ನವದೆಹಲಿ: ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯು ಫೆಬ್ರವರಿ 7 ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಈ ಮಹತ್ವದ ಟೂರ್ನಿಗೆ ಸಜ್ಜಾಗುತ್ತಿವೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ (Indian Cricket Team) ಕೂಡ ಸೇರಿದೆ. ಈ ಬಗ್ಗೆ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ (Phil Salt), ಭಾರತ ತಂಡವನ್ನು ಶ್ಲಾಘಿಸಿದ್ದಾರೆ. ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠವಾಗಿದ್ದು, ಇತರೆ ತಂಡಗಳಿಗೆ ಭೀತಿ ಮೂಡಿಸಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಭಾರತ ತಂಡ 2023 ರಿಂದ ಇಲ್ಲಿಯವರೆಗೂ ಟಿ20ಐ ದ್ವಿಪಕ್ಷೀಯ ಸರಣಿಯಲ್ಲಿ ಸೋಲು ಕಾಣದೆ ಮುನ್ನುಗ್ಗುತ್ತಿದೆ. ಈ ಅವಧಿಯಲ್ಲಿ ಭಾರತ ತಂಡ, ಆಡಿದ 63 ಟಿ20ಐ ಪಂದ್ಯಗಳಲ್ಲಿ 49ರಲ್ಲಿ ಗೆಲುವು ಪಡೆದಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿಯೂ ಭಾರತ ಮೂರು ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಆ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
IND vs NZ: ಸಂಜು ಸ್ಯಾಮ್ಸನ್ ಔಟ್? ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಫಿಲ್ ಸಾಲ್ಟ್, "ಭಾರತ ತಂಡವನ್ನು ಸೋಲಿಸಬೇಕೆಂದರೆ, ಪ್ರತಿಯೊಂದು ತಂಡಕ್ಕೂ ಸ್ವಲ್ಪ ಅದೃಷ್ಟ ಬೇಕು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧ ಆಡಲು ಉತ್ಸುಕನಾಗಿ ಕಾಯುತ್ತಿದ್ದೇನೆ," ಎಂದು ಹೇಳಿದ್ದಾರೆ.
ಅಭಿಷೇಕ್ ಶರ್ಮಾಗೆ ಶ್ಲಾಘಿಸಿದ ಫಿಲ್ ಸಾಲ್ಟ್
ಭಾರತ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಫಿಲ್ ಸಾಲ್ಟ್ ಗುಣಗಾನ ಮಾಡಿದ್ದಾರೆ.
ರೋಹಿತ್ ಶರ್ಮಾರ ಟಿ20ಐ ವಿಶ್ವ ದಾಖಲೆಯನ್ನು ಮುರಿದ ಪಾಲ್ ಸ್ಟರ್ಲಿಂಗ್!
"ಅವರು ಮೊದಲನೇ ಎಸೆತದಲ್ಲಿಯೇ ಸಿಕ್ಸರ್ ಹೊಡೆಯಬಲ್ಲರು. ಯಾವುದೇ ಲೈನ್‌ನಲ್ಲಿ ಚೆಂಡನ್ನು ಹಾಕಿದರೂ ಅವರಿಗೆ ಬೇಕಾದ ಕಡೆ ಶಾಟ್ ಮಾಡಬಲ್ಲರು. ಅಲ್ಲದೆ ಮುಂದೆ ನಡೆದುಕೊಂಡು ಬಂದು ನಿರ್ಭೀತಿಯಿಂದ ಆಡುತ್ತಾರೆ. ಆಫ್ ಸೈಡ್ ಹಾಗೂ ಲೆಗ್ ಸೈಡ್ ಕಡೆಗೆ ಸಂಪೂರ್ಣವಾಗಿ ಆಡುತ್ತಾರೆ. ಅವರ ರೀತಿ ನಾನು ಆಗಲು ಸಾಧ್ಯವಿಲ್ಲ. ಆದರೆ, ಅವರ ಬ್ಯಾಟಿಂಗ್ ಅನ್ನು ನಾನು ಆನಂದಿಸಬಲ್ಲೆ," ಎಂದು ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿ ಯಾವಾಗ?
2024ರ ಜುಲೈನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಅಭಿಷೇಕ್ ಶರ್ಮಾ ನಿರಂತರವಾಗಿ ರನ್ ಹೊಡೆಯುತ್ತಿದ್ದಾರೆ. ಅವರು ಆಡಿದ 36 ಇನಿಂಗ್ಸ್‌ಗಳಿಂದ 37.26ರ ಸರಾಸರಿಯಲ್ಲಿ 1267 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು ಎರಡು ಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ಇವರು ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.