ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs KKR: ಸೋಲಿನಿಂದ ಹಲವು ಅನಗತ್ಯ ದಾಖಲೆ ಬರೆದ ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ತಂಡ ಸುನೀಲ್‌ ನರೈನ್‌ ಅವರ ಸ್ಪಿನ್‌ ಬಲೆಗೆ ಬಿದ್ದು ಕೇವಲ 103 ರನ್‌ ಬಾರಿಸಿತು. ಈ ಸಣ್ಣ ಮೊತ್ತವನ್ನು ಕೆಕೆಆರ್‌ 10.1 ಓವರ್‌ಗಳಲ್ಲಿ 107 ರನ್‌ ಬಾರಿಸಿ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಚೆನ್ನೈ ಪರ ಶಿವಂ ದುಬೆ 31* ರನ್‌ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರ್‌ ಎನಿಸಿಕೊಂಡರು.

ಸೋಲಿನಿಂದ ಹಲವು ಅನಗತ್ಯ ದಾಖಲೆ ಬರೆದ ಚೆನ್ನೈ ಸೂಪರ್‌ ಕಿಂಗ್ಸ್‌

Profile Abhilash BC Apr 12, 2025 7:03 AM

ಚೆನ್ನೈ: ಶುಕ್ರವಾರ ನಡೆದ ಐಪಿಎಲ್‌ನ(IPL 2025) 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೆಕೆಆರ್‌ ವಿರುದ್ಧ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌(CSK vs KKR) ತಂಡ ಸೋಲು ಕಾಣುವ ಮೂಲಕ ಹಲವು ಅನಪೇಕ್ಷಿತ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. 5 ಬಾರಿ ತಂಡವನ್ನು ಚಾಂಪಿಯನ್‌ ಮಾಡಿದ್ದ ಎಂ.ಎಸ್‌ ಧೋನಿ ತಂಡಕ್ಕೆ ಮತ್ತೆ ನಾಯಕನಾದರೂ ತಂಡ ಗೆಲುವಿನ ಹಳಿ ಏರಲು ವಿಫಲವಾಯಿತು. ಸದ್ಯ ಚೆನ್ನೈ ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಧೋನಿ(MS Dhoni) ಪಡೆಗೆ ಮುಂದಿನ ಪಂದ್ಯಗಳಲ್ಲಿ ಸತತ ಗೆಲುವು ಅನಿವಾರ್ಯ.

ಸತತ 5 ಸೋಲು

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಸತತವಾಗಿ 5 ಪಂದ್ಯಗಳಲ್ಲಿ ಸೋಲನುಭವಿಸಿತು. ಇದು ಮಾತ್ರವಲ್ಲದೆ ತವರಿನ ಚೆಪಾಕ್‌ ಮೈದಾನದಲ್ಲಿ ಮೊದಲ ಬಾರಿಗೆ ಮೂರು ಪಂದ್ಯ ಸೋತ ಅನಪೇಕ್ಷಿತ ದಾಖಲೆ ಬರೆಯಿತು.

ಚೆಪಾಕ್‌ನಲ್ಲಿ ಅತಿ ಕನಿಷ್ಠ ಮೊತ್ತ

ತವರಿನ ಚೆಪಾಕ್‌ ಮೈದಾನದಲ್ಲಿ ಇದುವರೆಗೆ ಉತ್ತಮ ದಾಖಲೆ ಹೊಂದಿದ್ದ ಚೆನ್ನೈ ತಂಡ ಈ ಬಾರಿ ಕೇವಲ 103 ರನ್‌ ಗಳಿಸುವ ಮೂಲಕ ಈ ಮೈದಾನದಲ್ಲಿ ಅತಿ ಕನಿಷ್ಠ ಮೊತ್ತ ದಾಖಲಿಸಿದ ಕೆಟ್ಟ ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿತು. 2019ರಲ್ಲಿ ಮುಂಬೈ ವಿರುದ್ಧ 109ರನ್‌ ಗಳಿಸಿದ್ದು ಚೆನ್ನೈ ತಂಡದ ಇದುವರೆಗೆ ಕನಿಷ್ಠ ರನ್‌ ಆಗಿತ್ತು.

ಇದನ್ನೂ ಓದಿ IPL 2025 Points Table: ಕೆಕೆಆರ್‌ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ

ಅತಿ ದೊಡ್ಡ ಸೋಲು

103 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್‌ 59 ಎಸೆತ ಬಾಕಿ ಇರುವಂತೆಯೇ ಗೆಲುವು ತನ್ನದಾಗಿಸಿಕೊಂಡಿತು. ಇದು ಚೆನ್ನೈ ತಂಡಕ್ಕೆ ಇದುವರೆಗಿನ ಐಪಿಎಲ್‌ ಇತಿಹಾಸದಲ್ಲಿ ಎಡಸತಗಳ ಆಧಾರದಲ್ಲಿ ಎದುರಾದ ಅತಿ ದೊಡ್ಡ ಸೋಲಾಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ತಂಡ ಸುನೀಲ್‌ ನರೈನ್‌ ಅವರ ಸ್ಪಿನ್‌ ಬಲೆಗೆ ಬಿದ್ದು ಕೇವಲ 103 ರನ್‌ ಬಾರಿಸಿತು. ಈ ಸಣ್ಣ ಮೊತ್ತವನ್ನು ಕೆಕೆಆರ್‌ 10.1 ಓವರ್‌ಗಳಲ್ಲಿ 107 ರನ್‌ ಬಾರಿಸಿ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಚೆನ್ನೈ ಪರ ಶಿವಂ ದುಬೆ 31* ರನ್‌ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರ್‌ ಎನಿಸಿಕೊಂಡರು.