ಜೂಲನ್ ಹಿಂದಿಕ್ಕಿ ವಿಶ್ವ ದಾಖಲೆ ಬರೆದ ದೀಪ್ತಿ ಶರ್ಮಾ
Deepti Sharma: ದೀಪ್ತಿ, ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಭಾರತದ ಟಿ20 ವಿಶ್ವಕಪ್ 2026 ರ ಆರಂಭಿಕ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದರು. ಆರು ಟೆಸ್ಟ್‌ಗಳಲ್ಲಿ 22 ವಿಕೆಟ್‌ಗಳು, 124 ಏಕದಿನ ಪಂದ್ಯಗಳಲ್ಲಿ 166 ವಿಕೆಟ್‌ಗಳು ಮತ್ತು ಈಗ 149 ಟಿ20ಐಗಳಲ್ಲಿ 168 ವಿಕೆಟ್‌ಗಳನ್ನು ಪಡೆದಿದ್ದಾರೆ.
Deepti Sharma -
ಲಾರ್ಡ್ಸ್, ಜೂ.29: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಕಂಡ ಭಾರತ, ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದಿಂದಲೇ ಹೊರಬಿದ್ದಿತು. ಆದರೆ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು.
ಈ ದಾಖಲೆ ಬರೆಯಲು ದೀಪ್ತಿಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು, ಆಸ್ಟ್ರೇಲಿಯಾದ ಬ್ಯಾಟಿಂಗ್ ಇನಿಂಗ್ಸ್‌ನ 10 ನೇ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರನ್ನು ಔಟ್ ಮಾಡುವ ಮೂಲಕ ದೀಪ್ತಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ಅವರು ಜೂಲನ್ ಗೋಸ್ವಾಮಿ(355) ಜಂಟಿ ದಾಖಲೆ ಹೊಂದಿದ್ದರು. ಇದೀಗ ದೀಪ್ತಿ 279 ಪಂದ್ಯಗಳಿಂದ 356* ವಿಕೆಟ್‌ಗಳನ್ನು ಕಲೆ ಹಾಕಿದ್ದಾರೆ.
ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಭಾರತದ ಟಿ20 ವಿಶ್ವಕಪ್ 2026 ರ ಆರಂಭಿಕ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದರು. ಆರು ಟೆಸ್ಟ್‌ಗಳಲ್ಲಿ 22 ವಿಕೆಟ್‌ಗಳು, 124 ಏಕದಿನ ಪಂದ್ಯಗಳಲ್ಲಿ 166 ವಿಕೆಟ್‌ಗಳು ಮತ್ತು ಈಗ 149 ಟಿ20ಐಗಳಲ್ಲಿ 168 ವಿಕೆಟ್‌ಗಳನ್ನು ಪಡೆದಿದ್ದಾರೆ.
ಟಿ20 ವಿಶ್ವಕಪ್ ನಿರ್ಗಮನ; ಹರ್ಮನ್‌ಪ್ರೀತ್ ನಾಯಕತ್ವ ಭವಿಷ್ಯದ ಬಗ್ಗೆ ಕೋಚ್ ಮಹತ್ವದ ಹೇಳಿಕೆ
ಮತ್ತೊಂದೆಡೆ, ಜೂಲನ್ ಗೋಸ್ವಾಮಿ 284 ಪಂದ್ಯಗಳಲ್ಲಿ 355 ವಿಕೆಟ್‌ಗಳೊಂದಿಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು 12 ಟೆಸ್ಟ್‌ಗಳಲ್ಲಿ 44 ಬ್ಯಾಟ್ಸ್‌ಮನ್‌ಗಳನ್ನು, 204 ಏಕದಿನ ಪಂದ್ಯಗಳಲ್ಲಿ 255 ಮತ್ತು 68 ಟಿ20ಐಗಳಲ್ಲಿ 56 ವಿಕೆಟ್‌ಗಳನ್ನು ಕಬಳಿಸಿದರು.
🚨 𝗠𝗼𝗻𝘂𝗺𝗲𝗻𝘁𝗮𝗹 𝗠𝗶𝗹𝗲𝘀𝘁𝗼𝗻𝗲 🚨
— BCCI Women (@BCCIWomen) June 28, 2026
Deepti Sharma now stands at the summit of the wicket-taking charts in Women's International cricket 👏👏
Take. A. Bow 🙇♀️
Updates ▶️ https://t.co/mWgNXcEkp0#TeamIndia | #T20WorldCup | #WomenInBlue | #AUSvIND | @Deepti_Sharma06 pic.twitter.com/VPM26SniP6
ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯರ ಪಟ್ಟಿಯಲ್ಲಿ, ದೀಪ್ತಿ ಮತ್ತು ಜೂಲನ್ ನಂತರ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ (336*), ಇಂಗ್ಲೆಂಡ್‌ನ ಕ್ಯಾಥರೀನ್ ಸ್ಕಿವರ್-ಬ್ರಂಟ್ (335), ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ (333*) ಮತ್ತು ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ (323*) ಇದ್ದಾರೆ.
2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಟೂರ್ನಮೆಂಟ್‌ನ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದ ದೀಪ್ತಿ, ಈಗಾಗಲೇ ಮಹಿಳಾ ಟಿ20ಐಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಅವರ ಬಳಿಕ ಥೈಲ್ಯಾಂಡ್ ಸ್ಪಿನ್ನರ್ ತಿಪಚ್ಚ ಪುಟ್ಟಾವೊಂಗ್(165) ಎರಡನೇ ಸ್ಥಾನದಲ್ಲಿದಾರೆ.