ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಐಪಿಎಲ್‌ ಟೂರ್ನಿಯನ್ನು ಬಹಿಷ್ಕರಿಸಿʼ: ಇತರೆ ಮಂಡಳಿಗಳಿಗೆ ಇಂಝಮಾಮ್‌ ಉಲ್‌ ಹಕ್‌ ಕರೆ!

Inzamam-ul-Haq on boycott IPL: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯನ್ನು ಬಹಿಷ್ಕರಿಸುವಂತೆ ವಿಶ್ವದ ಇತರೆ ಕ್ರಿಕೆಟ್‌ ಮಂಡಳಿಗಳಿಗೆ ಪಾಕಿಸ್ತಾನ ಮಾಜಿ ನಾಯಕ ಇಂಝಮಾಮ್‌ ಉಲ್‌ ಹಕ್‌ ಆಗ್ರಹಿಸಿದ್ದಾರೆ. ವಿಶ್ವದ ಇತರೆ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾರತೀಯ ಆಟಗಾರರು ಭಾಗವಹಿಸುವುದಿಲ್ಲ, ಆದರೆ, ಬೇರೆ ದೇಶಗಳ ಆಟಗಾರರು ಮಾತ್ರ ಐಪಿಎಲ್‌ ಆಡಲು ಬರಬೇಕು ಎಂದು ದೂರಿದ್ದಾರೆ.

ಐಪಿಎಲ್‌ ಟೂರ್ನಿಯನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ ಇಂಝಮಾಮ್‌!

ಇಂಝಮಾಮ್‌ ಉಲ್‌ ಹಕ್‌

Profile Ramesh Kote Mar 14, 2025 3:39 PM

ನವದೆಹಲಿ: ದಿ ಹಂಡ್ರೆಡ್‌ ಲೀಗ್‌ ಟೂರ್ನಿಯ ಹರಾಜಿನಲ್ಲಿ ಪಾಕಿಸ್ತಾನದ ಎಲ್ಲಾ ಆಟಗಾರರು ಅನ್‌ಸೋಲ್ಡ್‌ ಆಗಿರುವ ಕಾರಣ ಬೇಸರಗೊಂಡಿರುವ ಪಾಕಿಸ್ತಾನ ಮಾಜಿ ನಾಯಕ ಇಂಝಮಾಮ್‌ ಉಲ್‌ ಹಕ್‌ (Inzamam-ul-Haq), ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಆಡಲು ತಮ್ಮ-ತಮ್ಮ ಆಟಗಾರರನ್ನು ಕಳುಹಿಸುವುದನ್ನು ನಿಲ್ಲಿಸಬೇಕೆಂದು ವಿಶ್ವದ ಇತರೆ ಕ್ರಿಕೆಟ್‌ ಮಂಡಳಿಗಳಿಗೆ ಆಗ್ರಹಿಸಿದ್ದಾರೆ. ವಿಶ್ವದ ಇತರೆ ಫ್ರಾಂಚೈಸಿ ಲೀಗ್‌ಗಳನ್ನು ಆಡಲು ಬಿಸಿಸಿಐ ತಮ್ಮ ಆಟಗಾರರಿಗೆ ಅವಕಾಶವನ್ನು ನೀಡುವುದಿಲ್ಲ. ಆದರ, ಐಪಿಎಲ್‌ ಟೂರ್ನಿಯಲ್ಲಿ ಆಡಲು ವಿಶ್ವದ ಇತರೆ ಮಂಡಳಿಗಳು ತಮ್ಮ ಆಟಗಾರರನ್ನು ಕಳುಹಿಸಿಕೊಡುತ್ತದೆ ಎಂದು ಪಾಕ್‌ ಮಾಜಿ ನಾಯಕ ದೂರಿದ್ದಾರೆ.

ಭಾರತ ಮಹಿಳಾ ತಂಡದ ಆಟಗಾರ್ತಿಯರಾದ ಸ್ಮೃತಿ ಮಂಧಾನಾ, ಜೆಮಿಮಾ ರೊಡ್ರಿಗಸ್‌ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಅವರು ಬಿಗ್‌ ಬ್ಯಾಷ್‌ ಲೀಗ್‌, ವೆಸ್ಟ್‌ ಇಂಡೀಸ್‌ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌, ದಿ ಹಂಡ್ರೆಡ್‌ ಸೇರಿದಂತೆ ವಿಶ್ವದ ಇತರೆ ಮಹಿಳಾ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುತ್ತಾರೆ. ಆದರೆ, ಭಾರತದ ಪುರುಷರ ತಂಡದ ಆಟಗಾರರು ಮಾತ್ರ ವಿಶ್ವದ ಬೇರೆ ಯಾವುದೇ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸಲು ಬಿಸಿಸಿಐ ಅನುಮತಿ ನೀಡಿಲ್ಲ. ಇದರ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಇಂಝಮಾಮ್‌ ಉಲ್‌ ಹಕ್‌ ಅಸಮಾಧಾನವನ್ನು ವ್ತಕ್ತಪಡಿಸಿದ್ದಾರೆ.

IPL 2025: ಐಪಿಎಲ್‌ ಟೂರ್ನಿಯಿಂದ ಹ್ಯಾರಿ ಬ್ರೂಕ್‌ ಎರಡು ವರ್ಷ ನಿಷೇಧ! ಕಾರಣವೇನು?

"ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಪಕ್ಕಕ್ಕೆ ಇಡಿ, ಐಪಿಎಲ್‌ ಟೂರ್ನಿಯಲ್ಲಿ ವಿಶ್ವದ ಎಲ್ಲಾ ಆಟಗಾರರು ಬಂದು ಆಡುತ್ತಾರೆ. ಆದರೆ, ಭಾರತೀಯ ಆಟಗಾರರು ವಿಶ್ವದ ಯಾವುದೇ ಫ್ರಾಂಚೈಸಿ ಲೀಗ್‌ನಲ್ಲಿ ಆಡಲು ಹೋಗುವುದಿಲ್ಲ. ಹಾಗಾಗಿ ಎಲ್ಲಾ ಕ್ರಿಕೆಟ್‌ ಮಂಡಳಿಗಳು ತಮ್ಮ-ತಮ್ಮ ಆಟಗಾರರನ್ನು ಐಪಿಎಲ್‌ ಟೂರ್ನಿಗೆ ಕಳುಹಿಸಬೇಡಿ. ನೀವು ನಿಮ್ಮ ಆಟಗಾರರನ್ನು ಬೇರೆ ಲೀಗ್‌ಗಳಿಗೆ ಕಳುಹಿಸಿಕೊಡುವುದಿಲ್ಲವಾದರೆ, ಇತರೆ ಕ್ರಿಕೆಟ್‌ ಮಂಡಳಿಗಳು ತಮ್ಮ ನಿಲುವನ್ನು ತೆಗೆದುಕೊಳ್ಳಬಾರದೆ?," ಎಂದು ಪಾಕ್‌ ದಿಗ್ಗಜ ಪ್ರಶ್ನೆ ಮಾಡಿದ್ದಾರೆ.

ಭಾರತೀಯ ಕ್ರಿಕೆಟಿಗರು ವಿದೇಶಿ ಫ್ರಾಂಚೈಸಿ ಲೀಗ್‌ನಲ್ಲಿ ಭಾಗವಹಿಸಲು ಏಕೈಕ ಮಾರ್ಗವಿದೆ. ಅದೇನೆಂದರೆ, ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಆಟಗಾರರು ವಿದೇಶಿ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸಬಹುದಾಗಿದೆ. ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಕಳೆದ ವರ್ಷ ವಿದಾಯ ಹೇಳಿದ್ದರು. ಇದಾದ ಬಳಿಕ ಅವರು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಪಾರ್ಲ್‌ ರಾಯಲ್ಸ್‌ ಪರ ಆಡಿದ್ದರು. ಭಾರತ ತಂಡದ ಮಾಜಿ ಆಟಗಾರರಾದ ಯುವರಾಜ್‌ ಸಿಂಗ್‌ ಹಾಗೂ ಇರ್ಫಾನ್‌ ಪಠಾಣ್‌ ಅವರು ಕೂಡ ಕೆನಡಾದಲ್ಲಿ ನಡೆಯುವ ಜಿಟಿ20 ಟೂರ್ನಿಯಲ್ಲಿ ಭಾಗವಹಿಸಿದ್ದರು.

IPL 2025: ಕೊಹ್ಲಿ-ಸಾಲ್ಟ್‌ ಓಪನರ್ಸ್‌, ಕೆಕೆಆರ್‌ ವಿರುದ್ದದ ಆರಂಭಿಕ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌ 2025) ಟೂರ್ನಿ ಮಾರ್ಚ್‌ 22 ರಂದು ಆರಂಭವಾಗಲಿದೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಲಿವೆ. ಪಾಕಿಸ್ತಾನ ಸೂಪರ್‌ ಲೀಗ್‌ ಏಪ್ರಿಲ್‌ 11 ರಿಂದ ಮೇ 18ರವರೆಗೆ ನಡೆಯಲಿದೆ. ಅವಧಿಯಲ್ಲಿ ಐಪಿಎಲ್‌ ಟೂರ್ನಿ ನಡೆಯುವ ಕಾರಣ, ವಿದೇಶಿ ಆಟಗಾರರ ಪಿಎಸ್‌ಎಲ್‌ ತೊರೆದು ಐಪಿಎಲ್‌ಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಿದ್ದಾರೆ.