೂ ನಾನು ಏನನ್ನೂ ಮಾಡಿಲ್ಲ. ಗ್ಯಾಲರಿಯಲ್ಲಿ ಕುಳಿತಿದ್ದ ಪ್ರತಿಯೊಬ್ಬರೂ ನನ್ನನ್ನು ಹುರಿದುಂಬಿಸುತ್ತಿದ್ದರು ಹಾಗೂ ಪ್ರೋತ್ಸಾಹ ನೀಡುತ್ತಿದ್ದರು, ಇದರಿಂದ ನಾನು ಪ್ರೇರಣೆಗೊಂಡು ಆಡುತ್ತಿದ್ದೆ," ಎಂದು ಜೆಮಿಮಾ ರೊಡ್ರಿಗಸ್ ತಿಳಿಸಿದ್ದಾರೆ.
