ಪಲಾಶ್ ಮುಚ್ಚಲ್ ಅಕ್ರಮ ಸಂಬಂಧ; ಸ್ಮೃತಿ ಮಂಧನಾ ಮದುವೆ ರದ್ದು ಸಾಧ್ಯತೆ!
Palash Muchhal: ಹರಿದಾಡುತ್ತಿರುವ ವದಂತಿಗಳ ಬಗ್ಗೆ ಎರಡೂ ಕುಟುಂಬಗಳು ಇನ್ನೂ ಪ್ರತಿಕ್ರಿಯಿಸಿಲ್ಲ. ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು, ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ವಾಟ್ಸಾಪ್ ಚಾಟ್‌ನಲ್ಲಿವೆ.
ಮಾಜಿ ಪ್ರೇಯಸಿಯೊಂದಿಗೆ ಪಾಲಶ್ ಮುಚ್ಚಲ್ -
ಮುಂಬಯಿ, ನ.26: ತಂದೆಗೆ ಅನಾರೋಗ್ಯ ಹಿನ್ನೆಲೆ ಭಾನುವಾರ ನಡೆಯಬೇಕಿದ್ದ ಟೀಂ ಇಂಡಿಯಾದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ(Smriti Mandhana) ಮುಂದೂಡಿಕೆ ಬೆನ್ನಲ್ಲೇ ಅವರ ಭಾವಿ ಪತಿ ಪಾಲಶ್ ಮುಚ್ಚಲ್(Palash Muchhal) ಬಗ್ಗೆ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದೆ. ಪಲಾಶ್ ಅವರ ಅಕ್ರಮ ಸಂಬಂಧದ ವದಂತಿಗಳು ಕೇಳಿಬಂದಿದೆ.
ಹೌದು, ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ವಾಟ್ಸ್‌ಅಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ. ಮೇರಿ ಡಿ ಕೋಸ್ಟಾ ಎಂಬ ಯುವತಿ ಪಲಾಶ್ ಜೊತೆ ನಡೆಸಿದ ಚಾಟ್‌ಗಳ ಹಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಸ್ಕ್ರೀನ್‌ಶಾಟ್‌ಗಳ ಸತ್ಯಾಸತ್ಯತೆಯನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಸ್ಕ್ರೀನ್‌ಶಾಟ್‌ಗಳು ಪಲಾಶ್ ಅವರ ಹೆಸರು ಮತ್ತು ಐಡಿಯನ್ನು ತೋರಿಸಿವೆ. ಡಿ'ಕೋಸ್ಟಾ ತಮ್ಮ ಪ್ರೊಫೈಲ್ ಅನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ ಆದರೆ ಊಹಾಪೋಹಗಳ ಪ್ರಕಾರ ಅವರು ವೃತ್ತಿಯಲ್ಲಿ ನೃತ್ಯ ಸಂಯೋಜಕರಾಗಿದ್ದಾರೆ.
ಹರಿದಾಡುತ್ತಿರುವ ವದಂತಿಗಳ ಬಗ್ಗೆ ಎರಡೂ ಕುಟುಂಬಗಳು ಇನ್ನೂ ಪ್ರತಿಕ್ರಿಯಿಸಿಲ್ಲ. ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು, ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ವಾಟ್ಸಾಪ್ ಚಾಟ್‌ನಲ್ಲಿವೆ.
ಇದನ್ನೂ ಓದಿ Smriti Mandhana: ತಂದೆ ಬಳಿಕ ಸ್ಮೃತಿ ಭಾವಿ ಪತಿಗೂ ಅನಾರೋಗ್ಯ!
ಕೆಲ ವರದಿ ಪ್ರಕಾರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಲಾಶ್ ಅವರ ದ್ರೋಹವನ್ನು ಸ್ಮೃತಿ ತಂದೆ ಕಂಡುಹಿಡಿದರು. ನಂತರ ತೀವ್ರ ವಾದ ನಡೆಯಿತು. ಇದು ಅವರಿಗೆ ದೊಡ್ಡ ಹೃದಯಾಘಾತಕ್ಕೆ ಕಾರಣವಾಯಿತು ಎಂದು ಆರೋಪಿಸಲಾಗಿದೆ.
Rumour: Palash Muchhal allegedly cheated on Smriti Mandhana with a choreographer just the night before their wedding. were as he reportedly ran away on the wedding day. Smriti deleted all pre-wedding posts, it’s really terrible for Smriti💔
— VickyTweets (@Vickytweets0330) November 25, 2025
"Smriti Mandhana"🥹❤️ pic.twitter.com/SvI87vuEb8
ಕೇವಲ ವಾಟ್ಸಾಪ್ ಚಾಟ್ ಮಾತ್ರವಲ್ಲದೆ ಈ ಹಿಂದೆ ಪಲಾಶ್ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿದ ಮಾತು ಆಕೆಯ ಜತೆ ಬಹಳ ಆತ್ಮೀಯವಾಗಿರುವ ಫೋಟೊಗಳು ಕೂಡ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದೆ.
ಪೋಸ್ಟ್ ಅಳಿಸಿ ಹಾಕಿದ ಸ್ಮೃತಿ
ಪಾಲಶ್ ಮುಚ್ಚಲ್ ಅಕ್ರಮ ಸಂಬಂಧ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಮಂಧನಾ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೋಗಳನ್ನು ಸ್ಮೃತಿ ಹಂಚಿಕೊಂಡಿದ್ದರು. ಆದರೆ ಈಗ ಅದೆಲ್ಲವನ್ನೂ ಅಳಿಸಿ ಹಾಕಿದ್ದು, ಚರ್ಚೆಗೆ ಗ್ರಾಸವಾಗಿದೆ. ಇವರ ಜತೆಗೆ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾದ ಇತರ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗ್ಸ್, ಶ್ರೇಯಾಂಕಾ ಪಾಟೀಲ್ ಸೇರಿ ಹಲವು ಸ್ನೇಹಿತೆಯರು ಸ್ಮೃತಿ ನಿಶ್ಚಿತಾರ್ಥದ ವಿಷಯ ಬಹಿರಂಗಪಡಿಸಲು ಮಾಡಿದ್ದ ವಿಡಿಯೋವನ್ನು ತಮ್ಮ ಖಾತೆಗಳಿಂದ ಡಿಲೀಟ್ ಮಾಡಿದ್ದಾರೆ.
Palash Muchhal and his ex Birva Shah👀 pic.twitter.com/0nVRaia3CQ https://t.co/T8kNaz2REU
— Mention Cricket (@MentionCricket) November 25, 2025
ಆಸ್ಪತ್ರೆಯಿಂದ ತಂದೆ ಡಿಸ್ಚಾರ್ಜ್
ಇಂಡಿಯಾ ಟಿವಿ ವರದಿಯ ಪ್ರಕಾರ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರನ್ನು ನವೆಂಬರ್ 25 ರಂದುಸರ್ವಿತ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಆದಾಗ್ಯೂ, ಅವರ ಆರೋಗ್ಯ ಸುಧಾರಿಸುತ್ತಿದ್ದರೂ, ವಿವಾಹ ಯೋಜನೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಭಾನುವಾರ (ನವೆಂಬರ್ 23) ಹೃದಯಾಘಾತದಂತಹ ಲಕ್ಷಣಗಳು ಕಂಡುಬಂದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಸಾಂಗ್ಲಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶ್ರೀನಿವಾಸ್ ಮಂಧನಾ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ, ದೈಹಿಕ ಅಸ್ವಸ್ಥತೆಯಿಂದ ಪಲಾಶ್ ಮುಚ್ಚಲ್ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸುಧಾರಿಸಿದ ನಂತರ ಪಲಾಶ್ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.