ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಟೂರ್ನಿಯಿಂದ ಹ್ಯಾರಿ ಬ್ರೂಕ್‌ ಎರಡು ವರ್ಷ ನಿಷೇಧ! ಕಾರಣವೇನು?

Harry Brook banned IPL for 2 Years: ಮುಂದಿನ ಎರಡು ವರ್ಷಗಳ ಕಾಲ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಹ್ಯಾರಿ ಬ್ರೂಕ್‌ ಅವರನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ನಿಷೇಧಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಹ್ಯಾರಿ ಬ್ರೂಕ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿತ್ತು.

ಎರಡು ವರ್ಷಗಳ ಕಾಲ ಹ್ಯಾರಿ ಬ್ರೂಕ್‌ ಐಪಿಎಲ್‌ನಿಂದ ನಿಷೇಧ!

ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಹ್ಯಾರಿ ಬ್ರೂಕ್‌ ನಿಷೇಧ.

Profile Ramesh Kote Mar 13, 2025 8:58 PM

ನವದೆಹಲಿ: ಮುಂದಿನ ಎರಡು ವರ್ಷಗಳ ಕಾಲ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯನ್ನು ಆಡದಂತೆ ಇಂಗ್ಲೆಂಡ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹ್ಯಾರಿ ಬ್ರೂಕ್‌ಗೆ (Harry Brook) ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ನಿಷೇಧ ಹೇರಿದೆ. ಈ ವಿಷಯವನ್ನು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ಬಿಸಿಸಿಐ ತಿಳಿಸಿದೆ. ಕೊನೆಯ ಹಂತದಲ್ಲಿ ಐಪಿಎಲ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡರೆ, ಅಂಥಾ ಆಟಗಾರ ಬಿಸಿಸಿಐನ ಹೊಸ ನಿಯಮಗಳ ಪ್ರಕಾರ ಎರಡು ವರ್ಷಗಳ ಕಾಲ ಹರಾಜಿಗೆ ಪ್ರವೇಶ ಮಾಡುವಂತಿಲ್ಲ.

ಕಳೆದ ವರ್ಷದ ಅಂತ್ಯದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ಆಟಗಾರನನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ 6.25 ಕೋಟಿ ರೂ. ಗಳಿಗೆ ಖರೀದಿಸಿತ್ತು. ಈ ಹಿಂದಿನ ಹರಾಜಿನಲ್ಲಿಯೂ ಹ್ಯಾರಿ ಬ್ರೂಕ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿತ್ತು. ಅಂದ ಹಾಗೆ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಗಳಿಗೆ ತಯಾರಿ ನಡೆಸುವ ಸಲುವಾಗಿ ಹ್ಯಾರಿ ಬ್ರೂಕ್‌ ಅವರು 2025ರ ಐಪಿಎಲ್‌ ಟೂರ್ನಿಯಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ.

IPL 2025: ವೆಂಕಟೇಶ್‌ ಅಯ್ಯರ್‌ ಬದಲು ಅಜಿಂಕ್ಯ ರಹಾನೆಗೆ ಕಕೆಆರ್‌ ನಾಯಕತ್ವ ನೀಡದೆ ಇರಲು ಕಾರಣ ತಿಳಿಸಿದ ವೆಂಕಿ ಮೈಸೂರು!

"ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೊದಲು ಪ್ರತಿಯೊಬ್ಬ ಆಟಗಾರನಿಗೆ ತಿಳಿಸಲಾದ ನಿಯಮಗಳ ಪ್ರಕಾರ ಬಿಸಿಸಿಐ ಹ್ಯಾರಿ ಬ್ರೂಕ್‌ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಇಸಿಬಿ ಮತ್ತು ಆಟಗಾರನಿಗೆ ಅಧಿಕೃತ ಸಂವಹನವನ್ನು ಕಳುಹಿಸಲಾಗಿದೆ. ಇದು ಮಂಡಳಿಯು ನಿಗದಿಪಡಿಸಿದ ನೀತಿಯಾಗಿದೆ ಮತ್ತು ಪ್ರತಿಯೊಬ್ಬ ಆಟಗಾರನು ಅದಕ್ಕೆ ಬದ್ಧನಾಗಿರಬೇಕು," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೃಢಪಡಿಸಿದ್ದಾರೆ.

ಐಪಿಎಲ್‌ನ ನೂತನ ನಿಯಮಗಳ ಪ್ರಕಾರ, "ಹರಾಜಿಗೆ ತಮ್ಮ ಹೆಸರನ್ನು ನೊಂದಣೆ ಮಾಡಿಕೊಳ್ಳುವ ಆಟಗಾರ, ಟೂರ್ನಿಯ ಆರಂಭಕ್ಕೂ ಮುನ್ನ ಆಡಲು ಅಲಭ್ಯರಾದರೆ, ಅಂಥಾ ಆಟಗಾರನನ್ನು ಐಪಿಎಲ್‌ ಟೂರ್ನಿಯಿಂದ ಮುಂದಿನ ಎರಡು ಆವೃತ್ತಿಗಳಿಗೆ ನಿಷೇಧಿಸಲಾಗುತ್ತದೆ. ಈ ಎರಡು ವರ್ಷಗಳ ಆ ಆಟಗಾರ ಹರಾಜಿನಲ್ಲಿ ಭಾಗವಹಿಸುವಂತಿಲ್ಲ," ಎಂದು ಅವರು ತಿಳಿಸಿದ್ದಾರೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಹ್ಯಾರಿ ಬ್ರೂಕ್‌ ಸ್ಥಾನ ತುಂಬಬಲ್ಲಿ ಟಾಪ್‌ 5 ಆಟಗಾರರು!

ಡೆಲ್ಲಿ ಕ್ಯಾಪಿಟಲ್ಸ್‌ ಬಳಿ ಕ್ಷಮೆ ಕೇಳಿದ್ದ ಹ್ಯಾರಿ ಬ್ರೂಕ್‌

"ಮುಂಬರುವ ಐಪಿಎಲ್‌ ಟೂರ್ನಿಯಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ," ಎಂದು ಹ್ಯಾರಿ ಬ್ರೂಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಾನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅವರ ಬೆಂಬಲಿಗರಲ್ಲಿ ಸಂಪೂರ್ಣವಾಗಿ ಕ್ಷಮೆಯಾಚಿಸುತ್ತೇನೆ," ಎಂದು ಅವರು ಹೇಳಿದ್ದಾರೆ.

"ನನಗೆ ಕ್ರಿಕೆಟ್ ತುಂಬಾ ಇಷ್ಟ. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ, ನನ್ನ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ ಮತ್ತು ಈ ಮಟ್ಟದಲ್ಲಿ ನಾನು ಪ್ರೀತಿಸುವ ಆಟವನ್ನು ಆಡಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ನಂಬುವ ಜನರ ಮಾರ್ಗದರ್ಶನದೊಂದಿಗೆ, ಈ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲು ನಾನು ಸಮಯ ತೆಗೆದುಕೊಂಡಿದ್ದೇನೆ. ಇಂಗ್ಲೆಂಡ್ ಕ್ರಿಕೆಟ್‌ಗೆ ಇದು ನಿಜವಾಗಿಯೂ ಪ್ರಮುಖ ಸಮಯ ಮತ್ತು ಮುಂಬರುವ ಸರಣಿಗೆ ತಯಾರಿ ನಡೆಸಲು ನಾನು ಸಂಪೂರ್ಣವಾಗಿ ಬದ್ಧನಾಗಲು ಬಯಸುತ್ತೇನೆ. ಬಿಡುವಿಲ್ಲದ ವೇಳಾಪಟ್ಟಿ ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ನಾನು ಈ ಅವಧಿಯಲ್ಲಿ ತಯಾರಿ ನಡೆಸಲು ಬಯಸುತ್ತಿದ್ದೇ. ಈ ಕಾರಣದಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ," ಎಂದು ಹ್ಯಾರಿ ಬ್ರೂಕ್‌ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದರು.