Rowdy Janardhana: ʻನೋವುಂಡ ವ್ಯಕ್ತಿಯ ಜೀವನಚರಿತ್ರೆʼ ಹೇಳಲು ಬಂದ ವಿಜಯ್ ದೇವರಕೊಂಡ; ರಶ್ಮಿಕಾ ಮಂದಣ್ಣ ʻಆಲ್ ದಿ ಬೆಸ್ಟ್ʼ ಹೇಳಿದ್ದು ಹೀಗೆ
Rowdy Janardhana Update: ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ರವಿ ಕಿರಣ್ ಕೋಲಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ರೌಡಿ ಜನಾರ್ದನ' ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. 1980ರ ದಶಕದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ವಿಜಯ್ ರಕ್ತಸಿಕ್ತ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
-
ನಟ ವಿಜಯ್ ದೇವರಕೊಂಡ ಅವರು ಸಾಲು ಸಾಲು ಸೋಲುಗಳನ್ನು ಕಂಡಿದ್ದಾರೆ. ಸದ್ಯ ಅವರಿಗೆ ಒಂದು ಗೆಲುವಿನ ಅವಶ್ಯಕತೆ ಇದೆ. ಇದೀಗ ಅವರು ಸೈಲೆಂಟ್ ಆಗಿ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಈ ಚಿತ್ರಕ್ಕೆ ರೌಡಿ ಜನಾರ್ದನ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ 'ರಾಜಾ ವಾರು ರಾಣಿ ಗಾರು' ಚಿತ್ರದ ಮೂಲಕ ಹೆಸರು ಮಾಡಿದ್ದ ಪ್ರತಿಭಾವಂತ ನಿರ್ದೇಶಕ ರವಿ ಕಿರಣ್ ಕೋಲಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಕ್ತಸಿಕ್ತ ಹಾಗೂ ರಾ ಆಕ್ಷನ್ ಕಥಾಹಂದರ ಹೊಂದಿರುವ ಈ ಗ್ಲಿಂಪ್ಸ್, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ವಿಜಯ್ ದೇವರಕೊಂಡ ಅವರು ಈ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಸ್ಲಾಂಗ್ ಮತ್ತು ಮ್ಯಾನರಿಸಂ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ವಿಜಯ್ ದೇವರಕೊಂಡ ಪಾತ್ರ ಹೇಗಿದೆ?
ಗ್ಲಿಂಪ್ಸ್‌ನಲ್ಲಿ ವಿಜಯ್ ದೇವರಕೊಂಡ ಅವರು ರಕ್ತಸಿಕ್ತ ಮೈಕಟ್ಟು, ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿದ್ದು, ಅವರ ತೀಕ್ಷ್ಣ ಕಣ್ಣೋಟ ಮತ್ತು ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. 1980ರ ಕಾಲಘಟ್ಟದ ಪೂರ್ವ ಗೋದಾವರಿ ಜಿಲ್ಲೆಯ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದ್ದು, ವಿಜಯ್ ಅವರು ಈ ಚಿತ್ರಕ್ಕಾಗಿ ವಿಶೇಷವಾಗಿ ಗೋದಾವರಿ ಸ್ಲಾಂಗ್ ಬಳಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದ್ದಾರೆ.
Vijay Deverakonda: ಮತ್ತೆ ತೆರೆಮೇಲೆ ಒಂದಾಗಲಿದ್ದಾರೆ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ
ಈ ಚಿತ್ರಕ್ಕೆ ಆನೆಂಡ್ ಸಿ. ಚಂದ್ರನ್ ಅವರ ಛಾಯಾಗ್ರಹಣವಿದ್ದು, ಕ್ರಿಸ್ಟೋ ಕ್ಸೇವಿಯರ್ ಅವರ ಸಂಗೀತ ಮತ್ತು ಸುಪ್ರೀಂ ಸುಂದರ್ ಅವರ ಆಕ್ಷನ್ ಕೊರಿಯೋಗ್ರಫಿ ಮಾಡಲಿದ್ದಾರೆ. 'ರೌಡಿ ಜನಾರ್ದನ' ಸಿನಿಮಾ 2026ರ ಡಿಸೆಂಬರ್‌ನಲ್ಲಿ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಲಿದ್ದಾರೆ.
ರಶ್ಮಿಕಾ ಮಂದಣ್ಣ ಟ್ವೀಟ್
Let’s go! Lets go! Let’s goooo!!❤️🔥@TheDeverakonda https://t.co/RUmWmYULBy
— Rashmika Mandanna (@iamRashmika) December 22, 2025
ವಿಶ್ ಮಾಡಿದ ರಶ್ಮಿಕಾ ಮಂದಣ್ಣ
ರೌಡಿ ಜನಾರ್ದನ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು, ಲೆಟ್ಸ್ ಗೋ.. ಲೆಟ್ಸ್ ಗೋ.. ಲೆಟ್ಸ್ ಗೋ.. ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿಜಯ್ ದೇವರಕೊಂಡ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ. ಈ ಚಿತ್ರವನ್ನು ಗಾಯಗೊಂಡ ವ್ಯಕ್ತಿಯ ಜೀವನಚರಿತ್ರೆ ಎಂದು ವಿಜಯ್ ದೇವರಕೊಂಡ ಕರೆದಿದ್ದು, ಸರಿಯಾಗಿ ಒಂದು ವರ್ಷಕ್ಕೆ ಈ ಸಿನಿಮಾವನ್ನು ನಿಮ್ಮ ಮುಂದಿರಿಸಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.