ನವದೆಹಲಿ: ಬಾಂಗ್ಲಾದೇಶ ತಂಡ 2026ರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಿಂದ ಹೊರ ನಡೆದ ಬೆನ್ನಲ್ಲೆ ಇದೀಗ ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಕಿರಿಯರ (ಅಂಡರ್ 19) ವಿಶ್ವಕಪ್ ಟೂರ್ನಿಯಲ್ಲಿ (U-19 World Cup 2026) ಬಾಂಗ್ಲಾ ಕಿರಿಯರ ತಂಡಕ್ಕೆ ವೇಳಾಪಟ್ಟಿ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಸಂಯೋಜಕ ಹಬಿಬುಲ್ ಬಶರ್ (Habibul Bashar) ಗಂಭೀರ ಆರೋಪ ಮಾಡಿದ್ದಾರೆ.
ಬಾಂಗ್ಲಾದೇಶ ತಂಡ, ತನ್ನ ಆರಂಭಿಕ ಎರಡು ಪಂದ್ಯಗಳನ್ನು ಬುಲವಾಯೊದಲ್ಲಿ ಆಡಿದೆ. ಜನವರಿ 17 ರಂದು ಭಾರತದ ವಿರುದ್ಧ ಆಡಿದ್ದರೆ (18 ರನ್‌ಗಳಿಂದ ಸೋಲು) ಹಾಗೂ ಎರಡನೇ ಪಂದ್ಯವನ್ನು ಜನವರಿ 20 ರಂದು ನ್ಯೂಜಿಲೆಂಡ್ ವಿರುದ್ಧ ಕಾದಾಟ (ಮಳೆಯಿಂದ ಪಂದ್ಯ ರದ್ದು) ನಡೆಸಿತ್ತು. ಜನವರಿ 23 ರಂದು ಹರಾರೆತಲ್ಲಿ ನಡೆದಿದ್ದ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ, ಯುಎಸ್‌ಎ ತಂಡವನ್ನು ಮಣಿಸಿತ್ತು. ಆ ಮೂಲಕ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಮಾಡಿತ್ತು. ನಂತರ ಬಾಂಗ್ಲಾ, ಈ ವಾರ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲು ಬುಲವಾಯೊಗೆ ಮರಳಿತ್ತು. ಈ ಪಂದ್ಯದಲ್ಲಿ ಬಾಂಗ್ಲಾ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಎಲಿಮಿನೇಟ್ ಆಯಿತು.
T20 World Cup 2026: ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ರಾಹುಲ್ ದ್ರಾವಿಡ್!
ಈ ಬಗ್ಗೆ ಡೈಲಿ ಸ್ಟಾರ್ ಜೊತೆ ಮಾತನಾಡಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಂಯೋಜಕ ಹಬಿಬುಲ್ ಬಶರ್, "ವಿಧಾನಕ್ಕಿಂತ ಹೆಚ್ಚಾಗಿ, ನಮ್ಮ ಲೆಕ್ಕಾಚಾರಗಳು (ಇಂಗ್ಲೆಂಡ್ ಮತ್ತು ಭಾರತದ ವಿರುದ್ಧ) ಕೊರತೆಯಿದ್ದವು ಎಂದು ನಾನು ಭಾವಿಸುತ್ತೇನೆ. ಆದರೆ ಜನರು ನಾನು ನೆಪಗಳನ್ನು ಹೇಳುತ್ತಿದ್ದೇನೆ ಎಂದು ಭಾವಿಸಿದರೂ ಸಹ, ಈ ಪ್ರಯಾಣದ ವೇಳಾಪಟ್ಟಿ ನಮಗೆ ತುಂಬಾ ಹೊರೆಯಾಗಿತ್ತು," ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಟೂರ್ನಿಗೂ ಮುನ್ನ ಬಾಂಗ್ಲಾದೇಶ ತಂಡವು ನಾಲ್ಕು ದಿನಗಳ ಅವಧಿಯಲ್ಲಿ ಮಾಸ್ವಿಂಗೊ (ಜನವರಿ 10) ಮತ್ತು ಹರಾರೆ (ಜನವರಿ 13) ಯಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿತ್ತು, ನಂತರ ಮೂರು ದಿನಗಳ ನಂತರ ಬುಲವಾಯೊದಲ್ಲಿ ಭಾರತದ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನು ಆಡಬೇಕಾಗಿತ್ತು. ಹರಾರೆ ಮತ್ತು ಬುಲವಾಯೊ ನಡುವೆ ನಾಲ್ಕು ಗಂಟೆಗಳ ಪ್ರಯಾಣ ನಡೆಸಬೇಕಾಗಿತ್ತು.
ಬಾಂಗ್ಲಾದೇಶ ಕ್ರಿಕೆಟ್ ಅನ್ನು ಉಳಿಸಿ ಎಂದು ಆಗ್ರಹಿಸಿದ ನಜ್ಮುಲ್ ಹುಸೇನ್ ಶಾಂತೊ!
"ಭಾರತದ ವಿರುದ್ಧದ ಪಂದ್ಯವನ್ನು ಆಡಲು ಬಾಂಗ್ಲಾದೇಶ ತಂಡ, ಹರಾರೆಯಿಂದ ಬುಲವಾಯೊಗೆ ತೆರಳಬೇಕಿತ್ತು. ಈ ವೇಳೆ ಆಟಗಾರರ ದಣಿಯುದನ್ನು ತಡೆಯಲು ನಾವು ಬಸ್ ಪ್ರಯಾಣವನ್ನು ಕೈ ಬಿಟ್ಟು ವಿಮಾನದಲ್ಲಿ ನಮ್ಮ ಕೈಯಿಂದ ಹಣವನ್ನು ವ್ಯಯಿಸಿ ಪ್ರಯಾಣ ಮಾಡಿದೆವು. ಏಕೆಂದರೆ ಇಲ್ಲಿ ನೇರವಾಗಿ ಬುಲವಾಯೊಗೆ ತೆರಳುವ ವಿಮಾನಗಳು ಇಲ್ಲಿ ಕಡಿಮೆ ಇವೆ.
"ಆರಂಭದಲ್ಲಿ, ಬಾಂಗ್ಲಾದೇಶ ತನ್ನ ಎರಡೂ ಪಂದ್ಯಗಳನ್ನು ಮಾಸ್ಟಿಂಗೊದಲ್ಲಿ ಆಡಲು ನಿರ್ಧರಿಸಲಾಗಿತ್ತು ಆದರೆ ಐಸಿಸಿ ಇದ್ದಕ್ಕಿದ್ದಂತೆ ಸ್ಥಳಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ವೇಳಾಪಟ್ಟಿಯ ಕುರಿತು ಐಸಿಸಿಗೆ ತಿಳಿಸಲಾಯಿತು, ಆದರೆ ಅದನ್ನು ಅವರು ಗಣನೆಗೆ ತೆಗೆದುಕೊಂಡಿಲ್ಲ," ಎಂದು ಹಬಿಬುಲ್ ಬಶರ್ ಆರೋಪ ಮಾಡಿದ್ದಾರೆ.