ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಗೂ ಮುನ್ನ ಭಾರತಕ್ಕೆ ಆಕಾಶ್‌ ಚೋಪ್ರಾ!

ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಹೊರತಾಗಿಯೂ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಎಚ್ಚರಿಕೆಯನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೂ ಇದೇ ರೀತಿ ಧೂಳಿನ ಪಿಚ್‌ಗಳನ್ನು ಮಾಡಿದರೆ, ನೀವೇ ತೊಂದರೆ ಅನುಭವಿಸುತ್ತೀರಿ ಎಂದು ಹೇಳಿದ್ದಾರೆ.

ಭಾರತ ತಂಡಕ್ಕೆ ವಾರ್ನಿಂಗ್‌ ಕೊಟ್ಟ ಆಕಾಶ್‌ ಚೋಪ್ರಾ.

ನವದೆಹಲಿ: ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿ (IND vs SA) ನಿಮಿತ್ತ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಆಕಾಶ್‌ ಚೋಪ್ರಾ (Aakash Chopra) ಎಚ್ಚರಿಕೆ ನೀಡಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ (IND vs WI) ತಯಾರಿ ಮಾಡಿರುವ ರೀತಿ ಧೂಳಿನ ಪಿಚ್‌ಗಳನ್ನು ಮಾಡಿದರೆ, ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ನೇವೇ ತೊಂದರೆಗೆ ಸಿಲುಕುತ್ತೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಪ್ರಸ್ತುತ ವಿಂಡೀಸ್‌ ಎದುರು ಎರಡನೇ ಹಾಗೂ ಅಂತಿಮ ಟೆಸ್ಟ್‌ ಆಡುತ್ತಿದ್ದು, ಐದನೇ ದಿನವಾದ ಮಂಗಳವಾರ ಟೆಸ್ಟ್‌ ಸರಣಿ ಅಂತ್ಯವಾಗಲಿದೆ.

ಭಾರತದ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ವೆಸ್ಟ್‌ ಇಂಡೀಸ್‌, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಲ್ಲಿನ ಪಿಚ್‌ ಅನ್ನು ಅರ್ಥ ಮಾಡಿಕೊಂಡು ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಂಡಿತು. ಡೆಲ್ಲಿ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಜಾನ್‌ ಕ್ಯಾಂಪ್‌ಬೆಲ್‌ (115) ಹಾಗೂ ಶೇಯ್‌ ಹೋಪ್‌ (103) ಅವರು ತಲಾ ಶತಕಗಳನ್ನು ಬಾರಿಸಿದರು. ಜಸ್ಟಿನ್‌ ಗ್ರೀವ್ಸ್‌ (50) ಹಾಗೂ ಜೇಡನ್‌ ಸೀಲ್ಸ್‌ (32) ಅವರು ಕೂಡ ಉತ್ತಮವಾಗಿ ಬ್ಯಾಟ್‌ ಮಾಡಿದರು. ಪಂದ್ಯದ ನಾಲ್ಕನೇ ದಿನ ಭಾರತದ ಬೌಲರ್‌ಗಳು ತಮ್ಮ ರಣತಂತ್ರವನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾದರು.

IND vs WI: ವಿಂಡೀಸ್‌ 390ಕ್ಕೆ ಆಲ್‌ಔಟ್‌, ಎರಡನೇ ಟೆಸ್ಟ್‌ ಗೆಲುವಿನ ಸನಿಹದಲ್ಲಿ ಭಾರತ ತಂಡ!

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಭಾರತದ ಬೌಲಿಂಗ್ ಸಾಮರ್ಥ್ಯದ ಕೊರತೆಯು ಸೌಮ್ಯವಾದ ಮೇಲ್ಮೈಯಲ್ಲಿ ಬಹಿರಂಗವಾಯಿತು ಎಂದು ಆಕಾಶ್‌ ಚೋಪ್ರಾ ಒಪ್ಪಿಕೊಂಡರು. ಆದಾಗ್ಯೂ, ಆತಿಥೇಯರು ತೀವ್ರ ಕ್ರಮಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಸಿದರು, ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಗೆ ಬೌಲಿಂಗ್ ಸ್ನೇಹಿ ಮೇಲ್ಮೈಗಳನ್ನು ಸಿದ್ಧಪಡಿಸುವುದು ಶುಭಮನ್ ಗಿಲ್ ಮತ್ತು ತಂಡದ ಮೇಲೆ ವಿರುದ್ಧ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

"ಭಾರತ ತಂಡಕ್ಕೆ ಮುಂದಿನ ಸವಾಲು ದಕ್ಷಿಣ ಆಫ್ರಿಕಾ. ಅವರು ಈಗಾಗಲೇ ಪಾಕಿಸ್ತಾನದಲ್ಲಿ ಆಡುತ್ತಿದ್ದಾರೆ ಹಾಗೂ ಅಲ್ಲಿ ಒಂದು ವಿಕೆಟ್‌ ಬಿಟ್ಟು ಇನ್ನುಳಿದ ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗುತ್ತಿದೆ. ಹಾಗಾಗಿ ಅವರು ಸ್ಪಿನ್‌ ಎದುರು ಆಡುತ್ತಿದ್ದಾರೆ ಹಾಗೂ ಅವರಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ. ಒಂದು ವೇಳೆ ನೀವು ಧೂಳಿನ ಪಿಚ್‌ ತಯಾರಿ ಮಾಡಿದರೆ, ಬಹುಶಃ ನೀವೇ ಬಲೆಯಲ್ಲಿ ಬೀಳಬಹುದು. ಇನ್ನು ನೀವು ಹಸಿರು ಪಿಚ್‌ ಅನ್ನು ಕೂಡ ನೀವು ಮಾಡುವ ಸಾಧ್ಯತೆ ಇಲ್ಲ, ಏಕೆಂದರೆ ಹರಿಣ ಪಡೆಯಲ್ಲಿ ಅತ್ಯುತ್ತಮ ವೇಗದ ಬೌಲಿಂಗ್‌ ವಿಭಾಗವಿದೆ," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IND vs WI: ʻನಿತೀಶ್‌ ರೆಡ್ಡಿಗೆ ಏಕೆ ಬೌಲಿಂಗ್‌ ಕೊಡುತ್ತಿಲ್ಲ?ʼ-ದೊಡ್ಡ ಗಣೇಶ್‌ ಪ್ರಶ್ನೆ!

"ಕಲಿಯಲು ಪಾಠಗಳಿವೆ ಮತ್ತು ಹೆಚ್ಚು ಬೌಲರ್ ಸ್ನೇಹಿಯಾಗಿರುವ ಮೇಲ್ಮೈಯನ್ನು ಸಿದ್ಧಪಡಿಸಲು ಪರಿಸ್ಥಿತಿಗಳೊಂದಿಗೆ ಬದಲಾಯಿಸಲು ಸರಿಯಾದ ಪ್ರಲೋಭನೆ ಇದೆ, ಆದರೆ ಟೆಸ್ಟ್ ಚಾಂಪಿಯನ್ಸ್‌ ದಕ್ಷಿಣ ಆಫ್ರಿಕಾದಂತಹ ತಂಡದ ವಿರುದ್ಧ, ವಿಶೇಷವಾಗಿ ಅವರು ಪಾಕಿಸ್ತಾನ ಪ್ರವಾಸದಿಂದ ಬಂದ ನಂತರ ಅದು ಅಷ್ಟು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಭಾವಿಸಬೇಡಿ," ಎಂದು 48 ವರ್ಷದ ಮಾಜಿ ಆಟಗಾರ ಎಚ್ಚರಿಕೆ ನೀಡಿದ್ದಾರೆ.